ಮತ್ತೊಮ್ಮೆ ಸುದೀಪ್ ಕೆಂಗಣ್ಣಿಗೆ ಗುರಿಯಾದ ಆರ್ಯವರ್ಧನ್ ಗುರೂಜಿ, ಈ ಬಾರಿ ವರ್ತೂರು ವಿನ್ನರ್

 | 
ಪ

ಸದಾ ಒಂದಲ್ಲ ಒಂದು ಹೇಳಿಕೆ ನೀಡಿ ಸುದ್ದಿಯಲ್ಲಿರುವ ಆರ್ಯವರ್ಧನ ಗುರೂಜಿ ಇದೀಗ ಬಿಗ್ ಬಾಸ್‌ ಮೇಲೆ ನನಗೆ ಸಿಟ್ಟು ಇದೆ. ನಾನು ಬರಲ್ಲ ಅಂದ್ರೂ, ಕರೆಸಿಕೊಂಡ್ರು. ನಾನು ಒಬ್ಬ ಸ್ಟಾರ್‌ ರೀತಿ ಬದುಕೋದು. ನನ್ನನ್ನು ಅಲ್ಲಿಗೆ ಕರೆಸಿ ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಆರ್ಯವರ್ಧನ್ ಗುರೂಜಿ ಆರೋಪಿಸಿದ್ದಾರೆ. ಅದಕ್ಕೂ ಕಾರಣವಿದೆ. ಅವರಿಗೆ ಪ್ರತಾಪ್ ಗೆಲ್ಲಬೇಕೆಂಬ ಮನಸ್ಸು ಇದೆ. ಆದರೆ ಪ್ರತಾಪ್ ಸಂಗೀತಾ ನ ಟಾಸ್ಕ್ ಇಂದ ಹೊರಗಿಟ್ಟು ಇದೀಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1 ಮುಗಿದ ಮೇಲೆ ನಮ್ಮನ್ನು ಕೂಡಿ ಹಾಕಿದ್ದರು. ಓಟಿಟಿ ಆದ್ಮೇಲೆ ಮನೆಗೆ ಬಿಟ್ಟಿಲ್ಲ. ನಮ್ಮನ್ನು ಬಿಗ್ ಬಾಸ್ ಸರಿಯಾಗಿ ಬಳಸಿಕೊಂಡಿಲ್ಲ. ಆ ನೋವು ಕಾಡುತ್ತಿತ್ತು ಎಂದು ಹೇಳಿದ್ದಾರೆ.ನಾನು ತೆಂಡುಲ್ಕರ್ ಹಾಗೆ, ನಾನು ಫಾರ್ಮ್‌ನಲ್ಲಿ ಇರುವೆ. ಪ್ಲೇಯರ್ ಆಗಿರುತ್ತೀನಿ. ನಾವು ಜಮೀನ್ದಾರ್ರು. ಜೀತದ ಪದ್ಧತಿ ತುಂಬಾ ಹಿಂದೆ ಇತ್ತು, ಆದರೆ ಬಿಗ್‌ ಬಾಸ್‌ನಲ್ಲಿ ಆ ರೀತಿ ದುಡಿಸಿಕೊಳ್ಳುತ್ತಿದ್ದರು ಎಂದು ಆರೋಪಿಸಿದ್ದಾರೆ.

ಬಿಗ್ ಬಾಸ್‌ ಮನೆಯಲ್ಲಿ ನಾನು ಚೆನ್ನಾಗಿ ಅಡುಗೆ ಮಾಡಿ ಎಲ್ಲರಿಗೂ ತಿನಿಸಿದ್ದೇನೆ. ಅದಕ್ಕೆ ಅವಾರ್ಡ್ ಕೊಡಿ ಅಂತನೂ ಕೇಳಿದ್ದೆ. ಅವರಿಗೆ ಕೃತ್ಞತೆ ಇಲ್ಲ ಎಂದು ಆರ್ಯವರ್ಧನ್‌ ಕಿಡಿ ಕಾರಿದ್ದಾರೆ. ಅಂದು ನನಗೆ ಬಂದ ಗತಿಯೇ ಈಗ ಪ್ರತಾಪ್ ಗೆ ಬಂದಿದೆ. ಅವನು ನಿಜವಾಗಿಯೂ ಒಳ್ಳೆಯ ಸ್ಪರ್ಧಿ ಅವನು ಗೆಲ್ಲಲಿಲ್ಲ ಎಂದರೆ ಗಲಾಟೆ ನಡೆಯುತ್ತದೆ ಎಂದಿದ್ದಾರೆ.

ಬಿಗ್ ಬಾಸ್‌ ನಡೆಸುವುದು ಒಂದು ಫಾರಿನ್ ಕಂಪನಿ. ಆ ವ್ಯಕ್ತಿಗಳಿಗೆ ಇದರ ಬಗ್ಗೆ ಐಡಿಯಾ ಇಲ್ಲವೇ ಇಲ್ಲ ಎಂದಿದ್ದಾರೆ. ಬಿಗ್‌ ಬಾಸ್‌ ಬಗ್ಗೆ ಆರ್ಯವರ್ಧನ್‌ ಹಲವು ಬಾರಿ ನೆಗೆಟಿವ್‌ ಆಗಿ ಮಾತನಾಡಿದ್ದಾರೆ. ಈ ಬಾರಿ ಮತ್ತೊಮ್ಮೆ ಕಿರಿಕ್‌ ಕೀರ್ತಿ ಅವರ ಸಂದರ್ಶನದಲ್ಲಿ ಆರ್ಯವರ್ಧನ್‌ ಹೀಗೆ ಮಾತನಾಡಿದ್ದು, ಬಿಗ್‌ ಬಾಸ್‌ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.