ಅನುಪಮ ಗೌಡ ಮನೆಯಿಂದ ಹೊರ ನಡೆದ ತಂದೆ ತಾಯಿ, ನಟಿಯ ವ್ಯವಹಾರ ನೋಡಿ ಹೊರಬಂದ ಸ್ವಂತ ತಾಯಿ
ಕನ್ನಡದ ಜನಪ್ರಿಯ ನಿರೂಪಕಿ ಹಾಗೂ ನಟಿ ಅನುಪಮಾ ಗೌಡ ಇತ್ತೀಚೆಗೆ ತಮ್ಮ ಜೀವನದ ದೊಡ್ಡ ಕನಸಾದ ಸ್ವಂತ ಮನೆ ಕಟ್ಟಿಸಿಕೊಂಡಿದ್ದಾರೆ. “33 ವರ್ಷಕ್ಕೆ ಬೆಂಗಳೂರಿನಲ್ಲಿ ನನ್ನದೇ ಮನೆ ಮಾಡಿಕೊಂಡಿದ್ದೇನೆ” ಎಂದು ಹೇಳುತ್ತಾ, ಅವರು ತಮ್ಮ ಖುಷಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ತಮ್ಮ ಹೊಸ ಮನೆಯ ಹೆಸರನ್ನೇ ಅವರು ಪ್ರೀತಿಯಿಂದ ‘ನಮ್ಮನೆ’ ಎಂದು ಇಟ್ಟಿದ್ದಾರೆ. “ಯಾರಾದರೂ ಮನೆಗೆ ಬನ್ನಿ ಅಂತ ಹೇಳಿದಾಗ — ನಮ್ಮನೆಗೆ ಬನ್ನಿ ಅಂದ್ರೆ — ಡೆಲಿವರಿ ಹುಡುಗರಿಗೂ ಕನ್‍ಫ್ಯೂಷನ್ ಆಗ್ತದೆ!” ಎಂದು ಹಾಸ್ಯವಾಗಿ ಹೇಳಿದ್ದಾರೆ.
ಅನುಪಮಾ ತಮ್ಮ 14 ವರ್ಷದ ಕಿರುತೆರೆಯ ಪ್ರಯಾಣದಲ್ಲಿ ಮಾಡಿದ ಹಗಲು-ರಾತ್ರಿ ಪರಿಶ್ರಮದ ಫಲ ಇದಾಗಿದೆ. “ಮದುವೆ ಮಾಡಿಕೊಳ್ಳುವ ಮೊದಲು ಮನೆ ಮಾಡಬೇಕು” ಎಂಬುದು ಅವರ ಜೀವನದ ಗುರಿಯಾಗಿತ್ತು. ಆರಂಭದಲ್ಲಿ ಅಪಾರ್ಟ್ಮೆಂಟ್ ಬಗ್ಗೆ ಯೋಚಿಸಿದರೂ, ಕೊನೆಗೆ ಸ್ವಂತ ಮನೆ ನಿರ್ಮಿಸಲು ತೀರ್ಮಾನಿಸಿದರು. ತಮ್ಮ ಶಕ್ತಿ ಮತ್ತು ಸಾಮರ್ಥ್ಯಕ್ಕೆ ತಕ್ಕ ರೀತಿಯಲ್ಲಿ ಮನೆಯನ್ನು ಕಟ್ಟಿಸಿಕೊಂಡು, ಅದರ ಪ್ರತಿಯೊಂದು ಭಾಗಕ್ಕೂ ತಮ್ಮ ಕನಸಿನ ಸ್ಪರ್ಶ ನೀಡಿದ್ದಾರೆ.
ಗೃಹಪ್ರವೇಶದ ದಿನವು ಅವರಿಗೆ ಮಿಶ್ರ ಭಾವನೆಗಳ ಕ್ಷಣವಾಗಿತ್ತು — ಸಂತೋಷದ ಜೊತೆ ಸ್ವಲ್ಪ ಬೇಸರವೂ ಇತ್ತು. ಅವರು ಹೇಳಿದರು, “ಅಪ್ಪನಿಲ್ಲ ಅನ್ನೋ ಖಾಲಿತನ ಇದೆ. ಅಪ್ಪನ ಫೋಟೋವನ್ನು ಮನೆಗೆ ತಂದು ಇಟ್ಟಿದ್ದೀನಿ.” ಮೊದಲಿಗೆ ಮನೆಯನ್ನು ‘ಆನಂದ ಮನೆ’ ಎಂದು ನಾಮಕರಣ ಮಾಡಲು ಯೋಚಿಸಿದ್ದರೂ, ಅಂತಿಮವಾಗಿ “ನಮ್ಮನೆ” ಎಂಬ ಹೆಸರು ಅವರ ಮನಸ್ಸಿಗೆ ಹತ್ತಿಕೊಂಡಿತು.
ಆದರೆ ಈಗ ಸುದ್ದಿ ಏನೆಂದರೆ, ಅನುಪಮಾ ಗೌಡ ಅವರ ತಾಯಿ ಮತ್ತು ತಂಗಿ ಇತ್ತೀಚೆಗೆ ಮನೆ ಬಿಟ್ಟು ಬೇರೆಡೆಗೆ ತೆರಳಿದ್ದಾರೆ. ಹೀಗಾಗಿ ಪ್ರಸ್ತುತ ಅನುಪಮಾ ತಮ್ಮ ಹೊಸ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಕೋಪ ಕರಗಿ ಮತ್ತೆ ಇಲ್ಲಿ ಬಂದರೂ ಬರಬಹುದು ಎಂದು ಅವರು ಹೇಳುತ್ತಾರೆ ನಮ್ಮನೆ ಅಂದ್ರೆ ಕೇವಲ ಕಟ್ಟಡವಲ್ಲ, ಅದು ನನ್ನ ಪರಿಶ್ರಮ, ನನ್ನ ಅಪ್ಪನ ನೆನಪು, ನನ್ನ ಜೀವನದ ಹೆಮ್ಮೆ ಎನ್ನುವುದು ನಟಿ ಅನುಪಮಾ ಅವರ ಅಭಿಪ್ರಾಯ.