ಕದ್ದುಮುಚ್ಚಿ ಮದುವೆಯಾದ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್, ಗುಟ್ಟು ರಟ್ಟು ಮಾಡಿದ ಪೋಷಕರು
Dec 20, 2024, 18:39 IST
|
ಪ್ರಭಾಸ್ ಹಾಗೂ ಅನುಷ್ಕಾ ನಡುವಿನ ಪ್ರೇಮಾ ಕಥೆ ಇವತ್ತು ನಿನ್ನೆಯದಲ್ಲ, ಬಹು ವರ್ಷಗಳ ಪ್ರೀತಿಗೆ ಇದೀಗ ಜೀವ ತುಂಬಿದ್ದಾರೆ. ಹೌದು, ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಈ ಮೊದಲೇ ಕದ್ದು ಮುಚ್ಚಿ ಮದುವೆಯಾಗಿದ್ದಾರೆ ಎಂಬ ಗಾಸಿಪ್ ಎದ್ದಿದೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅನುಷ್ಕಾ ಹಾಗೂ ಪ್ರಭಾಸ್ ಮದುವೆ ವಿಚಾರವೇ ಸದ್ದು ಮಾಡುತ್ತಿದೆ. ಸದಾ ಜೊತೆಯಲ್ಲೇ ಕಾಣಿಸುವ ಅನುಷ್ಕಾ ಹಾಗೂ ಪ್ರಭಾಸ್ ಬಾಹುಬಲಿ ಸಿನಿಮಾದ ನಂತರ ಮತ್ತಷ್ಟು ಹತ್ತಿರವಾಗಿದ್ದರು.
ಈ ಇಬ್ಬರ ಒಡನಾಟ ಇದೀಗ ಹಲವಾರು ಅನುಮನಗಳಿಗೆ ಎಡೆ ಮಾಡಿ ಕೊಟ್ಟಿದೆ. ಹೌದು, ಅನುಷ್ಕಾ ಅವರ ಜೊತೆ ಪ್ರಭಾಸ್ ದಾಂಪತ್ಯ ಜೀವನ ನಡೆಸುತ್ತಿದ್ದಾರಾ ಎಂಬ ಅನುಮಾನ ಎಬ್ಬಿದೆ.
ಇನ್ನು ಪ್ರಭಾಸ್ ಕುಟುಂಬದ ಜೊತೆ ಅನುಷ್ಕಾ ಅವರ ಸಂಬಂಧಿಕರು ಕೂಡ ಕಾಣಿಸಿಕೊಂಡು ಮತ್ತಷ್ಟು ಅನುಮಾನ ಹುಟ್ಟು ಹಾಕಿದೆ. ಇನ್ನು ಇದರ ಜೊತೆಗೆ ಪ್ರಭಾಸ್ ಹಾಗೂ ಅನುಷ್ಕಾ ಅಭಿಮಾನಿಗಳು ಈ ಇಬ್ಬರು ಮದುವೆ ಆದರೆ ಒಳ್ಳೆಯದೇ ಎಂದು ಜಾಲತಾಣದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.