ಖ್ಯಾತ ನ ಟನ ಮನೆಯಲ್ಲಿ ಅನುಶ್ರೀ ಓಡಾಟ; ಸಿಹಿಸುದ್ದಿ ಇರಬಹುದು ‌ಎಂದ ನೆಟ್ಟಿಗರು

 | 
Uu

ಆ್ಯಂಕರ್​ ಹಾಗೂ ನಟಿ ಅನುಶ್ರೀ ಕುಳಿತರೂ ನಿಂತರೂ ಸುದ್ದಿಯೇ ಆಗುತ್ತದೆ. ಚಿನಕುರುಳಿಯಂತೆ ಚಟಪಟ ಮಾತನಾಡುವ ಆ್ಯಂಕರ್​ ಅನುಶ್ರೀ  ಗಂಧದ ಗುಡಿಯ ಮಾತಿನ ಮಲ್ಲಿ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಅನುಶ್ರೀ ವೀಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಅದರಲ್ಲಿ ಅನುಶ್ರೀ ಯಾರದೋ ಮನೆಯಲ್ಲಿ ಓಡಾಡುತ್ತಿದ್ದಾರೆ. ಯಾರೋ ವೀಡಿಯೋ ಮಾಡಿ ಅಪ್ಲೋಡ್ ಮಾಡಿದ್ದು, ಅದೀಗ ಭಾರೀ ವೈರಲ್ ಆಗುತ್ತಿದೆ.

ಈ ಬಗ್ಗೆ ಮಾಹಿತಿ ಇಲ್ಲಿ ಹೊರಬಿದ್ದಿದೆ ನೋಡಿ.. ಹೌದು ನಟಿ ಹಾಗೂ ನಿರೂಪಕಿ ಅನುಶ್ರೀ ಸ್ಯಾಂಡಲ್‌ವುಡ್ ನಟ ಎಕ್ಸ್‌ಕ್ಯೂಸ್‌ ಮೀ ಖ್ಯಾತಿಯ ಅಜಯ್ ರಾವ್ ಮನೆಗೆ ಭೇಟಿ ನೀಡಿದ್ದಾರೆ. ಅಲ್ಲಿ ಹೊಸ ಮನೆ ಗೃಹಪ್ರವೇಶ ನಡೆಯುತ್ತಿದ್ದು, ಅಜಯ್ ರಾವ್ ಅವರ ಪತ್ನಿ ಅನುಶ್ರೀ ಅವರಿಗೆ ಸಾಥ್ ಕೊಟ್ಟು ಎಲ್ಲಾ ಕಡೆ ಓಡಾಡಿಸಿ ತಮ್ಮ ಮನೆ ತೋರಿಸಿದ್ದಾರೆ. ಮನೆ ನೋಡಿ ಖುಷಿಗೊಂಡು ಅನುಶ್ರೀ ಸಮ್ಮನೇ ಬರಲು ಸಾಧ್ಯವೇ? ಅರಳು ಹುರಿದಂತೆ ಮಾತನಾಡುವ ಅನುಶ್ರೀ ಏನಾದ್ರೂ ಹೇಳಿಯೇ ಬಂದಿರುತ್ತಾರೆ ಬಿಡಿ.

ಹೊಸ ಮನೆ ನೋಡಿ ಅನುಶ್ರೀ ಏನು ಹೇಳಿರಬಹುದು ಎಂಬ ಕುತೂಹಲ ನಿಮಗಿದ್ರೆ ಮುಂದಿನ ಸಾರಿ ಅವರು ಸಿಕ್ಕಾಗ ಕೇಳಿ ತಿಳಿದುಕೊಳ್ಳಿ. ಆದರೆ, ಅನುಶ್ರೀ ಅವರನ್ನು ಕೇಳದೆಯೂ ಖಂಡಿತವಾಗಿಯೂ ಹೇಳಬಹುದು, ಅವರು ಚೆನ್ನಾಗಿದೆ ಮನೆ, ಒಳ್ಳೆಯದಾಗಲಿ ಎಂದಿರುವುದಂತೂ ಪಕ್ಕಾ. ಗ್ಲಾಮರ್‌ ಲುಕ್‌ನ ಅನುಶ್ರೀ ಸಿಂಪಲ್ ಡ್ರೆಸ್‌ನಲ್ಲಿ ಅಲ್ಲಿ ಮಿಂಚು ಹರಿಸಿ ಬಂದಿದ್ದರೆ. ಎಂದಿನಂತೆ ನಗುಮೊಗದಲ್ಲಿ ಪಟಪಟನೇ ಮನೆಯನ್ನೆಲ್ಲಾ ಓಡಾಡಿ ಅಲ್ಲಿ ಸೇರಿದ್ದವರಿಗೆ ಮೋಡಿ ಮಾಡಿ ಬಂದಿದ್ದಾರೆ. 

ಆ್ಯಂಕರ್​ ಅನುಶ್ರೀ ಎಂದರೆ ಅವರೊಂದು ಬೊಂಬಾಟ್ ಮಾತಿನ ಬೊಂಬೆ ಇದ್ದಂತೆ ಎಂಬುದು ಬಹಳಷ್ಟು ಜನರು ಹೇಳುವ ಮಾತು. ಸ್ಯಾಮಡಲ್‌ವುಡ್ ಹಾಗು ಕಿರುತೆರೆಯ ಹಲವಾರು ಕಲಾವಿದರನ್ನು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಅನುಶ್ರೀ ಸಂದರ್ಶನ ಮಾಡುತ್ತಾ ಇರುತ್ತಾರೆ. ಅಲ್ಲಿ ಹಲವರನ್ನು ಕಾಲೆಳೆದು ನಕ್ಕುನಗಿಸಿ, ಅವರಿಕೆ ಪ್ರಶ್ನೆ ಕೇಳಿ ಉತ್ತರ ಪಡೆದು ಅದನ್ನೆಲ್ಲ ಜಗತ್ತಿನ ತುಂಬಾ ಹರಿದಾಡಲು ಬಿಟ್ಟು ಎಂಜಾಯ್ ಮಾಡುವುದು ಅನುಶ್ರೀ ಕೆಲಸವೋ ಹವ್ಯಾಸವೋ ಗೊತ್ತಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ