ಕರಿಮಣಿ ಮಾಲೀಕ ಹಾಡಿಗೆ ಸಕ್ಕತ್ ಸ್ಟೆಪ್ ಹಾಕಿದ ಅನುಶ್ರೀ, ರೊ ಚ್ಚಿಗೆದ್ದ ಅರ್ಜುನ್ ಜನ್ಯ

 | 
Bnn

ಎಲ್ಲೆಲ್ಲೂ ಕರಿಮಣಿ ಮಾಲೀಕನ ಹಾವಳಿ ಜೋರಾಗಿದೆ. ಒಮ್ಮೆಯಾದರೂ ಈ ಹಾಡು ಕಿವಿ ಮೇಲೆ ಬೀಳದೇ ದಿನ ಮುಗಿಯುತ್ತಿಲ್ಲ ಎನ್ನುವಂತಾಗಿಬಿಟ್ಟಿದೆ. ಸೋಶಿಯಲ್ ಮೀಡಿಯಾ ಓಪನ್ ಮಾಡಿದರೆ ಓ ನಲ್ಲ ನೀನಲ್ಲ ಕರಿಮಣಿ ಮಾಲೀಕ ಎನ್ನುವ ರಾಗ ಹೊರಳುತ್ತಿದೆ.25 ವರ್ಷಗಳ ಹಿಂದೆ ಬಂದಿದ್ದ 'ಉಪೇಂದ್ರ' ಚಿತ್ರದ ಹಾಡಿದು. 

ಗುರುಕಿರಣ್ ಸಂಗೀತದ ಹಾಡಿಗೆ ಉಪ್ಪಿ ಸಾಹಿತ್ಯ ಬರೆದಿದ್ದರು. ಪ್ರತಿಮಾ ರಾವ್ ಹಾಡನ್ನು ಹಾಡಿದ್ದರು. ಅವತ್ತಿನ ಕಾಲಕ್ಕೆ ಹಾಡು ಹಿಟ್ ಆಗಿತ್ತು. ಆದರೆ ಈಗ ಸೋಶಿಯಲ್ ಮೀಡಿಯಾ ಜಮಾನದಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡ್ತಿದೆ. ಈ ಹಾಡು ಇಷ್ಟೊಂದು ವೈರಲ್ ಆಗುವುದಕ್ಕೆ ಕಾರಣ ಕನಕ ಎಂಬುವ ಯುವಕ.

https://youtube.com/shorts/oLghAtA6OR0?si=EUdkNx2vRdg-ws2Z

ಮೂಲತಃ ಕಲ್ಯಾಣ ಕರ್ನಾಟಕ ಭಾಗದ ವಿಜಯನಗರದ ಕೊಟ್ಟೂರಿನ ಯುವಕ ಕನಕ ಈ ಹಾಡನ್ನು ಬಳಸಿ ಒಂದು ರೀಲ್ಸ್ ಮಾಡಿದ್ದ. ಆ ರೀಲ್ಸ್ ನೋಡ ನೋಡುತ್ತಲೇ ವೈರಲ್ ಆಗಿಬಿಡ್ತು. ಜನ ಕೇಳಿ ಕೇಳಿ ಏನೋ ಚೆನ್ನಾಗಿದೆ ಅಲ್ಲ ಅತ ಪದೇ ಪದೆ ಕೇಳೋಕೆ ಆರಂಭಿಸಿದರು. ಬಳಿಕ ಒರಿಜಿನಲ್ ಹಾಡನ್ನು ಮತ್ತೆ ಮತ್ತೆ ಕೇಳಿದರು. ಬಳಿಕ ಅದಕ್ಕೆ ಮತ್ತಷ್ಟು ರೀಲ್ಸ್ ಮಿಕ್ಸ್ ಮಾಡಿ ಒಬ್ಬೊಬ್ಬರು ಒಂದೊಂದು ರೂಪ ಕೊಟ್ಟರು. 

ಬೆಳ್ಳುಳ್ಳಿ ಕಬಾಬ್ ಚಂದ್ರು ಅವರ ರಾಹುಲ್ಲಾ ಡೈಲಾಗ್ಸ್ ಮಿಕ್ಸ್ ಮಾಡಿ ವಿಕಾಸ್ ವಿಕ್ಕಿಪಿಡಿಯ ವೈರಲ್ ಮಾಡಿದರು. ಇನ್ನು ಈ ಹಾಡಿಗೆ ನಟಿ ನಿರ್ಮಾಪಕಿ ಅನುಶ್ರೀ ಕೂಡ ಹೆಜ್ಜೆ ಹಾಕಿದ್ದಾರೆ. ಹೌದು ಆಗಾಗ ಟ್ರಿಪ್, ಟ್ರಕಿಂಗ್ ಎಂದು ಕೆಲಸದ ನಡುವಲ್ಲೇ ಬ್ರೇಕ್ ಪಡೆಯುವ ಅನುಶ್ರೀ ಈಗ ಟ್ರೆಂಡಿಂಗ್ ಸಾಂಗ್ ಕರಿಮಣಿ ಮಾಲೀಕ ನೀನಲ್ಲ ಎಂದು ಕುಣಿದಿದ್ದಾರೆ. ಅದಕ್ಕೆ ತಕ್ಕಂತೆ ಅಭಿಮಾನಿಗಳು ಯಾರದು ಕರಿಮಣಿ ಮಾಲೀಕ ಎಂದು ಪ್ರಶ್ನೆ ಕೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.