ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಡಿವೋರ್ಸ್; ಕನ್ನಡಿಗರಿಗೆ ಕಹಿಸುದ್ದಿ

 | 
Uu

ಕಾಲಿವುಡ್ ನಟ ಜಯಂ ರವಿ ಸದಾ ಸಿನಿಮಾ ವಿಚಾರವಾಗಿ ಸುದ್ದಿಯಾಗಿದ್ದರು. ಈಗ ವೈಯಕ್ತಿಕ ಬದುಕಿನ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. ಜಯಂ ರವಿ ದಾಂಪತ್ಯ ಬದುಕಿನಲ್ಲಿ ಬಿರುಕು ಮೂಡಿದೆ. ಇಬ್ಬರೂ ಡಿವೋರ್ಸ್‌ಗೆ ಮುಂದಾಗಿದ್ದಾರೆ ಎಂಬ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕಾಲಿವುಡ್ ನಟ ಜಯಂ ರವಿ ಮತ್ತು ಆರತಿ ರವಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆರತಿ ರವಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಗಂಡ ಜಯಂ ರವಿ ಜೊತೆ ಇರುವ ಫೋಟೊಗಳನ್ನು ಡಿಲೀಟ್ ಮಾಡಿರುವುದು ಈ ಅನುಮಾನಕ್ಕೆ ಕಾರಣವಾಗಿದೆ. ತನ್ನ ಹೆಸರಿನ ಜೊತೆಯಿದ್ದ ಪತಿಯ ಹೆಸರು ಜಯಂ ರವಿ ಎಂಬುದನ್ನು ಕೂಡ ತೆಗೆದು ಹಾಕಿದ್ದಾರೆ. 

ಈ ನಡೆ ಡಿವೋರ್ಸ್ ಸುದ್ದಿಗೆ ಪುಷ್ಠಿ ನೀಡಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡುತ್ತಾರಾ ಎಂದು ಕಾಯಬೇಕಿದೆ. ಇಬ್ಬರು ಬೇರ್ಪಡುವ ಬಗ್ಗೆ ವದಂತಿ ಹಬ್ಬಿದ್ದು. ಆರತಿ ಅವರ ಹೊಸ ಇನ್‌ಸ್ಟಾಗ್ರಾಮ್ ಅಪ್‌ಡೇಟ್ ಅವರ ಅಭಿಮಾನಿಗಳನ್ನು ಚಿಂತೆಗೀಡು ಮಾಡಿದೆ. ಜಯಂ ರವಿ ಅವರ ಪತ್ನಿ ಆರತಿ ತಮ್ಮ ಇನ್‌ಸ್ಟಾಗ್ರಾಂ ಬಯೋವನ್ನು ಉಳಿಸಿಕೊಂಡಿದ್ದಾರೆ.

 ತಮಿಳು ಕಿರುತೆರೆಯ ಪ್ರಖ್ಯಾತ ನಿರ್ಮಾಪಕರಾದ ಸುಜಾತಾ ವಿಜಯ್ ಕುಮಾರ್ ಅವರ ಪುತ್ರಿ ಆರತಿ. ಪರಸ್ಪರ ಪ್ರೀತಿಸಿ ಜಯಂ ರವಿ ಹಾಗೂ ಆರತಿ 2009ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಜಯಂ ಮತ್ತು ಅವರ ಪತ್ನಿ ಆರತಿ ರವಿ ನಡುವೆ ಏನೋ ಸರಿ ಇಲ್ಲ ಎಂಬ ಊಹಾಪೋಹವಿದೆ. 

ಆರತಿ ತಮ್ಮ ಸಾಮಾಜಿಕ ಖಾತೆಯಿಂದ ತಮ್ಮ ಮದುವೆ ಮತ್ತು ಜಯಂ ಅವರ ಇತರ ಫೊಟೋಗಳನ್ನು ಡಿಲೀಟ್ ಮಾಡುವ ಮೂಲಕ ಈ ಸುದ್ದಿಗೆ ಕಾರಣರಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.