ಸರಿಗಮಪ ಶೋನ ಅಸಲಿ ಮುಖ ಹೊರಹಾಕಿದ ಅರ್ಚನಾ, ರಾಜೇಶ್ ಕೃಷ್ಣ ಹಾಗೂ ಅನುಶ್ರೀ ಆಟ ಬಯಲು
Jun 30, 2025, 15:49 IST
|

ಖ್ಯಾತ ಗಾಯಕಿ ಅರ್ಚನಾ ಉಡುಪ ಅವರು ನಾಡಿನ ಅತ್ಯುತ್ತಮ ಗಾಯಕಿಯರಲ್ಲಿ ಪ್ರಮುಖರು. ಹಲವು ಹಾಡುಗಳಿಗೆ ತಮ್ಮ ಧ್ವನಿ ನೀಡಿದ್ದು, ಅರ್ಚನಾ ಅವರ ಕಂಠಕ್ಕೆ ಮಾರುಹೋಗದವರಿಲ್ಲ. ಇನ್ನು ಇವರು ಗಾಯನದ ಜೊತೆಗೆ ಕಿರುತೆರೆಯಲ್ಲೂ ಮಿಂಚುತ್ತಿದ್ದಾರೆ. ಧಾರಾವಾಹಿಯೊಂದರಲ್ಲಿ ವಿಲನ್ ಆಗಿಯೂ ಕಾಣಿಸಿಕೊಂಡಿರುವ ಅರ್ಚನಾ ಅವರು ಪ್ರೇಕ್ಷಕರಿಗೆ ಶಾಕ್ ನೀಡಿದ್ದಾರೆ. ಇನ್ನು ಬಹುವರ್ಷಗಳ ಕಾಲ ಅರ್ಚನಾ ಅವರು ಹಲವು ಸಂಗೀತ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿಯೂ ಕಾಣಿಸಿಕೊಂಡಿದ್ದರು.
ಆದರೆ ಇದೀಗ ರಿಯಾಲಿಟಿ ಶೋಗಳ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅವರು ಅಲ್ಲಿ ನಡೆಯುವ ಶಾಕಿಂಗ್ ಸಂಗತಿಯೊಂದನ್ನು ರಿವೀಲ್ ಮಾಡಿದ್ದಾರೆ.ರಿಯಾಲಿಟಿ ಶೋಗಳು ಒಂದು ದೊಡ್ಡ ವರ ಹಾಗೂ ಅವಕಾಶವೂ ಹೌದು, ದೊಡ್ಡ ಶಾಪವೂ ಹೌದು. ಈಗಿನ ಕಾಲಘಟ್ಟವನ್ನು ನಾವು ನೋಡುತ್ತಾ ಹೋದರೆ, ಅತಿಯಾದರೆ ಅಮೃತವೂ ವಿಷ ಆಗುತ್ತೆ ಅನ್ನುವ ಗಾದೆಯೇ ಸರಿ ಹೊಂದುತ್ತದೆ. ಇದು ಅರ್ಥ ಆಗುವವರಿಗೆ ಅರ್ಥವಾಗುತ್ತೆ ಎಂದು ಅರ್ಚನಾ ಉಡುಪ ಅವರು ಸುವರ್ಣ ವಾಹಿನಿಯ ಬೆಂಗಳೂರು ಬಝ್ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ.
ಈಗಿನ ಟ್ಯಾಲೆಂಟ್ ಹಂಟ್ ಶೋನಲ್ಲಿ ಸ್ಪರ್ಧಿಗಳ ಪ್ರತಿಭೆಗಿಂತಲೂ ಅವರ ಹಿನ್ನೆಲೆ, ಅವರಿಗೆ ಏನಾದರೂ ಹೆಚ್ಚು ಸಂಕಷ್ಟಗಳಿದ್ದರೆ ಅದನ್ನೇ ಹೆಚ್ಚಾಗಿ ಫೋಕಸ್ ಮಾಡುವುದು, ವಿಕ್ಟಿಮ್ ಕಾರ್ಡ್ ಪ್ಲೇ ಮಾಡ್ತಾರೆ. ಸ್ಪರ್ಧಿಗಳು ಅದ್ಭುತವಾಗಿ ಹಾಡುತ್ತಾರೆ. ಆದರೆ ವೋಟಿಂಗ್ ವಿಚಾರಕ್ಕೆ ಬಂದಾಗ ಅಯ್ಯೋ ಪಾಪ, ಇವರಿಗೆ ಕಷ್ಟ ಇದೆ ಅನ್ನೋ ಭಾವನೆ ಮೂಡಿಸ್ತಾರೆ. ಅಲ್ಲಿ ಟ್ಯಾಲೆಂಟ್‌ಗಿಂತ ಎಮೋಷನಲ್ ವಿಚಾರಗಳು ಮುಖ್ಯವಾಗುತ್ತವೆ ಎಂದು ಅರ್ಚನಾ ಅವರು ಬೇಸರ ಹಂಚಿಕೊಂಡಿದ್ದಾರೆ.
ಆರ್ಥಿಕವಾಗಿ, ದೈಹಿಕವಾಗಿ ನಿಮಗಿರುವ ಕಷ್ಟವನ್ನು ಹೆಚ್ಚಾಗಿ ಫೋಕಸ್ ಮಾಡ್ತಾರೆ. ಬಹಳಷ್ಟು ಕಡೆ ವೋಟಿಂಗ್ ಇಲ್ಲದೆ ತೀರ್ಪುಗಾರರೇ ಆಯ್ಕೆ ಮಾಡಿದರೆ ಸರಿಯಾದ ದಾರಿಯಲ್ಲಿ ಸಾಗುತ್ತದೆ. ಆದರೆ ಜನ ವೋಟ್ ಮಾಡುವಾಗ ಪ್ರತಿಯೊಬ್ಬರೂ ಒಬ್ಬೊಬ್ಬರಿಗೆ ಕನೆಕ್ಟ್ ಆಗುವ ರೀತಿ ಬೇರೆಯೇ ಇರುತ್ತೆ. ಕೆಲವರು ಪ್ರಬುದ್ಧವಾಗಿ ಚೆನ್ನಾಗಿ ಹಾಡುವವರಿಗೆ ವೋಟ್ ಮಾಡಬೇಕು ಅನ್ಕೋತಾರೆ. ಆದರೆ ಗ್ರಾಮೀಣ ಭಾಗದ ಜನರು, ಸಂಗೀತದ ಜ್ಞಾನ ಇಲ್ಲದವರು ಸ್ಪರ್ಧಿಗಳ ಕಷ್ಟಗಳನ್ನು ನೋಡಿಕೊಂಡು ವೋಟ್ ಹಾಕ್ತಾರೆ. ನಮ್ಮ ವೋಟ್‌ನಿಂದ ಅವರು ಗೆಲ್ತಾರೆ, ಅವರಿಗೆ ಸಹಾಯ ಆಗುತ್ತೆ, ವೋಟ್ ಮಾಡೋಣ ಎಂದುಕೊಳ್ಳುತ್ತಾರೆ. ಅದು ತಪ್ಪು ಪ್ರತಿಭೆಗಳ ಬೆಂಬಲಿಸಿ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.