ಅರ್ಜುನ್ ಸರ್ಜಾ ಮಗಳ ಭರ್ಜರಿ ಮದುವೆ ನಡುವೆ ವರನಿಗೆ ಸರ್ಜಾ ಕುಟುಂಬ ಕೊಟ್ಟ ವರದಕ್ಷಿಣೆ ಎಷ್ಟು ಗೊ ತ್ತಾ

 | 
Uu

ಬಹುಭಾಷಾ ನಟ ಅರ್ಜುನ್ ಸರ್ಜಾ ಇತ್ತೀಚೆಗೆ ತಮ್ಮ ಮಗಳು ಐಶ್ವರ್ಯಾ ಮದುವೆ ಮಾಡಿ ಸಂಭ್ರಮಿಸಿದ್ದಾರೆ. ಸರಳವಾಗಿ ತಾವು ಕಟ್ಟಿಸಿರುವ ಆಂಜನೇಯನ ದೇವಸ್ಥಾನದಲ್ಲಿ ಕೆಲವೇ ಆಪ್ತರ ಸಮ್ಮುಖದಲ್ಲಿ ಕಲ್ಯಾಣೋತ್ಸವ ನಡೀತು. ಜೂನ್ 10ರಂದು ಐಶ್ವರ್ಯ- ಉಮಾಪತಿ ರಾಮಯ್ಯ ಹಸೆಮಣೆ ಏರಿದ್ದರು.

ಎರಡೂ ಕುಟುಂಬಗಳ ಆಪ್ತರ ಸಮ್ಮುಖದಲ್ಲಿ ಮದುವೆ ನಡೆದಿತ್ತು. ಬಳಿಕ ಚಿತ್ರರಂಗದ ಆಪ್ತರಿಗೆ ಆರತಕ್ಷಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದಿಂದ ಕೆಲವರು ಹೋಗಿ ನವ ವಧು-ವರರನ್ನು ಹರಸಿ ಬಂದಿದ್ದರು. ಅರ್ಜುನ್ ಸರ್ಜಾ ತಾವು ನಿರೂಪಣೆ ಮಾಡುತ್ತಿದ್ದ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಬಂದಿದ್ದ ಉಮಾಪತಿ ಜೊತೆಗೆ ಮಗಳ ಮದುವೆ ಮಾಡಿ ಮುಗಿಸಿದ್ದಾರೆ.

ಕಳೆದೊಂದು ವಾರದಿಂದ ಕಾಲಿವುಡ್‌ನಲ್ಲಿ ಐಶ್ವರ್ಯ ಸರ್ಜಾ ಹಾಗೂ ಉಮಾಪತಿ ರಾಮಯ್ಯ ಮದುವೆ ವಿಚಾರ ಹಾಟ್ ಟಾಪಿಕ್ ಆಗಿದೆ. ಇನ್ನು ಅರ್ಜುನ್ ಸರ್ಜಾ ವರದಕ್ಷಿಣೆಯಾಗಿ ಅಳಿಯನಿಗೆ ಏನೆಲ್ಲಾ ಕೊಟ್ಟರು ಎನ್ನುವ ಬಗ್ಗೆಯೂ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ತಮಿಳು ಹಾಸ್ಯನಟ ತಂಬಿ ರಾಮಯ್ಯ ಪುತ್ರ ಉಮಾಪತಿ ಕೆಲ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಆಕ್ಷನ್‌ ಕಿಂಗ್‌ಗೆ ಐಶ್ವರ್ಯ ಹಾಗೂ ಅಂಜನಾ ಎನ್ನುವ ಇಬ್ಬರು ಹೆಣ್ಣು ಮಕ್ಕಳು ಮಾತ್ರ ಇದ್ದಾರೆ.

ಹಿಂದೆ ಕನ್ನಡದಲ್ಲಿ ದೊಡ್ಡ ಸಕ್ಸಸ್ ಸಿಗದೇ ಇದ್ದಾಗ ಕಾಲಿವುಡ್ ಕಡೆ ಮುಖ ಮಾಡಿದ್ದರು. ನಂಡ್ರಿ ಎನ್ನುವ ತಮಿಳು ಚಿತ್ರದಲ್ಲಿ ಮೊದಲಿಗೆ ನಟಿಸಿದ್ದರು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಚೆನ್ನೈನಲ್ಲೇ ಸೆಟ್ಲ್ ಆದರು. ಅರ್ಜುನ್ ಸರ್ಜಾ ಬಹಳ ಹಿಂದೆಯೇ ಸಾಕಷ್ಟು ಆಸ್ತಿ ಸಂಪಾಸಿದ್ದರು. ಸಿನಿಮಾಗಳಿಂದ ಬಂಡ ಸಂಭಾವನೆಯನ್ನು ಭೂಮಿಯ ಮೇಲೆ ಹಾಕಿದ್ದರು. ಅಂದರೆ ಸಾಕಷ್ಟು ಜಮೀನು ಕೊಂಡುಕೊಂಡಿದ್ದರು.

ಆಗ ಅರ್ಜುನ್ ಸರ್ಜಾ ಖರೀದಿಸಿದ್ದ ಜಮೀನಿಗೆ ಈ ಭಾರೀ ಡಿಮ್ಯಾಂಡ್ ಬಂದಿದೆ. ಅದೇ ರೀತಿ ಬೇರೆ ಬೇರೆ ಕಡೆಗಳಲ್ಲಿ ಹಣ ಹೂಡಿಕೆ ಮಾಡಿದ್ದರು. ನೂರಾರು ಕೋಟಿ ರೂ. ಆಸ್ತಿ ಕೂಡಿಟ್ಟಿದ್ದಾರೆ ಎನ್ನಲಾಗುತ್ತದೆ. ಇಬ್ಬರೇ ಹೆಣ್ಣು ಮಕ್ಕಳು ಇರುವುದರಿಂದ ಮಕ್ಕಳಿಗೆ ಆ ಆಸ್ತಿಯೆಲ್ಲಾ ಸಿಗುತ್ತದೆ. ಹಾಗಾಗಿ ಅಳಿಯನಿಗೂ ದುಬಾರಿ ಉಡುಗೊರೆಗಳನ್ನೇ ಆಕ್ಷನ್ ಕಿಂಗ್ ನೀಡಿದ್ದಾರೆ ಎಂದು ಚರ್ಚೆ ನಡೆಯುತ್ತಿದೆ. 

ಅಳಿಯನಿಗೆ ದೊಡ್ಡ ಬಂಗಲೆಯನ್ನು ಅರ್ಜುನ್ ಸರ್ಜಾ ವರದಕ್ಷಿಣೆಯಾಗಿ ನೀಡಿದ್ದಾರೆ ಎಂದು ಕಾಲಿವುಡ್‌ನಲ್ಲಿ ಗುಲ್ಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.