ಆಟೋ ಡ್ರೈವರ್ Phone pay ಗೆ 340 ಹಾಕುವ ಬದಲು 35 ಸಾವಿರ ಹಾಕಿದ ಅಸಾಮಿ
Jun 16, 2025, 12:42 IST
|

ಆಗಾಗ ಆಟೋಗಳಿಗೆ ಹೆಚ್ಚು ಹಣ ನೀಡದ ಘಟನೆಗಳ ಬಗ್ಗೆ ಕೇಳಿರ್ತೀರಿ. ಆಟೋ ಚಾಲಕರ ಬಗ್ಗೆ ಕೂಡ ಕೋಪ ತೋರಿಸಿತ್ರೀರಿ ಆದ್ರೆ ಇಲ್ಲಿ ನಡೆದಿರೋ ಘಟನೆ ಬಗ್ಗೆ ಕೇಳಿದ್ರೆ ನಿಜಕ್ಕೂ ಓಮ್ಮೆ ವ್ಹಾ ಅಂತೀರಿ. ಆಟೋ ರಿಕ್ಷಾದಲ್ಲಿ ಪ್ರಯಾಣಿಕರೊಬ್ಬರು ತಮ್ಮ ಪ್ರಯಾಣಕ್ಕೆ 40 ರೂ. ಬದಲು ತಮಗರಿವಿಲ್ಲದೇ ಗೂಗಲ್ ಪೇ ಮಾಡಿದ್ದ ರೂ. 34 ಸಾವಿರ ಹಣವನ್ನು ಹಿಂತಿರುಗಿಸುವ ಮೂಲಕ ಮಡಿಕೇರಿಯ ಆಟೋ ಚಾಲಕ ಸತೀಶ್ ಹಾಗೂ ಆಟೋ ಮಾಲೀಕರು ಹಾಗೂ ಚಾಲಕರ ಸಂಘದವರು ಪ್ರಾಮಾಣಿಕತೆ ಮೆರೆದಿದ್ದಾರೆ.
ಜೂನ್ 11ರಂದು ಎಮ್ಮೆಮಾಡು ನಿವಾಸಿ ಆಲಿ ಎಂಬುವವರು ಮಡಿಕೇರಿಯ ಕಾನ್ವೆಂಟ್ ಜಂಕ್ಷನ್ ಬಳಿಯಿಂದ ಆಟೋ ಏರಿದ್ದು ಸಬ್‌ರಿಜಿಸ್ಟ್ರಾರ್ ಕಚೇರಿ ಬಳಿ ಇಳಿದಿದ್ದರು. ಅವರು ಆಟೋ ಬಾಡಿಗೆ ಹಣ ರೂ. 40 ನೀಡಬೇಕಿತ್ತು. ಆದರೆ ಅವರ ಬಳಿ ನಗದು ಕ್ಯಾಶ್ ಇಲ್ಲದ ಕಾರಣ ಬಾಡಿಗೆ ಹಣ ಸೇರಿಸಿ ರೂ. 500 ಗೂಗಲ್ ಪೇ ಮಾಡುವುದಾಗಿ ಹೇಳಿ, ಉಳಿದ 460 ರೂ.ಕ್ಯಾಶ್ ನೀಡುವಂತೆ ಕೇಳಿಕೊಂಡರು.
ಆದರೆ, 'ತನ್ನ ಬಳಿ ಅಷ್ಟು ಹಣ ಇಲ್ಲ. ಹೀಗಾಗಿ 340 ರೂ. ಗೂಗಲ್ ಪೇ ಮಾಡುವಂತೆ ಹೇಳಿದ ಆಟೋ ಚಾಲಕ ಸತೀಶ್, 300 ರೂ. ಕೊಟ್ಟಿದ್ದಾರೆ. ಆದರೆ ಆಲಿ ಅವರು 340 ರೂ. ಗೂಗಲ್ ಪೇ ಮಾಡುವ ಬದಲು ತನಗೆ ಅರಿವಿಲ್ಲದೆ 34,000 ರೂ.ಗಳನ್ನು ಚಾಲಕನ ಸ್ಕ್ಯಾನರ್‌ಗೆ ಸ್ಕ್ಯಾನ್ ಮಾಡಿ ತೆರಳಿದ್ದರು.ಇದಾದ ಕೆಲ ಹೊತ್ತಿನ ಬಳಿಕ ಟ್ರಾನ್ಸಾಕ್ಷನ್ ಹಿಸ್ಟರಿ ಪರಿಶೀಲಿಸಿದ ಆಟೋ ಚಾಲಕ ಸತೀಶ್ ಅವರಿಗೆ ವಿಷಯ ಗಮನಕ್ಕೆ ಬಂದಿದೆ. ಹೆಚ್ಚು ಹಣ ಜಮೆ ಮಾಡಿದ ಆಲಿ ಅವರನ್ನು ಸಂಪರ್ಕಿಸಲು ಯಾವುದೇ ಸಂಪರ್ಕ ಸಂಖ್ಯೆ ಸ್ಕ್ಯಾನರ್‌ನಲ್ಲಿ ಸಿಗದ ಕಾರಣ ಕಷ್ಟವಾಗಿತ್ತು.
ಇತ್ತ ಹೆಚ್ಚುವರಿ ಹಣ ನೀಡಿದ್ದ ಪ್ರಯಾಣಿಕ ಆಲಿ ಅವರಿಗೂ ಜೂನ್ 12ರ ಮಧ್ಯಾಹ್ನದವರೆಗೂ ವಿಷಯ ಗಮನಕ್ಕೆ ಬಂದಿರಲಿಲ್ಲ. ಬ್ಯಾಂಕಿಗೆ ಬಂದು ಪಾಸ್‌ಪುಸ್ತಕ ಪರಿಶೀಲಿಸಿದಾಗ 34,000 ರೂ. ಗಳನ್ನು ಹಿಂದಿನ ದಿನ ಆಟೋ ಚಾಲಕನಿಗೆ ನೀಡಿರುವುದು ಗೊತ್ತಾಗಿದೆ. ಈ ಕುರಿತು ಆಟೋ ಮಾಲೀಕರು ಹಾಗೂ ಚಾಲಕರ ಸಂಘಕ್ಕೆ ಮಾಹಿತಿ ನೀಡಿದ ಬಳಿಕ ಸಂಘದ ಮುಖೇನ ಮಾಹಿತಿಯನ್ನು ವಾಟ್ಸಾಪ್ ಗ್ರೂಪ್‌ನಲ್ಲಿ ಶೇರ್ ಮಾಡಲಾಗಿತ್ತು. ಇತರೆ ಚಾಲಕರು ತಾ. 11ರಂದು ನಡೆದ ಘಟನೆ ಬಗ್ಗೆ ಚಾಲಕ ಸತೀಶ್ ತಮ್ಮ ಬಳಿ ತಿಳಿಸಿರುವುದಾಗಿ ಸಂಘದವರಲ್ಲಿ ಮಾಹಿತಿ ನೀಡಿದ್ದರು. ನಂತರದಲ್ಲಿ ಗೂಗಲ್ ಪೇ ಅಲ್ಲಿಯೇ ಹಣವನ್ನು ಮರಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.