ಬಿಗ್ಬಾಸ್ ಹೊಸ ಸೀಸನ್ ಆರಂಭವಾಗುತ್ತಿದ್ದಂತೆ ಹೊಡೆದಾಡಿಕೊಂಡ ಹಳೆ ಜೋಡಿ, ಸಮೀರ್ ಆಚಾಯ೯ ಮುಖವಾಡ ಬಯಲು

 | 
Gs
 ಒಂದೆಡೆ ಬಿಗ್ಬಾಸ್ ಹೊಸ ಸೀಸನ್ ಆರಂಭವಾಗ್ತಿದೆ. ಮತ್ತೊಂದೆಡೆ  ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ಸಮೀರ್ ಆಚಾರ್ಯ ದಂಪತಿ ಕನ್ನಡ ಕಿರುತೆರೆಯಲ್ಲಷ್ಟೇ ಅಲ್ಲದೇ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಫೇಮಸ್‌. ಟ್ರಾವೆಲ್‌, ಸಂಗೀತ ಹಾಗೂ ಮಗಳಿಗೆ ಸಂಬಂಧಿಸಿದ ವಿಡಿಯೋ ಮೂಲಕವೇ ಜನಪ್ರಿಯತೆ ಪಡೆದ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಬಹಳ ಅನ್ಯೋನ್ಯವಾಗಿರುವಂತೆ ನೋಡುಗರೆದುರು ಕಾಣಿಸಿಕೊಳ್ಳುತ್ತಿದ್ದರು.
ಆದರೆ ಇದೀಗ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ಸಮೀರ್ ಆಚಾರ್ಯ ದಂಪತಿ ಜೀವನದಲ್ಲಿ ಅಪಸ್ವರ ಎದ್ದಿದೆ. ಪತ್ನಿ ಶ್ರಾವಣಿ ಸಮೀರ್ ಆಚಾರ್ಯ ಮೇಲೆ ಸಮೀರ್ ಆಚಾರ್ಯ ತಂದೆ-ತಾಯಿಯ ಜೊತೆಗೂಡಿ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಷ್ಟಕ್ಕೂ ನಿನ್ನೆ ಭಾನುವಾರ ಶ್ರಾವಣಿ ಸಮೀರ್ ಆಚಾರ್ಯ ಎಂದಿನಂತೆ ಮನೆಯಲ್ಲಿ ಕೆಲಸದಲ್ಲಿ ತೊಡಗಿದ್ದರಂತೆ. ಈ ವೇಳೆ ಮಗಳು ಜೋರಾಗಿ ಅಳುತ್ತಿದ್ದಳು ಇಂದರಿಂದ ಶ್ರಾವಣಿ ಸಮೀರ್ ಆಚಾರ್ಯ ಮಗಳಿಗೆ ಗದರಿದ್ದಾರೆ. 
ಇದನ್ನು ಕಂಡ ಸಮೀರ್ ಆಚಾರ್ಯ ತಂದೆ ತನ್ನ ಸೊಸೆ ಶ್ರಾವಣಿಗೆ ಬೈದಿದ್ದಾರೆ ಎನ್ನಲಾಗಿದೆ.ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಮನೆಯಲ್ಲಿ ಜಗಳ ಪ್ರಾರಂಭವಾಗಿದೆ. ನೋಡ ನೋಡುತ್ತಿದ್ದಂತೆ ಈ ಜಗಳ ತಾರಕಕ್ಕೇರಿದೆ. ಈ ವೇಳೆ ಸಮೀರ್ ಆಚಾರ್ಯ ಸೇರಿದಂತೆ ಅತ್ತೆ, ಮಾವ ಸೇರಿಕೊಂಡು ಮನಬಂದಂತೆ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇದೇ ವೇಳೆ ಶ್ರಾವಣಿ ತಮ್ಮ ಮೊಬೈಲ್‌ ತೆಗೆದು ಇನ್ಸ್ಟಾಗ್ರಾಂನಲ್ಲಿ ಲೈವ್ ಹೋಗಿದ್ದಾರೆ ಎನ್ನಲಾಗಿದೆ.
ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ಸಮೀರ್ ಆಚಾರ್ಯ ಶ್ರಾವಣಿಯಿಂದ ಮೊಬೈಲ್‌ ಕಿತ್ತುಕೊಂಡು ಒಡೆದು ಹಾಕಿದ್ದಾರೆ. ಈ ಗಲಾಟೆಯಲ್ಲಿ ಶ್ರಾವಣಿ ಅವರಿಗೆ ಕೈ, ಮುಖಕ್ಕೆ ಗಾಯಗಳಾಗಿವೆ. ಸದ್ಯ ಶ್ರಾವಣಿ ಸಮೀರ್ ಆಚಾರ್ಯ ತಮ್ಮ ಮೇಲಿನ ಹಲ್ಲೆ ಖಂಡಿಸಿ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಇನ್ನು ಈ ಗಲಾಟೆಯಲ್ಲಿ ಸಮೀರ್ ಆಚಾರ್ಯ ತಂದೆಯ ತಲೆಗೆ ಗಾಯಗಳಾಗಿವೆ ಎನ್ನಲಾಗಿದೆ. ಪೋಲಿಸರು ರಾಜಿ ಸಂಧಾನ ಮಾಡಿ ಮನೆಗೆ ಕಳಿಸಿದ್ದಾರೆ ಎಂಬ ಮಾತು ಕೇಳಿ ಬರ್ತಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.