ಬಿಗ್ ಬಾಸ್ ಮನೆಗೆ ಮತ್ತೊಂದು ವೈಲ್ಡ್ ಕಾರ್ಡ್ ಎಂಟ್ರಿ, ತ.ಲೆಕೆಳಗಾದ ಸ್ಪರ್ಧಿಗಳು

 | 
ಕಿ

ಬಿಗ್ ಬಾಸ್‌ ಕಿರುತೆರೆ ಇತಿಹಾಸದಲ್ಲಿ ಅತೀ ಹೆಚ್ಚು ಜನಪ್ರಿಯವಾದ ರಿಯಾಲಿಟಿ ಶೋ ಅಂದ್ರೆ ತಪ್ಪಾಗಲ್ಲ. ಎಲ್ಲಾ ಭಾಷೆಗಳಲ್ಲೂ ಬಿಗ್‌ಬಾಸ್‌ ರಿಯಾಲಿಟಿ ಶೋ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಕನ್ನಡದ ಬಿಗ್‌ ಬಾಸ್‌ ಮನೆಗೆ ಇತ್ತೀಚೆಗೆ ಇಬ್ಬರು ವೈಲ್ಡ್‌ ಕಾರ್ಡ್‌ ಎಂಟ್ರಿಯಾಗಿದ್ದರು.

ಇದೀಗ ಹಿಂದಿ ಬಿಗ್‌ಬಾಸ್‌ 17ನೇ ಸೀಸನ್‌ನಲ್ಲಿ ಮತ್ತೊಂದು ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ. ಮತ್ತೊಬ್ಬ ಸೆಲೆಬ್ರಿಟಿ ದೊಡ್ಮನೆ ಸೇರೋದು ಕನ್ಫರ್ಮ್‌ ಆಗಿದೆ.ಮಾಡೆಲ್‌ ಹಾಗೂ ಸೋಷಿಯಲ್ ಮಿಡಿಯಾದಲ್ಲಿ ಸೆನ್ಸೆಷನ್‌ ಆಗಿರೋ ಆಯೇಶಾ ಖಾನ್ ಎಂಟ್ರಿಯಾಗುತ್ತಿದ್ದಾರೆ.ಕಾಮಿಡಿಯನ್ ಮುನಾವರ್ ಫಾರುಕಿ ಅವರ ಮಾಜಿ ಗೆಳತಿ ಎಂದು ಹೇಳಿಕೊಂಡಿರುವ ಆಯೇಶಾ ಖಾನ್ ಈ ವಾರ ವೈಲ್ಡ್ ಕಾರ್ಡ್ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾರೆ.

ಈ ಹಿಂದೆ ಆಯೇಶಾ ಖಾನ್ ಸಾಕಷ್ಟು ಬಾರಿ ಸ್ಯಾಂಡ್‌‌ಅಪ್‌ ಕಾಮಿಡಿಯನ್‌ ಮುನಾವರ್‌ ಫಾರುಕಿ ಬಗ್ಗೆ ಆರೋಪಗಳನ್ನು ಮಾಡಿದ್ದರು.ಹೀಗಾಗಿ ಈ ಮಾಡೆಲ್‌ ದೊಡ್ಮನೆ ಎಂಟ್ರಿಯಾದಮೇಲೆ ಏನೆಲ್ಲಾ ಆಗಬಹುದು ಅಂತ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಆಯೇಶಾ ಖಾನ್ ಈ ಕಾರ್ಯಕ್ರಮಕ್ಕೆ ಬರುತ್ತಿರುವ ನಾಲ್ಕನೇ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿಕೊಡಲಿದ್ದಾರೆ. ಈ ಹಿಂದೆ ಸಾಕಷ್ಟು ಬಾರಿ ಆಯೇಶಾ ಖಾನ್‌ ತಾನು ಅವರ ಮಾಜಿ ಗರ್ಲ್‌ಫ್ರೆಂಡ್ ಎಂದು ಹೇಳಿಕೊಂಡಿದ್ದಾರೆ.ಜೊತೆಗೆ ಮುನಾವರ್ ಮುಖವಾಡ ಕಳಚುತ್ತೇನೆ ಎಂದು ಬಹಿರಂಗವಾಹಿ ಸವಾಲು ಹಾಕಿದ್ದಾರೆ. ಆತ ತನ್ನ ಬಳಿ ಕ್ಷಮೆ ಕೇಳಬೇಕು. ಅದೇ ಕಾರಣಕ್ಕೆ ನಾನು ಬಿಗ್ ಬಾಸ್ ಮನೆಗೆ ಹೋಗುತ್ತಿದ್ದೇನೆ ಎಂದಿದ್ದಾರೆ. ಇನ್ಮುಂದೆ ಅಸಲಿ ಆಟ ಶುರು ಎಂದಿದ್ದಾರೆ ಬಿಗ್ಬಾಸ್ ಅಭಿಮಾನಿಗಳು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.