ಬಾಲ್ಯದಲ್ಲಿ ಅಪ್ಪನ ಜೊತೆ ಆದ ಕಹಿ ಘಟನೆಯಿಂದ ಇವತ್ತಿಗೂ ಮದುವೆಯಾಗದೆ ಕೂತಿದ್ದೇನೆ: ಅನುಪಮಾ ಗೌಡ

ಮನುಷ್ಯ ಅಂದಮೇಲೆ ಜೀವನದಲ್ಲಿ ಏಳು-ಬೀಳು, ಕಷ್ಟ-ಸುಖ ಇದ್ದಿದ್ದೆ. ಪ್ರತಿಯೊಬ್ಬರ ಜೀವನದಲ್ಲೂ ಕಹಿ ಅನುಭವಗಳಾಗಿರುತ್ತದೆ. ಅದೇ ರೀತಿ ನಿರೂಪಕಿ ಅನುಪಮಾ ಗೌಡ ಅವರು ಕೂಡ ತಮ್ಮ ಬಾಲ್ಯದ ದಿನಗಳನ್ನೆಲ್ಲಾ ಬರೀ ಕಷ್ಟದಲ್ಲೇ ಕಳೆದಿದ್ದಾರೆ. ಕಿರುತೆರೆ ರಿಯಾಲಿಟಿ ಶೋಗಳ ನಿರೂಪಣೆಯಲ್ಲಿ ಸಖತ್ ಬ್ಯುಸಿಯಾಗಿರುವ ಅನುಪಮಾ ಗೌಡ, ಸದ್ಯದ ಮಟ್ಟಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ಆದರೆ ಅವರು ಬಾಲ್ಯದಲ್ಲಿ, ಎದುರಿಸಿದ ಹಲವು ಕಷ್ಟದ ಸಂದರ್ಭಗಳನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೇ ಯಾರದ್ದೋ ತಪ್ಪಿಗೆ ಅನುಪಮಾ ಅವರ ತಂದೆಯನ್ನು ಪೊಲೀಸ್‌ನವರು ಅರೆಸ್ಟ್ ಮಾಡಿದ್ದರಂತೆ. ಆ ಬಗ್ಗೆ ಅನುಪಮಾ ಗೌಡ ಬೇಸರ ಹೊರ ಹಾಕಿದ್ದಾರೆ.ಬೆಂಗಳೂರಿನಲ್ಲಿ ಪುಟ್ಟ ಬಾಡಿಗೆ ಮನೆ, ಅದರಲ್ಲಿ ನಾನು, ಅಪ್ಪ, ಅಮ್ಮ, ಮತ್ತು ತಂಗಿ ವಾಸವಿದ್ದೆವು. ಅಮ್ಮ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಅಪ್ಪ ಅಸೋಸಿಯೇಟ್ ಡೈರೆಕ್ಟರ್ ಆಗಿ ಇಂಡಸ್ಟ್ರೀಯಲ್ಲಿ ಕೆಲಸ ಮಾಡುತ್ತಿದ್ದರು.
ಅಪ್ಪನ ಕಡೆ ಯಾವುದೇ ರೀತಿಯ ಸಂಪಾದನೆ ಇರಲಿಲ್ಲ. ಇಡೀ ಮನೆಯ ಜವಾಬ್ದಾರಿಯನ್ನು ಅಮ್ಮನೆ ಹೊತ್ತಿದ್ದರು. ಆ ಸಮಯದಲ್ಲಿ ಅಮ್ಮ, ಅವರ ಫ್ರೆಂಡ್‌ಗೆ ಬೇರೆಯವರಿಂದ ಸಾಲ ಮಾಡಿ ಹಣ ಕೊಟ್ಟಿದ್ದರು. ಆ ಹಣವನ್ನು ಕೇಳಲು ಹೋಗಿದ್ದಾಗ, ಅಮ್ಮನ ಮೇಲೆಯೇ ಅವರ ಗೆಳತಿ ಕಂಪ್ಲೇಂಟ್ ಕೊಟ್ಟಿದ್ದರು ಎಂದು ರಾಜೇಶ್ ಗೌಡ ಯೂಟ್ಯೂಬ್ ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ ಅನುಪಮಾ ಮಾತನಾಡಿದ್ದಾರೆ.
ನನ್ನ ತಂದೆ, ಅವರನ್ನು ದೈಹಿಕವಾಗಿ ನಿಂದನೆ ಮಾಡಿದ್ದಾರೆ ಎಂದು ಕಂಪ್ಲೇಂಟ್ ಕೊಟ್ಟಿದ್ದರು. ಪೊಲೀಸ್‌ನವರು ಮನೆಗೆ ಬಂದಾಗ, ಅಮ್ಮ ಇರಲಿಲ್ಲ. ನಾನು ಮತ್ತು ನನ್ನ ಅಪ್ಪ ಮಾತ್ರ ಇದ್ದೆವು. ಆಗ ಪೊಲೀಸ್‌ನವರು ಮನೆ ಹತ್ತಿರ ಬಂದು ನನ್ನ ಅಪ್ಪನನ್ನು ಕರೆದುಕೊಂಡು ಹೋಗಿದ್ದರು. ರಾತ್ರಿ ಅಪ್ಪನನ್ನು ಅಮ್ಮ ಮನೆಗೆ ಕರೆದುಕೊಂಡು ಬಂದಾಗ, ಅಪ್ಪನ ಮುಖಕ್ಕೆ ಪೊಲೀಸ್‌ನವರು ಚೆನ್ನಾಗಿ ಹೊಡೆದು ಬಿಟ್ಟಿದ್ದರು.
ನಮ್ಮಪ್ಪ ಅವಾಗ ಎಷ್ಟೇ ಕಷ್ಟ ಆದರೂ ಆ ಹಣವನ್ನು ನೀನೇ ತೀರಿಸಬೇಕು ಎಂದು ಅಮ್ಮನಿಗೆ ಹೇಳಿದ್ದರು. ಲೈಫ್ ತುಂಬಾ ಸುಂದರವಾಗಿತ್ತು. ಆದರೆ ಅಲ್ಲಿಂದಲೇ ನಮಗೆ ತೀರಾ ಕಷ್ಟಗಳು ಎದುರಾಗಿದ್ದು ಎಂದು ಅನುಪಮಾ ಗೌಡ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.