ಮತ್ತೊಂದು ಲವ್ ಜಿಹಾದ್; ಹಿಂದು ಹೆಣ್ಣು‌ಮಕ್ಕಳ ಮೇಲೆ ಮತ್ತಷ್ಟು ಅಟ್ಯಾ.ಕ್

 | 
Ju

ಸವದತ್ತಿಯ ವಿವಾಹಿತೆಯೊಬ್ಬರನ್ನು ಕೆಲಸ ಕೊಡಿಸುವ ಆಮಿಷವೊಡ್ಡಿ ತನ್ನ ಮನೆಗೆ ಕರೆದುಕೊಂಡು ಬಂದು ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿ ಮತ್ತು ಆತನ ಪತ್ನಿ ಸೇರಿದಂತೆ ಏಳು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಮಹಿಳೆಯ ಅಶ್ಲೀಲ ಫೋಟೋಗಳನ್ನು ಇರಿಸಿಕೊಂಡು ಇಸ್ಲಾಂಗೆ ಮತಾಂತರವಾಗುವಂತೆ ಬ್ಲ್ಯಾಕ್ ಮೇಲ್ ಮಾಡಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಸಂತ್ರಸ್ತ ಮಹಿಳೆ ಮುನವಳ್ಳಿಯಲ್ಲಿ ವಾಸವಾಗಿದ್ದು, ಆಕೆಯ ಪತಿ ಅಲ್ಲೇ ಕಿರಾಣಿ ಅಂಗಡಿ ನಡೆಸುತ್ತಿದ್ದರು. ಪತಿ ಅಂಗಡಿಯಲ್ಲಿ ಇಲ್ಲದಿದ್ದಾಗ ಮಹಿಳೆ ಅಂಗಡಿಯ ವ್ಯಾಪಾರ -ವಹಿವಾಟು ನೋಡಿಕೊಳ್ಳುತ್ತಿದ್ದರು. ಈ ವೇಳೆ ಆರೋಪಿ ರಫೀಕ್‌ ಬೇಪಾರಿ ಮಹಿಳೆಯನ್ನು ಪರಿಚಯ ಮಾಡಿಕೊಂಡು ಆಕೆಗೆ ಕೆಲಸ ಕೊಡಿಸುವುದಾಗಿ ನಂಬಿಸಿ, 2023ರಲ್ಲಿ ಬೆಳಗಾವಿಯ ತನ್ನ ಮನೆಗೆ ಕರೆತಂದಿದ್ದಾನೆ. 

ಅಲ್ಲಿ ಆಕೆಯನ್ನು ತನ್ನ ನಿಯಂತ್ರಣದಲ್ಲಿ ಇರಿಸಿಕೊಂಡು ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ತಾವು ಹೇಳಿದ್ದನ್ನು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಬಳಿಕ ಹೆಂಡತಿ ಎದುರಿನಲ್ಲಿಯೇ ಅತ್ಯಾಚಾರ ಎಸಗಿದ್ದಾನೆ. ಈ ಕೃತ್ಯಕ್ಕೆ ಆರೋಪಿ ರಫೀಕ್‌ಗೆ ಆತನ ಪತ್ನಿ ಕೌಸರ್‌ ಸೇರಿದಂತೆ ಮತ್ತೆ ಆರು ಜನರು ಸಾಥ್‌ ನೀಡಿದ್ದಾರೆ. ಮಹಿಳೆಯ ಖಾಸಗಿ ಫೋಟೋಗಳನ್ನು ಸೆರೆ ಹಿಡಿದು ಬ್ಲ್ಯಾಕ್‌ ಮೇಲ್‌ ಮಾಡಿ ಮತಾಂತರಗೊಳ್ಳುವಂತೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.

ಹಿಂದೂ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರವಾಗಬೇಕು, ಇಲ್ಲವಾದಲ್ಲಿ ಫೋಟೋ ವೈರಲ್‌ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಬಲವಂತದಿಂದ ತನಗೆ ಬುರ್ಖಾ ಧರಿಸುವಂತೆ ಮಾಡಿ ಹಿಂಸಿಸಿದ್ದಾರೆ. ಕುಂಕುಮ ಇರಿಸಬಾರದು, ದಿನಕ್ಕೆ ಐದು ಬಾರಿ ನಮಾಜ್ ಮಾಡಬೇಕು ಎಂದು ಕಿರುಕುಳ ನೀಡಿದ್ದಾರೆ, ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.