ದರ್ಶನ್ ಜೊತೆ ಸಿನಿಮಾದಲ್ಲಿ ನಟಿಸಿದ ಬಳಿಕ ಕನ್ನಡ ಚಿತ್ರರಂಗವನ್ನೇ ತೊರೆದ ಅನುಪಮಾ ಗೌಡ
Updated: Mar 19, 2025, 08:12 IST
|

ಕನ್ನಡ ಚಿತ್ರರಂಗದ ಅನೇಕ ನಟಿಯರು ಚಿಕ್ಕವಯಸ್ಸಿನಲ್ಲೇ ಲೈಂಗಿಕ ಕಿರುಕುಳ ಅನುಭವಿಸಿರುವ ಸಾಕಷ್ಟು ಉದಾಹರಣೆಗಳಿವೆ. ಇತ್ತೀಚಿಗಷ್ಟೆ ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ನಟಿ ನೇಹಾ ಗೌಡ ತಮಗೆ ಚಿಕ್ಕವಯಸ್ಸಿನಲ್ಲಿ ಆದ ಲೈಂಗಿಕ ದೌರ್ಜನ್ಯದ ಭಯಾನಕ ಅನುಭವವನ್ನು ಹಂಚಿಕೊಂಡಿದ್ದರು.
ಇದೀಗ ರಾಜ್ಯ ಪ್ರಶಸ್ತಿ ವಿಜೇತ ನಟಿ ಹಾಗೂ ಪ್ರಸ್ತುತ ಕನ್ನಡದ ಜನಪ್ರಿಯ ನಿರೂಪಕಿ ಅನುಪಮಾ ಗೌಡ ತಾವು ಬಾಲ್ಯದಲ್ಲಿ ಪರಿಚಿತ ವ್ಯಕ್ತಿಯಿಂದಲೇ ಅನುಭವಿಸಿದ ಕಿರುಕುಳದ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ.ರಾಜೇಶ್ ಗೌಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿದ ಅವರು, ನಾನು ಏಳನೇ ತರಗತಿಯಲ್ಲಿ ಇರುವಾಗ ನನ್ನನ್ನು ಶಾಲೆಗೆ ಕಳುಹಿಸುತ್ತಿರಲಿಲ್ಲ. ಮನೆಯಲ್ಲಿ ದುಡ್ಡಿರಲಿಲ್ಲ ಹೀಗಾಗಿ ನಾನು ಮೊದಲ ಬಾರಿಗೆ ಕೆಲಸ ಆರಂಭಿಸಿದೆ.
ಜೂನಿಯರ್ ಆರ್ಟಿಸ್ಟ್ ಆಗಿ ನಾನು ಕೆಲಸ ಶುರುಮಾಡಿದೆ. ಸಿನಿಮಾ, ಧಾರಾವಾಹಿಗಳಿಗೆ ಜೂನಿಯರ್ ಆರ್ಟಿಸ್ಟ್ ಆಗಿ ಹೋಗಲು ಆರಂಭಿಸಿದೆ. ದಿನಕ್ಕೆ ನೂರು ರೂಪಾಯಿ ಕೊಡುತ್ತಿದ್ದರು. ಅದಕ್ಕೂ ಮುಂಚೆ ನಾನು ಮನೆ ಕೆಲಸ ಮಾಡುತ್ತಿದ್ದೆ. ಅಮ್ಮನಿಗೆ ಹೇಳದೆ ಮನೆ ಕೆಲಸಕ್ಕೆ ಹೋಗುತ್ತಿದೆ. ಅಲ್ಲಿ ಕಸ ಗುಡಿಸಿ ನೆಲ ಒರೆಸಿದರೆ ಸಂಜೆಗೆ ತಿಂಡಿ ಕೊಡುತ್ತಿದ್ದರು. ಜೊತೆಗೆ ನೂರೈವತ್ತು ರೂಪಾಯಿ ಕೊಡುತ್ತಿದ್ದರು. ಮನೆ ಹತ್ತಿರವೇ ಹೋಗುತ್ತಿದ್ದೆ. ಆಮೇಲೆ ಅಮ್ಮನಿಗೆ ಗೊತ್ತಾಗಿ ದೊಡ್ಡ ಗಲಾಟೆ ಆಯಿತು ಎಂದರು.
ಇನ್ನು ಚಿತ್ರರಂಗದಲ್ಲಿ ಒಬ್ಬ ವ್ಯಕ್ತಿ ಇದ್ದರು ಈಗ ಇದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ನಾನು ಅಕ್ಕ ಧಾರಾವಾಹಿ ಮಾಡುವ ಸಮಯದಲ್ಲಿ ಇದ್ದರು. ಆ ವ್ಯಕ್ತಿ ಜೂನಿಯರ್ ಆರ್ಟಿಸ್ಟ್‌ಗಳ ಜೊತೆ ಮಾತನಾಡಿ ಶೂಟಿಂಗ್‌ಗಳಿಗೆ ಕಳುಹಿಸುತ್ತಿದ್ದರು. ಅವರು ಕೂಡ ತಕ್ಕಮಟ್ಟಿನ ಪಾತ್ರಗಳನ್ನು ಮಾಡುತ್ತಿದ್ದರು. ಅವರು ಆಗ ಮನೆಗೆ ಬರುತ್ತಿದ್ದರು. ಅವಾಗ ಅಮ್ಮನೂ ಇರಲಿಲ್ಲ. ಅಪ್ಪನೂ ಇರಲಿಲ್ಲ ಬಂದವರೇ ಟೆರೆಸ್ ಮೇಲೆ ಕರೆದುಕೊಂಡು ಹೋದರು ಮಾತನಾಡಲು, ಮಾತನಾಡುತ್ತಾ.
ಮಾತನಾಡುತ್ತಾ ಮೈ ಕೈ ಮುಟ್ಟಲು ಶುರು ಮಾಡಿದರು ನಾನು ಮದುವೆಯಾದರೆ ಮಕ್ಕಳಾಗುತ್ತದೆ ಅಂದುಕೊಂಡಿದ್ದೆ. ನಾನು ಪಿಯುಸಿ ಮುಗಿಸುವವರೆಗೂ ನಮಗೆ ಗೊತ್ತಿದ್ದ ವಿಚಾರ ಅಷ್ಟೇ. ಅದಕ್ಕಾಗಿಯೇ ನಾನು ಹೇಳುವುದು ಹೆಣ್ಣು ಮಕ್ಕಳಿಗಾಗಲೀ, ಗಂಡು ಮಕ್ಕಳಿಗಾಗಲೀ ಫಿಜಿಕಲ್ ಟಚ್ ಬಗ್ಗೆ ಹೇಳಿಕೊಡಬೇಕು ಎಂದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.