ಕೊನೆಗೂ ಮದುವೆ ಆಗಲು ಒಪ್ಪಿಕೊಂಡ ಅನುಶ್ರೀ; ಕನ್ನಡಿಗರಿಗೆ ಸಂಭ್ರಮ

 | 
Ha

ಇತ್ತೀಚಿನ ದಿನಗಳಲ್ಲಿ ನಿರೂಪಕಿ, ನಟಿ ಅನುಶ್ರೀ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು ಪ್ರಸಿದ್ಧ ನಿರೂಪಕಿ ಅನುಶ್ರೀ ಅವರು ತುಳುವಿನ ಪಾಡ್‌ ಕಾಸ್ಟ್ ಚಿಲ್ಲಿಂಗ್ ವಿಥ್ ಚಿಲಿಂಬಿ ಕಾರ್ಯಕ್ರಮಕ್ಕೆ ಮೊದಲ ಬಾರಿಗೆ  ಸಂದರ್ಶನ ನೀಡಿದ್ದು, ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ.ನನ್ನ ಬಳಿ ಕೋಟ್ಯಂತರ ಜನ ಕೇಳುವ ಪ್ರಶ್ನೆ ನಿಮ್ಮ ಮದುವೆ ಯಾವಾಗ? ಯೂಟ್ಯೂಬ್‌ ನಲ್ಲಿ ನನಗೆ 10 ಸಾವಿರ ಮದುವೆ ಮಾಡಿಸಿದ್ದಾರೆ. 

ಬಹುಷ ನಾನು ರಿಯಲ್ ಆಗಿ ಮದುವೆಯಾದ್ರೆ ಯಾರೂ ನಂಬಲಿಕ್ಕಿಲ್ಲ. ಅಷ್ಟು ಮದುವೆಯಾಗಿದೆ ಯೂಟ್ಯೂಬ್‌ ನಲ್ಲಿ ನನ್ನದು. ರಕ್ಷಿತ್‌ ಶೆಟ್ಟಿ ಜೊತೆ ಮೂರು ಸಲ ಮದುವೆ ಮಾಡಿಸಿದ್ದಾರೆ. ಒಂದು ಸಲ ನಾನೇ ಅವರಿಗೆ ಲಿಂಕ್ ಕಳಿಸಿದೆ. ಶೆಟ್ರೆ, ಕಂಗ್ರಾಜುಲೇಷನ್‌ ಎಂದೆ. ಅವರು ಹೋ, ಇದ್ಯಾವಾಗ ಮಾರೆ ಆದದ್ದು. ನೀವು ಕರೀಲೇ ಇಲ್ಲ ಅಂದರು. ನಾನಂದೆ ನಾವಿಬ್ಬರೂ ಬರಲೇ ಇಲ್ಲ. ಆದರೂ ನಮ್ಮ ಮದುವೆಯಾಗಿದೆ ಎಂದೆ.

ಇದಕ್ಕಿಂತ ಮೊಸ್ತ್ ಅಂದರೆ ನಾನು ಯಾವುದೇ ಸಿಂಗಲ್ ಹುಡುಗನ ಜೊತೆ ಫೋಟೋ ಹಾಕಿದರೂ ಸಾಕು. ನನ್ನ ಜೊತೆ ಮದುವೆ ಮಾಡಿಸಿ ಬಿಡುತ್ತಾರೆ. ನನ್ನ ಕಸಿನ್‌ ನ ಗಂಡನೊಟ್ಟಿಗೂ ಪಾಪ ಅವರ ಜೊತೆಗೂ ಮದುವೆ ಮಾಡಿಸಿ ಬಿಟ್ಟಿದ್ದರು.  ನನ್ನ ಕಸಿನ್ ಕರೆ ಮಾಡಿ, ನಿನ್ನ ಮದುವೆ ಮಾಡುವುದರಲ್ಲಿ ನನ್ನ ಗಂಡನನ್ನೂ ಬಿಟ್ಟಿಲ್ಲ ಮಾರಾಯ್ತಿ ಅಂದಳು. ನಾನೀಗ ಅದನ್ನು ತುಂಬಾ ಸೀರಿಯಸ್‌ ಆಗಿ ತೆಗೆದುಕೊಳ್ಳುವುದಿಲ್ಲ. ತಲೆಬಿಸಿ ಮಾಡಿಕೊಳ್ಲುವುದಿಲ್ಲ.

ನಾನು ಅಪ್ಪನ-ಅಮ್ಮನ ಆ ದಿನಗಳನ್ನು ನೋಡಿದ್ದೇನೆ. ಮದುವೆ ಬೇಡ ಅನ್ನುವ ಮಟ್ಟಕ್ಕೆ ಬರುವಷ್ಟು ಯೋಚನೆಗೆ ಕರೆದುಕೊಂಡು ಹೋಗುತ್ತದೆ. ಬಾಲ್ಯದ ಕೆಲ ವಿಚಾರಗಳು, ಅಪ್ಪ-ಅಮ್ಮನ ಜೀವನ ನಮ್ಮ ಮೇಲೂ ಪರಿಣಾಮ ಬೀರಿದೆ. ಹಾಗಾಗಿ ವಯಸ್ಸು ಆಗ್ತಾ ಇದೆ ಅನ್ನುವ ಬಗ್ಗೆ ಕೂಡ ಯೋಚಿಸುತ್ತಿಲ್ಲ. ಹೀಗಾಗಿ ನಾನು ಮದುವೆಯೇ ಬೇಡ ಎಂದು ಇದ್ದವಳು. ಈಗ ಮದುವೆಯಾಗುವ ನಿರ್ಧಾರದಲ್ಲಿದ್ದೇನೆ. ನೂರಕ್ಕೆ ನೂರು ಖುಷಿ ಸುದ್ದಿ ಸಿಗಬಹುದು. ಹುಡುಗನನ್ನು ಹುಡುಕಿ ಕೊಡಿ ಎಂದಿದ್ದಾರೆ.