ತಂದೆಗೆ ವಿರುದ್ಧವಾಗಿ ಸ್ಕೂಲ್ ನಲ್ಲಿ ಲವ್ ಮಾಡಿದ ಅರ್ಜುನ್ ಜನ್ಯ ಪುತ್ರಿ, ಜನ್ಯ ಕ ಣ್ಣೀರು

 | 
Janya

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ ಅವರನ್ನು "ಹಿಟ್ ಮೆಷೀನ್" ಎಂದು ಕರೆಯುತ್ತಾರೆ. ಅನೇಕ ಸೂಪರ್ ಹಿಟ್ ಹಾಡುಗಳನ್ನು ಕೊಟ್ಟಿರುವ ಅವರು ಈಗ ನಿರ್ದೇಶನ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಆದರೆ ಇತ್ತೀಚೆಗೆ ಅವರ ಮನಸ್ಸನ್ನು ಸ್ಪರ್ಶಿಸಿದ ವಿಷಯವೇ ಅವರ ಮಗಳು ರಜಿತ.

ರಜಿತ ಪಿಯಾನೋದಲ್ಲಿ 8ನೇ ಗ್ರೇಡ್ ಮುಗಿಸಿರುವ ಪ್ರತಿಭಾವಂತ ಕಲಾವಿದೆ. ಸಂಗೀತದಲ್ಲಿ ಹಲವು ಕೋರ್ಸ್‌ಗಳನ್ನು ಮಾಡುತ್ತಿದ್ದು, ಈಗಾಗಲೇ ಅಪ್ಪನ ಸಂಗೀತ ಕಾರ್ಯಗಳಲ್ಲಿ ಸಹಭಾಗಿಯಾಗಿದ್ದಾಳೆ. ಪ್ರೋಗ್ರಾಮಿಂಗ್, ಕೀಬೋರ್ಡ್ ಅರೆಂಜ್‌ಮೆಂಟ್‌ ಸೇರಿದಂತೆ ಅನೇಕ ಸಂಗೀತ ತಂತ್ರಜ್ಞಾನಗಳನ್ನು ಅವಳು ಆಳವಾಗಿ ಕಲಿಯುತ್ತಾಳೆ. "ನಾನು ಪ್ರಾಪರ್ ಮ್ಯೂಸಿಷಿಯನ್ ಅಲ್ಲ, ಆದರೆ ನನ್ನ ಮಗಳು ತುಂಬಾ ಶಾರ್ಪ್. ಅವಳು ಒಳ್ಳೆಯ ಮ್ಯೂಸಿಷಿಯನ್ ಆಗಲಿ, ಚೆನ್ನಾಗಿ ಕಲಿಯಲಿ ಅಷ್ಟೇ ನನ್ನ ಬಯಕೆ ಎಂದು ಅರ್ಜುನ್ ಜನ್ಯ ಹೇಳಿದ್ದಾರೆ.

ಅಪ್ಪನ ಕುರಿತು ಮಾತನಾಡಿದಾಗ ರಜಿತ ಕೂಡ ಭಾವುಕರಾಗಿದ್ದಾಳೆ. ʻಸರಿಗಮಪʼ ವೇದಿಕೆಯಲ್ಲಿ, ಅಪ್ಪ ಯಾವತ್ತೂ ನನ್ನನ್ನು ನಿರಾಶೆ ಮಾಡಿಲ್ಲ. ಯಾವತ್ತೂ ಇನ್ನಷ್ಟು ಕಲಿಯುವಂತೆ ಪ್ರೋತ್ಸಾಹಿಸುತ್ತಾರೆ. ನನ್ನ ಮ್ಯೂಸಿಕ್ ಜರ್ನಿಯಲ್ಲಿ ಅಪ್ಪ ದೊಡ್ಡ ಸಹಾಯ ಮಾಡಿದ್ದಾರೆ ಎಂದು ಹೇಳಿದಳು. ಈ ಮಾತುಗಳನ್ನು ಕೇಳಿ ಪ್ರೇಕ್ಷಕರು ಸಹ ಭಾವುಕರಾದರು.ಅರ್ಜುನ್ ಜನ್ಯ ತಮ್ಮ ಮಗಳ ಬಗ್ಗೆ ಮಾತನಾಡಿದಾಗ ಕಣ್ಣೀರಿಟ್ಟಿದ್ದಾರೆ. "ನನ್ನ ಮಗಳ ವಿಷಯಕ್ಕೆ ಮಾತ್ರ ನಾನು ಎಮೋಷನಲ್ ಆಗುತ್ತೇನೆ. ಅವಳು ಚಿಕ್ಕವಯಸ್ಸಿನಿಂದ ಕಲಿತು ಇಂದು 8ನೇ ಗ್ರೇಡ್ ಪಿಯಾನಿಸ್ಟ್ ಆಗಿದ್ದಾಳೆ.

ನಾನು ಮಾಡದದ್ದನ್ನೆಲ್ಲಾ ಅವಳು ಸಾಧಿಸುತ್ತಿದ್ದಾಳೆ. ನನಗೆ ಅವಳ ಮೇಲೆ ಹೆಮ್ಮೆ ಇದೆ. ಇನ್ನೂ ದೊಡ್ಡ ಮಟ್ಟಕ್ಕೆ ಹೋಗುತ್ತಾಳೆ ಅನ್ನೋ ನಂಬಿಕೆ ಇದೆ ಎಂದು ಹೇಳಿದ್ದಾರೆ.ಸಾಮಾನ್ಯವಾಗಿ ತಾಳ್ಮೆಯುಳ್ಳ ವ್ಯಕ್ತಿಯಾಗಿರುವ ಅರ್ಜುನ್ ಜನ್ಯ, ಮಗಳ ವಿಷಯಕ್ಕೆ ಬಂದಾಗ ಮಾತ್ರ ಭಾವುಕರಾಗುತ್ತಾರೆ. ಸಂಗೀತ ಲೋಕದಲ್ಲಿ ಹೊಸ ತಲೆಮಾರಿನ ಪ್ರತಿನಿಧಿಯಾಗಿ ರಜಿತ ಹೊರಹೊಮ್ಮುತ್ತಿರುವುದು ಕನ್ನಡಿಗರಿಗೆ ಸಂತೋಷ ತಂದಿದೆ.