ಬಿಗ್ ಬಾಸ್ ಮನೆಯಿಂದ ಬಂದ ತಕ್ಷಣ ಸಿಹಿಸುದ್ದಿ ಕೊಟ್ಟ ಕಾರ್ತಿಕ್, ಸ್ನೇಹಿತ್ ಕುಟುಂಬದಲ್ಲಿ ‌ಬಿ.ರುಗಾಳಿ

 | 
Hs

ಬಿಗ್​ಬಾಸ್ ಕನ್ನಡ ಸೀಸನ್ 10ರ ವಿಜೇತ ಕಾರ್ತಿಕ್ ಮಹೇಶ್ ಸಖತ್ ಬ್ಯುಸಿಯಾಗಿಬಿಟ್ಟಿದ್ದಾರೆ. ‘ಮಂಡ್ಯ ಹೈದ’ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.ಕಾರ್ತೀಕ್‌ ಮಹೇಶ್ ಮಾತನಾಡಿ, ಬಿಗ್‌ ಬಾಸ್ ಮನೆಯಿಂದ ಹೊರಬಂದ ಮೇಲೆ ಭಾಗವಹಿಸುತ್ತಿರುವ ಮೊದಲ ಕಾರ್ಯಕ್ರಮ ಇದು.

 ನಾನು ಕೂಡ ಹಿಂದೆ ‘ಡೊಳ್ಳು ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದೆ. ನನ್ನ ಜೊತೆ ಅಭಯ್ ಕೂಡ ಅಭಿನಯಿಸಿದ್ದರು. ಈ ಚಿತ್ರದ ಟ್ರೇಲರ್ ತುಂಬಾ ಚೆನ್ನಾಗಿದೆ. ಅಭಯ್ ನನ್ನ ಸ್ನೇಹಿತ. ಆತನಲ್ಲಿ  ಮಾಸ್ ಹೀರೋ ಆಗುವ ಎಲ್ಲಾ ಲಕ್ಷಣಗಳಿವೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.

ಕಾರ್ತಿಕ್ ಮಹೇಶ್ ಈ ಹಿಂದೆ ಸೀರಿಯಲ್‌ಗಳನ್ನ ಮಾಡಿದ್ದಾರೆ. ಸಿನಿಮಾದಲ್ಲೂ ನಟಿಸಿದ್ದಾರೆ. ರಾಷ್ಟ್ರಪ್ರಶಸ್ತಿ ಪಡೆದ ಡೊಳ್ಳು ಚಿತ್ರದಲ್ಲಿ ಕಾರ್ತಿಕ್ ಮಹೇಶ್ ಹೀರೋ ಅನ್ನೋದು ಬಿಗ್ ಬಾಸ್‌ಗೆ ಬಂದ್ಮೇಲೆ ಗೊತ್ತಾಗುತ್ತಿದೆ. ಅಷ್ಟು ವಿಶೇಷವಾಗಿರೋ ಕಾರ್ತಿಕ್ ಮಹೇಶ್ ದೊಡ್ಮನೆ ಒಳಗೆ ಹೋಗುವ ಮುನ್ನ ಒಂದು ಸರಳ ಪ್ರೇಮ ಕಥೆ ಚಿತ್ರದಲ್ಲಿ ಕಾರ್ತಿಕ್ ಮಹೇಶ್ ಅಭಿನಯಿಸಿದ್ದಾರೆ.

ಇನ್ನು ನೆಕ್ಸ್ಟ್ ಅಲ್ಲಿ ಥ್ರಿಲ್ಲರ್ ಮಂಜು ಅವರೊಂದಿಗೆ ಹೊಸ ಸಿನೆಮಾ ಒಂದಕ್ಕೆ ಸೈನ್ ಹಾಕಿದ್ದಾರೆ.ಬಿಗ್ ಬಾಸ್ ನಲ್ಲಿ ಏನೇ ನಡೆದಿದ್ದರೂ ಎಲ್ಲರ ಜೊತೆ ಫ್ರೆಂಡ್‌ಶಿಪ್ ಬೆಳೆಸಿಕೊಳ್ಳುತ್ತೇನೆ. ನನಗೆ ಸಾಕಷ್ಟು ಆಫರ್‌ಗಳು‌ ಬಂದಿದೆ. ಕಥೆ ನೋಡಿ ಆಯ್ಕೆ ಮಾಡಬೇಕಾಗಿದೆ. ಜನರು ನನಗೆ ಹೆಚ್ಚು ಮತ‌ ನೀಡಿ‌ ಹೆಚ್ಚಿನ ಜವಾಬ್ದಾರಿ ನನ್ನ ಮೇಲೆ ಹಾಕಿದ್ದಾರೆ. 

ನನಗೆ ಯಾವುದೇ ನೆಗಿಟಿವ್ ಟ್ರೋಲ್ ಆಗಿಲ್ಲ, ಮಾಡಿದವರು ಮಾಡಲಿ‌ ನನ್ನ ಕೆಲಸ ಮಾಡುತ್ತೇನೆ. ಬಿಗ್ ಬಾಸ್ ಒಂದು ದೊಡ್ಡ ವೇದಿಕೆ. ಎಲ್ಲರ ವ್ಯಕ್ತಿತ್ವವನ್ನು ಹೊರತರುವ ರಿಯಾಲಿಟಿ ಶೋ ಅದಾಗಿದೆ. ನಾವು ಯಾರೂ ಪಾತ್ರ ಮಾಡಲಿಲ್ಲ, ನಮ್ಮ ವ್ಯಕ್ತಿತ್ವ ಹೊರ ಹಾಕಿದೆವು ಮುಂದೆ ಇನ್ನಷ್ಟು ಸಿನೆಮಾ ನಟಿಸುತ್ತೇನೆ ಎಂದಿದ್ದಾರೆ.