ವಿಜಯ್ ಸೂರ್ಯ ದಂಪತಿಗಳಿಂದ ಮತ್ತೊಂದು ಸಿಹಿಸುದ್ದಿ, ಇಬ್ಬರು ಮಕ್ಕಳ ಬೆನ್ನಲ್ಲೇ ಮ.ತ್ತೊಂದು ಆಗಮನ

 | 
Hd

ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಮಾಡಿಕೊಂಡಿರುವ ನಟ ವಿಜಯ್ ಸೂರ್ಯ ಈಗ ನಮ್ಮ ಲಚ್ಚಿ ಧಾರಾವಾಹಿಯ ಸಂಗಮ್ ಆಗಿದ್ದಾರೆ. ವಿಜಯ್ ಸೂರ್ಯ ಪಕ್ಕಾ ಫ್ಯಾಮಿಲಿ ಮ್ಯಾನ್. ವಿಜಯ್ ಅವರು ಅಮ್ಮ ಹುಡುಕಿದ್ದ ಹುಡುಗಿ ಜೊತೆ ಮದುವೆ ಆಗಿ, ಇಬ್ಬರು ಗಂಡು ಮಕ್ಕಳ ತಂದೆ ಕೂಡ ಆಗಿದ್ದಾರೆ. ಈಗ ಅವರು ಎರಡನೇ ಮಗುವಿನ ಫೋಟೋವನ್ನು ರಿವೀಲ್ ಮಾಡಿದ್ದಾರೆ. 

2020ರ ಫೆಬ್ರವರಿ 14ರಂದು ವಿಜಯ್ ಸೂರ್ಯ, ಚೈತ್ರಾ ಶ್ರೀನಿವಾಸ್ ಅವರಿಗೆ ಗಂಡು ಮಗು ಜನಿಸಿತ್ತು. ಕಳೆದ ಜೂನ್ ತಿಂಗಳಲ್ಲಿ ಎರಡನೇ ಮಗು ಜನಿಸಿದೆ. ಮೊದಲ ಮಗನಿಗೆ ಸೋಹನ್ ಸೂರ್ಯ ಎಂದು ಹೆಸರಿಟ್ಟಿದ್ದರು. ಎರಡನೇ ಮಗುವಿಗೆ ಕಾರ್ತಿಕೇಯ ಸೂರ್ಯ ಎಂದು ನಾಮಕರಣ ಮಾಡಿದ್ದರು. ಇಷ್ಟುದಿನವಾದರೂ ವಿಜಯ್ ಸೂರ್ಯ ಅವರು ಎರಡನೇ ಮಗನ ಫೋಟೋವನ್ನು ರಿವೀಲ್ ಮಾಡಿರಲಿಲ್ಲ.

ಪ್ರೇಮಿಗಳ ದಿನದಂದು ವಿಜಯ್ ಸೂರ್ಯ ಅವರು ಇಬ್ಬರು ಮಕ್ಕಳು, ಮುದ್ದಿನ ಪತ್ನಿಯ ಜೊತೆಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಾರ್ತಿಕೇಯ ಹುಟ್ಟುವ ಸಮಯದಲ್ಲಿ ವಿಜಯ್ ಅವರು ತೆಲುಗಿನ ಧಾರಾವಾಹಿಯಲ್ಲಿಯೂ ನಟಿಸುತ್ತಿದ್ದರು. ಹೀಗಾಗಿ ಅವರು ಬೆಂಗಳೂರು, ಹೈದರಾಬಾದ್‌ ಎಂದು ಸೀರಿಯಲ್ ಶೂಟಿಂಗ್ ಮಾಡುತ್ತಿದ್ದರು. ಹೈದರಾಬಾದ್‌ನಲ್ಲಿ ವಿಜಯ್ ಸೂರ್ಯ ಅವರು ‘ಕೃಷ್ಣಮ್ಮ ಕಲ್ಪಿಂಡಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. 

ಮಗ ಹುಟ್ಟಿದ ಸಮಯದಲ್ಲಿ ಅವರು ಬೆಂಗಳೂರಿನಲ್ಲಿ ಇರಲಿಲ್ಲ. ಸದ್ಯ ವಿಜಯ್ ಸೂರ್ಯ ಅವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ನಮ್ಮ ಲಚ್ಚಿ’ ಧಾರಾವಾಹಿಯಲ್ಲಿ ಹೀರೋ ಸಂಗಮ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಐಶ್ವರ್ಯಾ ಸಿಂಧೋಗಿ, ನೇಹಾ ರಾಮಕೃಷ್ಣ ಕೂಡ ನಟಿಸುತ್ತಿದ್ದಾರೆ. ಈ ಸೀರಿಯಲ್‌ಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.