ಸರಿಗಮಪ ವೇದಿಕೆಯ ಹಾಡುಗಾರ ಧ್ಯಾಮೇಶ್ ದಿನನಿತ್ಯ‌ ವಾಸ ಮಾಡುವ ಮನೆ ನೋಡಿ ಭಾವುಕರಾದ ಅನುಶ್ರೀ

 | 
Gji
ಉತ್ತರ ಕರ್ನಾಟಕದ‌‌‌ ಧ್ಯಾಮೇಶ್ ಅವರು ಇದೀಗ ಸರಿಗಮಪ ವೇದಿಕೆಯಲ್ಲಿ ಮೋಡಿ ಮಾಡುತ್ತಿದ್ದಾರೆ. ಹೌದು, ಸರಿಗಮಪ ವೇದಿಕೆಯಲ್ಲಿ ಧ್ಯಾಮೇ‌ಶ್ ಅವರು ಉತ್ತರ ಕರ್ನಾಟಕ ಶೈಲಿಯ ಹಾಡು ಹಾಡಿ ಇದೀಗ ವೀಕ್ಷಕರ ಗಮನಸೆಳೆದಿದ್ದಾರೆ.
ಇನ್ನು ಇದರ ಜೊತೆಗೆ ಸರಿಗಮಪ ವೇದಿಯ ಜಡ್ಜ್ ಕೂಡ ಧ್ಯಾಮೇಶ್ ಹಾಡಿಗೆ ಮೆಚ್ಚುಗೆ ‌ವ್ಯಕ್ತಪಡಿಸಿದ್ದಾರೆ. ಇನ್ನು ಇದರ ಜೊತೆಗೆ ಧ್ಯಾಮೇಶ್ ಅವರ ಜೀವನದ ಹಾದಿ ಬಗ್ಗೆ ಅನುಶ್ರೀ ಅವರು ಮಾತಾನಾಡಿದ್ದಾರೆ. ಧ್ಯಾಮೇಶ್ ಅವರ ಮನೆ ಹಾಗೂ ತಂದೆ ತಾಯಿ ಬಗ್ಗೆನೂ ಒಂದೆರಡು ಮಾತನಾಡುತ್ತಾ ಧ್ಯಾಮೇಶ್ ಭಾವುಕರಾಗಿದ್ದಾರೆ.
ಉತ್ತರ ಕರ್ನಾಟಕದ ಹಳ್ಳಿಯಿಂದ ಬಂದಂತಹ ಧ್ಯಾಮೇಶ್ ಅವರು ತನ್ನ ಮನೆ ಪರಿಸ್ಥಿತಿ ಬಗ್ಗೆ ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ. ಬಡತನದಲ್ಲೇ ಇವತ್ತು ಇಲ್ಲಿ ಬಂತು ನಿಂತಿದ್ದೀನಿ‌. ನ‌ನ್ನ‌ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಾರೆ ವಿನಹಃ ಯಾರು ಕೂಡ ಸಹಾಯ ಮಾಡಿಲ್ಲ. ಆದರೆ, ನನ್ನ ಶ್ರಮದ ಫಲವಾಗಿ ಇವತ್ತು ಇಲ್ಲಿ ಬಂದಿದ್ದೇನೆ ಎಂದಿದ್ದಾರೆ. 
ಇನ್ನು ಸರಿಗಮಪ ವೇದಿಕೆಯಲ್ಲಿ ಗೆದ್ದು ಮುಂದಿನ ದಿನ ಹೊಸ ಮನೆ ನಿರ್ಮಾಣ ಮಾಡುತ್ತೇನೆ. ಆದರೆ ನನಗೆ ತಂದೆ ತಾಯಿ ಇಲ್ಲ, ಇವತ್ತು ಅವರಿದಿದ್ದರೆ ನನ್ನ ಸಾಧನೆ ಕಂಡು ತುಂಬಾ ಖುಷಿ ಪಡುತ್ತಿದ್ದರು ಎಂದು ವೇದಿಕೆ ಮೇಲೆ ಧ್ಯಾಮೇಶ್ ಅವರು ಭಾವುಕರಾಗಿದ್ದಾರೆ.