ಕರ್ನಾಟಕವನ್ನು ಗಡಗಡ ನಡುಗಿಸಿದ ಅರುಣ್ ಕುಮಾರ್ ಪುತ್ತಿಲ ಆಡಿಯೋ ಲೀ ಕ್

 | 
Uii

ಕರಾವಳಿ ಭಾಗದ ಜಿಲ್ಲೆಗಳಲ್ಲಿ ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲ  ಅವರದ್ದೆನ್ನಲಾದ ರಾಜಕೀಯ  ಸಂಬಂಧಿತ ಸಂಭಾಷಣೆಯ ಆಡಿಯೋವೊಂದು ಸದ್ಯ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಉಂಟು ಮಾಡಿದೆ. ಅದರಲ್ಲಿ ಮಹಿಳೆಯೊಂದಿಗೆ ಮಾತನಾಡಿರುವ ಪುತ್ತಿಲ ಬಿಜೆಪಿ ಸೇರ್ಪಡೆ ಮತ್ತು ರಾಜಕೀಯದ ಬಗ್ಗೆ ತೀರಾ ಕೆಟ್ಟದಾಗಿ ಮಾತನಾಡಿದ್ದಾರೆ ಸದ್ಯ ಮಹಿಳೆ ಜೊತೆಗಿನ ಆಡಿಯೋ ಫುಲ್ ವೈರಲ್  ಆಗಿದ್ದು. ರಾಜ್ಯ ಬಿಜೆಪಿ ವಲಯದಲ್ಲಿ ಸಂಚಲನ ಮೂಡಿಸಿದೆ.

ಅಷ್ಟಕ್ಕೂ ಅರುಣ್ ಕುಮಾರ್ ಪುತ್ತಿಲ ಅವರ ಹೆಸರು ರಾಜ್ಯದ ಕರಾವಳಿ ಭಾಗದಲ್ಲಿ ಸಖತ್ ಫೇಮಸ್, ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ತಮಗೆ ಬಿಜೆಪಿ ಟಿಕೆಟ್ ನೀಡಿಲ್ಲವೆಂದು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪುತ್ತಿಲ ಅವರು ಬಿಜೆಪಿಯ ಅಭ್ಯರ್ಥಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದರು. ಮಾತ್ರವಲ್ಲ ಗೆಲುವಿನ ಸಮೀಪಕ್ಕೆ ಬಂದು ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಸೋಲು ಅನುಭವಿಸಿದ್ದರು.

 ಸೋತರೂ ಕೂಡ ದೃತಿಗೆಡದೆ ತಮ್ಮದೇ ಆದ ವರ್ಚಸ್ಸನ್ನು ಕರಾವಳಿ ಭಾಗದಲ್ಲಿ ಹೊಂದಿದ್ದರು. ಒಮ್ಮೆ ಬಿಜೆಪಿಯಿಂದ ದೂರ ಉಳಿದಿದ್ದ ಪುತ್ತಿಲ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತ್ತೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.ಸದ್ಯ ಅವರೀಗ ಬಿಜೆಪಿ ನಾಯಕಿಯೊಬ್ಬರ ಬಳಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗುತ್ತಿದೆ. ನೀವು ಬಿಜೆಪಿಗೆ ಸೇರಿದ್ದು ನಾಚಿಕೆ ಆಗಲಿಲ್ವ ಎಂದು ಮಹಿಳೆ ಕೇಳಿದ್ದಾಳೆ. 

ಆದರೆ, ಇದಕ್ಕೆ ಉತ್ತರಿಸಿದ ಅರುಣ್ ಪುತ್ತಿಲ ಅವರದ್ದೆನ್ನಲಾದ ಧ್ವನಿ ಹೋಲುವ ವ್ಯಕ್ತಿ ‘ರಾಜಕೀಯದಲ್ಲಿ ನಾಚಿಗೆ, ಹೇಸಿಗೆ ಥೂ ಅದೆಲ್ಲಾ ಇಲ್ಲ’, ಅದೆಲ್ಲಾ ಬಿಟ್ಟವರೇ ಪೊಲಿಟೀಶಿಯನ್. ಮಾನ ಮರ್ಯಾದೆ ಎರಡನ್ನೂ ಬಿಡದಿದ್ದರೇ ಉನ್ನತ ಹುದ್ದೆಗೆ ಹೋಗಲು ಸಾದ್ಯವಿಲ್ಲ ಎಂದು ಆ ಮಹಿಳೆಯ ಜೊತೆ ಹೇಳಿದ್ದಾರೆ.ಮಾನ ಮರ್ಯದೆ ಬಿಟ್ಟಿದ್ದರಿಂದಲೇ ಪರಿವಾರದ ಜನ ದೊಡ್ಡವರಾಗಿದ್ದಾರೆ. 

ಇನ್ನೂ ಪರಿವಾರದ ಜನ 3.5 ಕೋಟಿ ರೂ. ಹಣ ಪಡೆದಿದ್ದಾರೆ ಅನ್ನೊ ಬಗ್ಗೆಯೂ ಮಾತನಾಡಲಾಗಿದೆ. ಇದಕ್ಕೆ ಪ್ರತಿಯಾಗಿ ಮಹಿಳೆ ‘ಸೌಶಯಾತ್ಮಾವೀ ಇನಶ್ಯತೀ’ ಎಂಬ ಸಂಸ್ಕೃತ ಶ್ಲೋಕ ಹೇಳಿದ್ದಾಳೆ. ಅಂದರೆ ಸಂಶಯ ಪಟ್ಟವನು ನಾಶವಾಗುತ್ತಾನೆ. ನೀವು ನಾಶ ಆದ್ರಿ ಎಂದು ಮಹಿಳೆ ಮಾತನಾಡಿದ್ದಾಳೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.