ಧ್ರುವ ಸರ್ಜಾ ಅವರ ಇಬ್ಬರು ಮಕ್ಕಳ ಹೆಸರು ಬಿಚ್ಚಿಟ್ಟ ಅರ್ಜುನ್ ಸರ್ಜಾ, ಮೇಘನಾ ರಾಜ್ ಶಾ.ಕ್

 | 
G

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮಿಬ್ಬರು ಮಕ್ಕಳಿಗೆ ನಾಮಕರಣ ಮಾಡಲು ಮುಂದಾಗಿದ್ದಾರೆ. ಅಂದಹಾಗೆಯೇ ಜನವರಿ 22ರ ರಾಮಮಂದಿರ ಉದ್ಘಾಟನಾ ವಿಶೇಷ ದಿನದಂದೇ ಮಕ್ಕಳಿಗೆ ನಾಮಕರಣ ಮಾಡಲಿದ್ದಾರೆ. ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ನಡೆಯಲಿಕ್ಕಿದೆ. ಅದೇ ದಿನವೇ ತಮ್ಮ ಇಬ್ಬರು ಮಕ್ಕಳಿಗೂ ನಾಮಕರಣ ಮಾಡಲು ತೀಮಾರ್ನಿಸಿದ್ದಾರಂತೆ.

ಧ್ರುವಾ ಮತ್ತು ಪ್ರೇರಣಾ ದಂಪತಿಗೆ ಒಂದು ಗಂಡು, ಒಂದು ಹೆಣ್ಣು ಮಗುವಿದ್ದು, ರಾಮಾಯಣ ಮತ್ತು ಮಹಾಭಾರತದ ಮಹಾಕಾವ್ಯಗಳಲ್ಲಿನ ಹೆಸರುಗಳನ್ನೇ ಮಕ್ಕಳಿಗೆ ಇಡಲು ಯೋಚಿಸಿದ್ದಾರಂತೆ.‌ ಧ್ರುವ ಕಳೆದ ವರ್ಷ 2ನೇ ಮಗುವಿಗೆ ತಂದೆಯಾದರು. ಮೊದಲ ಮಗು ಹೆಣ್ಣಾಗಿದ್ದು, ಇಬ್ಬರಿಗೂ 2024ರಲ್ಲಿ ಹೆಸರಿಡಲು ಮುಂದಾಗಿದ್ದಾರೆ ಎಂದು ಅರ್ಜುನ್ ಸರ್ಜಾ ಅವರು ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಇವರು ತಮ್ಮ ಮೊದಲ ಮಗಳ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದ್ದರು. ಇದೀಗ ಎರಡೂ ಮಕ್ಕಳ ಲಾಲನೆ ಪಾಲನೆಯಲ್ಲಿದ್ದಾರೆ ಪ್ರೇರಣಾ. ಆಗಾಗ್ಗೆ ಮಗಳ ಕ್ಯೂಟ್​ ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಅವರ ಮಗಳ ವಿಡಿಯೋ ಅನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿದ್ದಾರೆ. ಅದರಲ್ಲಿ ಅವರು, ಅಮ್ಮನಿಗೆ ಫೆವರೆಟ್​ ಯಾರು ಎಂದು ಕೇಳಿದ್ದಾರೆ. ತೊದಲು ನುಡಿಯಲ್ಲಿ ಮಗಳು ನಾನು ಎಂದು ಹೇಳಿದ್ದು, ಇದಕ್ಕೆ ಸೋ ಸ್ವೀಟ್ ಎಂದು ಹಲವರು ಕಮೆಂಟ್​ ಹಾಕುತ್ತಿದ್ದಾರೆ. 

ಅಷ್ಟಕ್ಕೂ ಇವರಿಬ್ಬರ ಮದುವೆಯ ಕಥೆ ಕೂಡ ಇಂಟರೆಸ್ಟಿಂಗ್​ ಆಗಿದೆ.  ಪ್ರೇರಣಾ ಶಂಕರ್ ಹಾಗೂ ಧ್ರುವ ಸರ್ಜಾ ಅವರು ಅಕ್ಕ ಪಕ್ಕದ ಮನೆಯವರು. ಇವರಿಬ್ಬರು ಚಿಕ್ಕ ವಯಸ್ಸಿನಿಂದಲೇ ಪ್ರೀತಿ ಮಾಡುತ್ತಿದ್ದರು. ಆನಂತರ ಕುಟುಂಬದವರ ಒಪ್ಪಿಗೆ ಮೇರೆಗೆ 2018ರ ಡಿಸೆಂಬರ್ 9ರಂದು ನಿಶ್ಚಿತಾರ್ಥ ಮಾಡಿಕೊಂಡರು.  2019ರ ನವೆಂಬರ್‌ನಲ್ಲಿ ಇವರು ದಾಂಪತ್ಯ ಜೀವನಕ್ಕೆ ಅಡಿ ಇಟ್ಟರು.
 
ಇದಕ್ಕೂ ಮುನ್ನ  ಪ್ರೇರಣಾ ಶಂಕರ್ ಅವರು ಬೆಂಗಳೂರಿನಲ್ಲಿ ಖಾಸಗಿ ಕಾಲೇಜೊಂದರಲ್ಲಿ  ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. ಇದೀಗ ಎರಡು ಮಕ್ಕಳ ಪಾಲನೆಯಲ್ಲಿ ತೊಡಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.