ಬಾರ್ ನಲ್ಲಿ ಅಪ್ಪು ಹಾಡು ಹಾಕಿದ್ದಕ್ಕೆ ರೊ ಚ್ಚಿಗೆದ್ದಿದ್ದ; ರಾಜ್ ಕುಟುಂಬದ ಮೇಲೆ ಯಾ ಕೆ ದ್ವೇಷ

 | 
Js

ಚಿತ್ರದುರ್ಗಾದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಅವರು ನಡೆಸಿರುವ ಒಂದೊಂದೆ ಪ್ರಕರಣಗಳು ಇದೀಗ ಬೆಳಕಿಗೆ ಬರುತ್ತಿವೆ. ಇದೀಗ ಮೈಸೂರಿನ ಪಬ್ ಒಂದರಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರ ಹಾಡು ಹಾಕಿದ್ದಕ್ಕೆ ದರ್ಶನ್ ಹಾಗೂ ಅವರ ಗ್ಯಾಂಗ್ ಕೋಪಗೊಂಡು ಉದ್ಯಮಿ ಯಶವಂತ್ ಹಾಗೂ ಡಿಜೆ ಇಬ್ಬರನ್ನು ನಿಂದಿಸಿ, ಬೆದರಿಕೆ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

2023ರ ಫೆಬ್ರವರಿ 26ರಂದು ಮೈಸೂರಿನ ಪಬ್ ಒಂದರಲ್ಲಿ ಉದ್ಯಮಿ ಯಶವಂತ್ ಅವರು ತಮ್ಮ ಹೆಂಡತಿಯ ಹುಟ್ಟುಹಬ್ಬವನ್ನು ಆಚರಿಸಲು ಕುಟುಂಬ ಸಮೇತ ಬಂದಿದ್ದಾರೆ. ಈ ವೇಳೆ 12.30ರ ಸುಮಾರಿಗೆ ಯಶವಂತ್ ಅವರು ನಟ ಪುನೀತ್ ಅವರ ಹಾಡನ್ನು ಪ್ಲೇ ಮಾಡಲು ಡಿಜೆಯಲ್ಲಿ ವಿನಂತಿಸಿದ್ದಾರೆ.  ಈ ವಿನಂತಿ ದರ್ಶನ್ ಹಾಗೂ ಅವರ ಗ್ಯಾಂಗ್‌ಗೆ ಕೋಪಕ್ಕೆ ಕಾರಣವಾಯಿತು.  

ಅದಲ್ಲದೆ ದರ್ಶನ್ ಮತ್ತು ಅವರ ಆಪ್ತರು ತನ್ನ ಸಿನಿಮಾಗಳ ಹಾಡುಗಳನ್ನು ಮಾತ್ರ ಪ್ಲೇ ಮಾಡಬೇಕೆಂದು ಒತ್ತಾಯಿಸಿ ವಾಗ್ವಾದ ನಡೆಯಿತು. ವೀಡಿಯೊದಲ್ಲಿ ತೋರಿಸಿರುವಂತೆ ನಟ ಮತ್ತು ಅವರ ಗುಂಪು ಯಶವಂತ್ ಮತ್ತು ಡಿಜೆ ಇಬ್ಬರನ್ನೂ ನಿಂದಿಸಿ ಮತ್ತು ಬೆದರಿಕೆ ಹಾಕುತ್ತಿರುವುದು ಕಂಡುಬರುತ್ತದೆ.

ಈ ಸಂಬಂಧ ದರ್ಶನ್ ಅವರ ಆಪ್ತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆದರೆ, ಆಗ ದರ್ಶನ್ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿರಲಿಲ್ಲ. ನಂತರ ದರ್ಶನ್ ವಾಗ್ವಾದದಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಕೆಲ ವರ್ಷಗಳ ಹಿಂದೆ ನಟ ದರ್ಶನ್  ಮಾಧ್ಯಮಗಳ ಜೊತೆ ಮಾತಾಡುತ್ತಾ ರಾಜ್​ಕುಮಾರ್​ ಮಗ ಪುನೀತ್ ಬಳಿ ಇರೋದು ಇದೇ ಕಾರು, ನನ್ನ ಬಳಿ ಇರೋದು ಇದೇ ಕಾರು ಎಂದು ಹೇಳಿ ಅಪ್ಪು ವಿರುದ್ಧವೇ ಪೈಪೋಟಿಗೆ ಇಳಿದಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.