ಅಣ್ಣಾಮಲೈ ಪತ್ನಿ ಆಸ್ತಿ ಕೇಳಿ ತ.ಲೆತಿರುಗಿದ ಬಿದ್ದ ಜನರು; ಈಕೆ ಯಾವ ಅಧಿಕಾರಿ ಗೊ ತ್ತಾ

 | 
Gu

ಕರ್ನಾಟಕ ರಾಜ್ಯ ಕಂಡ ದಕ್ಷ ಅಧಿಕಾರಿಗಳಲ್ಲಿ ಅಣ್ಣಾಮಲೈ ಕೂಡ ಒಬ್ಬರು ಹೌದು ಈ ಸಲದ ಲೋಕ ಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಆಗಿರುವ ಇವರು ಬಿಜೆಪಿ ಪಕ್ಷದಲ್ಲಿ ಗುರುತಿಸಿ ಕೊಂಡಿದ್ದಾರೆ. ಕೊಯಮತ್ತೂರು ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿದಿರುವ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಚುನಾವಣಾ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಿದ್ದಾರೆ. ಅವರು ಒದಗಿಸಿರುವ ಮಾಹಿತಿ ಪ್ರಕಾರ ಅವರ ಬಳಿ 1.48 ಕೋಟಿ ರೂ ಮೊತ್ತದ ಆಸ್ತಿ ಇದೆ. 

ಬೆಂಗಳೂರಿನಲ್ಲಿ ಸ್ವಂತ ಕಂಪೆನಿ ಹೊಂದಿರುವ ಪತ್ನಿ ಅಖಿಲಾ ಸ್ವಾಮಿನಾಥನ್, ಅವರಿಗಿಂತಲೂ ಹೆಚ್ಚು ಸಂಪತ್ತು ಹೊಂದಿದ್ದಾರೆ. ಟೌನ್ ಹಾಲ್‌ನಲ್ಲಿರುವ ಕೊನಿಯಮ್ಮನ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದ ಅಣ್ಣಾಮಲೈ, ಬಳಿಕ ಬೆಂಬಲಿಗರ ಜತೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆ ವನಾತಿ ಶ್ರೀನಿವಾಸನ್ ಅವರು ನಾಮಪತ್ರ ಸಲ್ಲಿಸುವ ವೇಳೆ ಅಣ್ಣಾಮಲೈ ಜತೆಗಿದ್ದರು.

ಇನ್ನು ಅಣ್ಣಾಮಲೈ ಅವರು ತಮ್ಮ ಬಳಿ 1.48 ಕೋಟಿ ರೂ ಮೌಲ್ಯದ ಸಂಪತ್ತು ಇರುವುದಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಮಾಹಿತಿ ನೀಡಿದ್ದಾರೆ. ಇದರಲ್ಲಿ 1.12 ಕೋಟಿ ರೂ ಸ್ಥಿರ ಆಸ್ತಿ ಇದೆ. ತಮ್ಮ ಬಳಿ 52 ಎಕರೆ ಜಮೀನು ಇದ್ದು, ಇದಲ್ಲಿ ಬಹುಪಾಲು ಭೂಮಿ ಕರೂರ್ ಜಿಲ್ಲೆಯಲ್ಲಿನ ತಮ್ಮ ಮೂಲ ಹಳ್ಳಿಯಲ್ಲಿ ಇದೆ ಎಂದು ತಿಳಿಸಿದ್ದಾರೆ. 

5 ಲಕ್ಷ ರೂ ಮೌಲ್ಯದ ಹೊಂಡಾ ಸಿಟಿ ಕಾರು ಸೇರಿದಂತೆ 36.04 ಲಕ್ಷ ರೂ ಚರ ಆಸ್ತಿ ಅವರ ಬಳಿ ಇದೆ. ಅಫಿಡವಿಟ್ ಪ್ರಕಾರ, ಅಣ್ಣಾಮಲೈ ಅವರ ಪತ್ನಿ ಅಖಿಲಾ ಸ್ವಾಮಿನಾಥನ್ ಅವರು 2.3 ಕೋಟಿ ರೂ ಮೌಲ್ಯದ ಚರ ಆಸ್ತಿ ಹಾಗೂ 53 ಲಕ್ಷ ರೂ ಮೊತ್ತದ ಸ್ಥಿರ ಆಸ್ತಿ ಹೊಂದಿದ್ದಾರೆ. 2021ರ ವಿಧಾನಸಭೆ ಚುನಾವಣೆ ವೇಳೆ ಅಣ್ಣಾಮಲೈ ಅವರು ತಮ್ಮ ಒಟ್ಟು ಆಸ್ತಿ ಮೌಲ್ಯ 2.90 ಕೋಟಿ ರೂ ಎಂದು ಘೋಷಣೆ ಮಾಡಿದ್ದರು. 

ಇದರಲ್ಲಿ ಪತ್ನಿ ಅಖಿಲಾ ಅವರ 94 ಲಕ್ಷ ರೂ ಚರ ಹಾಗೂ 50 ಲಕ್ಷ ರೂ ಸ್ಥಿರ ಆಸ್ತಿ ಸೇರಿತ್ತು. ತಮ್ಮ ವಿರುದ್ಧ 26 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ ಎಂದು ಅಣ್ಣಾಮಲೈ ತಿಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.