ಕಸ ಗುಡಿಸುವವಳ‌ ಸಹಾಯ ಪಡೆದು ಜಿಮ್ ವರ್ಕೌಟ್ ಮಾಡಿದ ಅಸಾಮಿ, ಬೆ ಚ್ಚಿಬಿದ್ದ ಕನ್ನಡಿಗರು

 | 
Hs
ಜಿಮ್​ನಲ್ಲಿ ವರ್ಕೌಟ್​ ಮಾಡುವುದು ಎಂದರೆ ಈಗಿನ ಜನರೇಷನ್​ಗೆ ಫುಲ್​ ಫ್ಯಾಶನ್. ಸಖತ್​ ಆಗಿ ಜಿಮ್​ ಮಾಡಿ ಬೈ ಚಿಪ್ಸ್​, ಚೆಸ್ಟ್​, ಶೋಲ್ಡರ್​, ತೈಸ್​ ಬಲಗೊಳಿಸಿ ನೋಡಲು ಆಕರ್ಷಣೆಯಾಗಿರಬೇಕು ಎನ್ನುವುದು ಯಂಗ್​ಸ್ಟಾರ್ಸ್​​ಗಳ ಮಹಾದಾಸೆ. ಜಿಮ್​ ಮಾಡುವುದೇನು ತಪ್ಪಿಲ್ಲ.. ಆದ್ರೆ ಕೆಲವೊಮ್ಮೆ ಇದು ಆರೋಗ್ಯದ ಮೇಲೆ ತೀವ್ರವಾಗಿ ಪರಿಣಾಮ ಬೀರಬಹುದು. ಅದರಲ್ಲೂ ಕೋಚ್ ಇಲ್ಲದೆ ಮಾಡೋಕೆ ಹೋಗ್ಬೇಡಿ.
ಹೌದು ಈ ವಿಡಿಯೋ ನೋಡಿ ವೇಟ್ ಲಿಫ್ಟಿಂಗ್ ಮಾಡುವ ವೇಳೆ ವೇಟ್ ಪ್ರೆಸ್ ಮೈಮೇಲೆ ಬಿದ್ದಿದೆ ನಂತರದಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿ ಒಬ್ಬಳು ಬಂದು ಅದನ್ನು ಎತ್ತಲು ಪ್ರಯತ್ನ ಪಟ್ಟಿದ್ದಾಳೆ. ಕೊನೆಗೆ ಅದು ಅವರ ಕುತ್ತಿಗೆ ಮೇಲೆ ಬಿದ್ದಿದೆ ಆ ಹುಡುಗಿಯ ಸಹಾಯದಿಂದ ಹಾಗೋ ಹೀಗೋ ಅಲ್ಲಿಂದ ಎದ್ದ ಆ ಯುವಕ ಜೀವ ಉಳಿಸಿಕೊಳ್ಳಲು ಹರಸಾಹಸ ಪಟ್ಟು ಉಳಿದಿದ್ದಾನೆ.
ಹಾಗಾಗಿಯೇ ಗೊತ್ತಿಲ್ಲದೆ , ಇಲ್ಲವೇ ಪರಿಣಿತರಿಲ್ಲದೆ ಜಿಮ್ ಗೆ ಕಾಲಿಡಬೇಡಿ ಎಂದು. ಅಷ್ಟಕ್ಕೂ ಅತಿಯಾದ ವರ್ಕೌಟ್ ರೋಗನಿರೋಧಕ ಶಕ್ತಿಯನ್ನು ಬಲಹೀನಗೊಳಿಸುತ್ತೆ. ಇದರಿಂದ ದೇಹದೊಳಿಗಿನ ಮೂಳೆಗಳು ಹಾನಿಯಾಗುವ ಸಂಭವವಿರುತ್ತದೆ. ವರ್ಕೌಟ್ ಮಾಡುತ್ತ ಹೋದಂತೆ ನಮಗೆ ಹುಮ್ಮಸ್ಸು​ ಜಾಸ್ತಿಯಾಗಿ ಇನ್ನಷ್ಟು ಮಾಡಬೇಕು ಎಂಬ ಆಸೆ ಹುಟ್ಟುತ್ತದೆ. 
ಆಗ ನಾವು ಅದನ್ನು ಕಂಟ್ರೋಲ್​ ಮಾಡಿ, ದಿನ ಮಾಡಿದಷ್ಟೇ ಅಥವಾ ಅದಕ್ಕಿಂತ ಕಡಿಮೆಯೇ ಮಾಡಬೇಕು. ನಿರಂತರ ವರ್ಕೌಟ್​ನಿಂದ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಾವೆ.ಅತಿಯಾದ ಜಿಮ್​ನಿಂದಾಗಿ ಹಾರ್ಮೋನ್​ಗಳಲ್ಲಿ ಅಸಮತೋಲವಾಗಿ ದಣಿವು ಹೆಚ್ಚಾಗುತ್ತದೆ. ಇದರಿಂದ ನಿಶಕ್ತಿಗೆ ಬಿದ್ದಂತೆ ಆಗುತ್ತದೆ. ಅಂದರೆ ಯಾವುದೇ ಕೆಲಸದಲ್ಲಿ ಉತ್ಸಹ ಇರುವುದಿಲ್ಲ
ಇಷ್ಟೇ ಅಲ್ಲದೆ ಹೆಚ್ಚು, ಹೆಚ್ಚಾಗಿ ವರ್ಕೌಟ್​ ಮಾಡುವುದರಿಂದ ರಕ್ತದೊತ್ತಡವನ್ನು ಹೆಚ್ಚುತ್ತದೆ. ರಕ್ತದೊತ್ತಡವು ಹೃದಯದ ಮೇಲೆ ಪರಿಣಾಮ ಬೀರಿ ಹೃದಯ ಸಂಬಂಧಿ ಕಾಯಿಲೆ ಜೊತೆ ಜೀವಕ್ಕೆ ಅಪಾಯವು ಆಗಬಹುದು. ನಗರದಂತಹ ಪ್ರದೇಶಗಳಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಿ ಉದ್ಯಾನ ಹಾಗೂ ಜಿಮ್​ಗಳಲ್ಲಿ ವರ್ಕೌಟ್​ ಮಾಡುವುದು ಮನಸಿಗೆ ಕಿರಿ ಕಿರಿ ಎನಿಸಬಹುದು.