ದಿವ್ಯಾಗೆ ಜೋಡಿಯಾದ ಅರವಿಂದ್ ಕೆ.ಪಿ; ಹಳೆ ನಟನನ್ನು ಬದಿಗಿಟ್ಟ ಸೀರಿಯಲ್

 | 
Us

ನಿನಗಾಗಿ ಧಾರಾವಾಹಿ ಶುರುವಾದ ನಾಲ್ಕೇ ದಿನಕ್ಕೆ ಎಲ್ಲರ ಮೆಚ್ಚುಗೆ ಗಳಿಸುತ್ತಿದೆ. ಕಲರ್ಸ್ ಕನ್ನಡ ಬಿಡುವ ಪ್ರೋಮೋಗಳಿಗೆ ಜನ ಕಮೆಂಟ್ ಹಾಕುವ ಮೂಲಕ ತಮ್ಮ ಬೆಂಬಲ ನೀಡುತ್ತಿದ್ದಾರೆ. ಕಥೆ ಜನರಿಗೆ ಇಷ್ಟವಾಗಿದೆ. ಇದರಲ್ಲಿ ಎರಡು ವಿಶೇಷ ಪಾತ್ರಗಳಿದ್ದು, ಅದರಲ್ಲಿ ಜೀವ ಮತ್ತು ಕೃಷ್ಣಾಳ ಪಾತ್ರ ಒಂದು ರೀತಿ ಸಾಗುತ್ತಿದ್ದರೆ ರಚ್ಚು ಕಥೆ ಮತ್ತೊಂದು ರೀತಿ ಸಾಗುತ್ತಿದೆ. ಈ ಮೂವರು ಒಂದಾದರೆ ಕಥೆಯೇ ಬೇರೆ ಆಗಲಿದೆ.

ರಚನಾಳನ್ನು ಅವರ ಅಮ್ಮ ತನ್ನ ಹಟೋಟಿಯಲ್ಲಿ ಇಟ್ಟುಕೊಳ್ಳುವುದಕ್ಕೆ ಏನೆಲ್ಲಾ ಬೇಕೋ ಆ ಎಲ್ಲಾ ಸರ್ಕಸ್ ಮಾಡಿದ್ದಾಳೆ. ನಿರ್ದೇಶಕನೊಬ್ಬ ಕೆಟ್ಟದಾಗಿ ನಡೆದುಕೊಂಡ ಅನ್ನೋ ಕಾರಣಕ್ಕೆ ರಚನಾ ಟೀ ತೆಗೆದು ಅವನ ಮೇಲೆ ಎರಚಿದ್ದಾಳೆ. ಆ ವಿಡಿಯೋ ಎಲ್ಲೂ ಲೀಕ್ ಆಗಿರಲಿಲ್ಲ. ಆದರೆ ಇದು ಎಲ್ಲೆಡೆ ವೈರಲ್ ಆಗಿ ನಿನ್ನ ಮರ್ಯಾದೆ ಹೋಗುವುದನ್ನು ತಡೆದೆ. ಅದಕ್ಕೆ ನಾನು ಖರ್ಚು ಮಾಡಿದ್ದು 10 ಲಕ್ಷ ರೂ. ಅಂತ ಹೇಳಿ ಭಯ ಹುಟ್ಟಿಸಿದ್ದಾಳೆ.

ರಚನಾ ಪಾತ್ರದಲ್ಲಿ ದಿವ್ಯಾ ಉರುಡುಗ ಮಾಡಿದ್ದು, ಬಹಳ ದಿನಗಳ ಬಳಿಕ ಇದು ಅವರಿಗೆ ಕಮ್ ಬ್ಯಾಕ್ ಆಗಿದೆ. ಇವತ್ತು ರಚನಾ ಅಭಿನಯಕ್ಕೆ ಮನಸೋತವರೇ ಹೆಚ್ಚು. ನನಗೂ ಆಸೆಗಳಿದಾವೆ. ನನ್ನ ಜೀವನವೂ ಹೀಗೆ ಇರಬೇಕು ಎಂದು ಫುಲ್ ಎಕ್ಸೈಟ್ ಮೆಂಟ್ ನಲ್ಲಿ ಹೇಳುವಾಗ ಆಕೆಯ ಅಭಿನಯಕ್ಕೇನೆ ಎಲ್ಲರೂ ಮನಸೋತಿದ್ದಾರೆ. ಶಬ್ಬಾಶ್ ಹೇಳಿದ್ದಾರೆ. ಈ ರೀತಿಯ ಪಾತ್ರಕ್ಕೆ ಖಂಡಿತ ದಿವ್ಯಾ ಉರುಡುಗ ಬೆಸ್ಟ್ ಎನ್ನುತ್ತಿದ್ದಾರೆ. ಜೊತೆಗೆ ಅವಳ ಮಾತು ಮನಸ್ಸಿಗೆ ತಟ್ಟಿದೆ.

ಇನ್ನು ಇದರಲ್ಲಿ ದಿವ್ಯಾ ಜೊತೆಗೆ ಗಿಣಿರಾಮ  ಖ್ಯಾತಿಯ ಧಾರಾವಾಹಿ ಖ್ಯಾತಿಯ ಶಿವರಾಮ್ ಪಾತ್ರಧಾರಿ ಋತ್ವಿಕ್ ಮಠದ್ ಕಾಣಿಸಿಕೊಳ್ಳಲಿದ್ದಾರೆ. ಬೇರೆ ಬೇರೆ ವ್ಯಕ್ತಿತ್ವದ ಇಬ್ಬರು ವ್ಯಕ್ತಿಗಳು ಒಟ್ಟಿಗೆ ಸಾಗುವ ಮನ ಮಿಡಿಯ ಧಾರಾವಾಹಿ ಇದು ಎನ್ನಲಾಗಿದೆ. ಇನ್ನು ಬೈಕರ್ ಅರವಿಂದ್ ಕೆಪಿ ನಟನಾಗಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಅವರಿಗೆ ನಟನೆ ಬರದ ಕಾರಣ  ಅವರನ್ನು ಮುಂದಿನ ದಿನಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.