ದರ್ಶನ್ ಕೊ.ಲೆ ವಿಚಾರದ ನಡುವೆ ಭರ್ಜರಿಯಾಗಿ ಮದುವೆಯಾದ ಅರ್ಜುನ್ ಸರ್ಜಾ ಪುತ್ರಿ; ಕನ್ನಡಿಗರು ಫಿದಾ

 | 
Ji

ನಟ ಅರ್ಜುನ್ ಸರ್ಜಾ - ಆಶಾರಾಣಿಯ ಹಿರಿಯ ಪುತ್ರಿ ಐಶ್ವರ್ಯಾ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಮದುವೆಯ ಫೋಟೋಗಳನ್ನು ಹಂಚಿಕೊಂಡು, ಈ ವಿಷಯವನ್ನು ಅಧಿಕೃತಪಡಿಸಿದ್ದಾರೆ.ಚೆನ್ನೈನಲ್ಲಿ ಅರ್ಜುನ್ ಸರ್ಜಾ ಅವರೇ ಹನುಮಾನ್ ದೇಗುಲ ಕಟ್ಟಿಸಿದ್ದರು. ಈ ದೇಗುಲದಲ್ಲಿಯೇ ಕಳೆದ ಅಕ್ಟೋಬರ್ 27 ರಂದು ಐಶ್ವರ್ಯ, ಉಮಾಪತಿ ನಿಶ್ಚಿತಾರ್ಥ ನಡೆದಿತ್ತು. ಈಗ ಇಲ್ಲಿಯೇ ಮದುವೆ ಕೂಡ ನಡೆದಿದೆ.

 ಕೆಲ ವರ್ಷಗಳಿಂದ ಅರ್ಜುನ್ ಸರ್ಜಾ ಅವರು ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಹೀಗಾಗಿ ಅವರು ಸ್ಯಾಂಡಲ್‌ವುಡ್‌ನಲ್ಲಿ ನಟ ಜಗ್ಗೇಶ್ ಸೇರಿ ಕೆಲವರಿಗೆ ಮಾತ್ರ ಮಗಳ ಮದುವೆಯ ಆಮಂತ್ರಣ ನೀಡಿದ್ದರು ಎನ್ನಲಾಗಿದೆ.ಈ ಮದುವೆಗೆ ಯಾರೆಲ್ಲ ಬಂದಿದ್ದರು ಎನ್ನೋದು ರಿವೀಲ್ ಆಗಿಲ್ಲ. ಐಶ್ವರ್ಯ, ಉಮಾಪತಿ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ನಿಶ್ಚಿತಾರ್ಥದ ಬಳಿಕ ಐಶ್ವರ್ಯ ಜನ್ಮದಿನವಿತ್ತು. ಆಗ ಉಮಾಪತಿ ಅವರು ಐಶ್ವರ್ಯಾಗೆ ಭರ್ಜರಿ ಸರ್ಪ್ರೈಸ್ ಪಾರ್ಟಿ ಕೊಟ್ಟಿದ್ದರು.

ತಮಿಳಿನ ಖ್ಯಾತ ಹಾಸ್ಯನಟ ರಾಮಯ್ಯ ಅವರ ಮಗ ಉಮಾಪತಿ ಕೂಡ ತಮಿಳು ಚಿತ್ರರಂಗದಲ್ಲಿದ್ದಾರೆ.ಅರ್ಜುನ್ ಸರ್ಜಾ ಅವರ ಹಿರಿಯ ಪುತ್ರಿ ಐಶ್ವರ್ಯಾ ಅರ್ಜುನ್ ಅವರು 'ಪಟ್ಟತು ಯಾನೈ', 'ಪ್ರೇಮ ಬರಹ', 'ಸೊಲ್ಲಿವಿಡವ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ತಮಿಳು ಹಾಸ್ಯನಟ ರಾಮಯ್ಯ ಅವರ ಪುತ್ರ ಉಮಾಪತಿ ಹಾಗೂ ಐಶ್ವರ್ಯಾ ಅರ್ಜುನ್ ಪ್ರೀತಿ ಮಾಡಿದ್ದರು. ಕುಟುಂಬದ ಒಪ್ಪಿಗೆ ಪಡೆದು ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡು, ಮದುವೆ ಆಗಿದೆ.

ಐಶ್ವರ್ಯಾ ಪತಿ ಉಮಾಪತಿ ಕೂಡ ನಟರಾಗಿದ್ದು, ತಮಿಳು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.ಅರ್ಜುನ್ ಸರ್ಜಾ ಕುಟುಂಬ ದೇವರಲ್ಲಿ ನಂಬಿಕೆ ಇಟ್ಟಿದೆ. ಹೀಗಾಗಿ ಮಗಳ ಮದುವೆಯನ್ನು ಅವರು ಶಾಸ್ತ್ರೋಕ್ತವಾಗಿ ಮಾಡಿದ್ದಾರೆ.ಐಶ್ವರ್ಯಾ ಅರ್ಜುನ್ ಹಾಗು ಉಮಾಪತಿ ಅವರ ಮದುವೆ ಖಾಸಗಿಯಾಗಿ ನಡೆದಿದೆ ಎನ್ನಲಾಗಿದೆ. ಎರಡೂ ಕುಟುಂಬಸ್ಥರು, ಆತ್ಮೀಯರು, ಚಿತ್ರರಂಗದ ಆಪ್ತರು ಮಾತ್ರವೇ ಈ ಮದುವೆಗೆ ಆಗಮಿಸಿದ್ದರು ಎನ್ನಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.