ಸಾ ವನ್ನಪ್ಪುವ ಹಿಂದಿನ ದಿನ ಬಡ ಮಹಿಳೆಯ ಬಳಿ ತರಕಾರಿ ಖರೀದಿ ಮಾಡಿದ್ದ ಅರ್ಪಣಾ

 | 
Ud

ಅಚ್ಚ ಕನ್ನಡದ ಸ್ವಚ್ಛ ಕಂಠದ ನಿರೂಪಕಿ ಅಪರ್ಣಾ ಅವರು ಸುಮಾರು ಎರಡು ವರ್ಷಗಳಿಂದ ಶ್ವಾಸಕೋಶದ ಕ್ಯಾನ್ಸರ್‌ನಿಂದ ನರಳುತ್ತಿದ್ದರು. ಎರಡು ವರ್ಷ ಹಿಂದೆ ವೈದ್ಯರು ಆಕೆಗೆ ಕ್ಯಾನ್ಸರ್‌ ದೃಢಪಡಿಸಿದಾಗ, ಇನ್ನು ಆರು ತಿಂಗಳು ಬದುಕಬಹುದು ಎಂದಿದ್ದರು ಎಂದು ಅಪರ್ಣಾ ಅವರ ಪತಿ ನಾಗರಾಜ ವಸ್ತಾರೆ ತಿಳಿಸಿದ್ದಾರ. ವೈಯಕ್ತಿಕವಾಗಿ ನಾನು ಅಪರ್ಣಾ ತುಂಬಾ ಖಾಸಗಿಯಾಗಿ ಬದುಕಿದವರು. ಅಷ್ಟೇ ಖಾಸಗಿಯಾಗಿ ನಾನು ಅವಳನ್ನು ಬಿಳ್ಕೊಡಲಿಕ್ಕೆ ಇಷ್ಟ ಪಡುತೀನಿ. 

ಹಾಗಂತ ನನಗೆ ಸೇರುಕ್ಕೆ ಮುಂಚೆನೇ ಹೆಚ್ಚಾಗಿ ಅಪರ್ಣಾ ಕರ್ನಾಟಕಕ್ಕೆ ಸೇರಿದವಳು. ಅಪರ್ಣಾಗೆ ಒಂದು ಆಶಯ ಇತ್ತು. ಸಾವಿನ ಬಳಿಕ ಮಾಧ್ಯಮಗಳ ಮುಂದೆ‌ ಎಲ್ಲವನ್ನು ಹೇಳುವಂತೆ ತಿಳಿಸಿದ್ರು. ಎರಡು ವರ್ಷದ ಹಿಂದೆ ಜುಲೈನಲ್ಲಿ ಶಾಸ್ವಕೋಶ ಕ್ಯಾನ್ಸರ್ ಅಂತಾ ಗೊತ್ತಾಯ್ತು. ಮೊದಲು ನೋಡಿದ ವೈದ್ಯರು ಆರು ತಿಂಗಳು ಬದಕಬಹುದು ಅಂತ ಹೇಳಿದ್ದರು ಎಂದು ವಸ್ತಾರೆ ತಿಳಿಸಿದ್ದಾರೆ.

ಅವಳು ಛಲಗಾತಿ, ನಾನು ಬದುಕ್ತೀನಿ ಅಂತಾ ಇದ್ಲು. ಅಲ್ಲಿಂದ ಜನವರಿವರೆಗೂ ಕ್ಯಾನ್ಸರ್ ವಿರುದ್ಧ ಹೋರಾಟ ಮಾಡಿದ್ಲು. ಫೆಬ್ರವರಿಯಿಂದ‌ ಸೋತಿದ್ಲು. ಒಂದೂವರೆ ವರ್ಷದಿಂದ ಛಲದಿಂದ ಬದುಕಿದ್ಲು. ಅವಳು ಧೀರೆ, ಇಷ್ಟು ದಿನ ಬದುಕಿದ್ದಾಳೆ. ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ಇಬ್ಬರು ಜಂಟಿಯಾಗಿ ಸೋತಿದೀವಿ. ಬರುವ ಅಕ್ಟೋಬರ್‌ಗೆ ಅವಳಿಗೆ 58 ವರ್ಷ ತುಂಬ್ತಿತ್ತು. 

ಅವಳ ನಿಜವಾದ ವಯಸ್ಸು ಯಾವತ್ತೂ ತೊರಿಸಲಿಲ್ಲ ಎಂದು ವಸ್ತಾರೆ ವಿವರಿಸಿದ್ದಾರೆ.ಇಂದು ಒಂಬತ್ತೂವರೆ ಗಂಟೆ ಸುಮಾರು ದೇಹ ತನ್ನನ್ನ ತಾನು ಹಿಂಪಡೆದಿದೆ. ದಯವಿಟ್ಟು ನೀವೆಲ್ಲಾ ತಮ್ಮ ತಮ್ಮ ಗೂಡುಗಳಿಗೆ ಹೋಗ್ಬಹುದು. ನಾಳೆ ಬೆಳಗ್ಗೆ 7:30 ಗಂಟೆಗೆ ಕರೆದುಕೊಂಡು ಬರುತ್ತೇನೆ. ಇವತ್ತು ಒಂದು ದಿನಾ ನಾನು ನನ್ನ ಕುಟುಂಬದ ಜೊತೆಗೆ ಇರ್ತೀನಿ ಎಂದು ಅವರು ನುಡಿದಿದ್ದಾರೆ.

ಈ ಕ್ಯಾನ್ಸರ್‌ ನಡುವೆಯೂ ಅವರು ಹಲವು ಮಜಾ ವಿತ್ ಸೃಜಾ ಸೇರಿದಂತೆ ಹಲವು ಟಿವಿ ಶೋಗಳಲ್ಲಿ ಹಾಗೂ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಮುಂತಾದ ಸೀರಿಯಲ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಲವಲವಿಕೆಯಿಂದ ನಟಿಸಿ ಎಲ್ಲರನ್ನೂ ನಗಿಸಿದ್ದರು. ನಾವು ಅಪರ್ಣಾ ಕಾಲ್‌ಶೀಟ್‌ಗಾಗಿ ಕಾಯುತ್ತಿದ್ದೆವು ಎಂದು ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಹೇಳಿದ್ದಾರೆ. ಬೃಹತ್‌ ಸಾರ್ವಜನಿಕ ಕಾರ್ಯಕ್ರಮಗಳ ನಿರೂಪಣೆಗೆ ಅಪರ್ಣಾ ಅವರೇ ಮೊದಲ ಆಯ್ಕೆಯಾಗಿದ್ದರು ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ