ಗಂಡನನ್ನು ಎತ್ತಾಕೊಂಡು ಹೋದ ಆಂಟಿ, ಬೀದಿಗಿಳಿದು ಹೋರಾಡುತ್ತಿರುವ ಪತ್ನಿ

 | 
Hs

ಮದುವೆಯಾಗಿ ಮಕ್ಕಳಿದ್ದರೂ ಅವರಿಬ್ಬರು ಪ್ರೇಮದ ಬಲೆಗೆ ಸಿಲುಕಿ ಪರಾರಿ ಆಗಿದ್ದಾರೆ. ಅವರಿಬ್ಬರನ್ನು ಹುಡುಕಿಕೊಡಿ ಎಂದು ಕುಟುಂಬಸ್ಥರು ಪೊಲೀಸರ ದುಂಬಾಲು ಬಿದ್ದಿದ್ದಾರೆ. ಅವರಿಬ್ಬರಿಗೂ ಮದುವೆ ಆಗಿ ಮಕ್ಕಳಿದ್ದರೂ, ಮತ್ತೊಬ್ಬರ ವ್ಯಾಮೋಹಕ್ಕೆ ಬಿದ್ದಿದ್ದರು. ಆತ ತನ್ನ ಪತ್ನಿ ಮತ್ತು ಮಕ್ಕಳನ್ನು ಬಿಟ್ಟು, ಈಕೆ ಪತಿಯನ್ನು ಬಿಟ್ಟು ಪರಾರಿ ಆಗಿದ್ದಾರೆ. ಈಗ ಪರಾರಿ ಆಗಿರುವ ಮಹಿಳೆಯ ಅಸಲಿ ಪತಿ, ಪತ್ನಿ ಠಾಣೆ ಮೆಟ್ಟಿಲೇರಿದ್ದು ಹುಡುಕಿಕೊಡುವಂತೆ ಪೊಲೀಸರಿಗೆ ದುಂಬಾಲು  ಬಿದ್ದಿದ್ದಾರೆ.

ಪುಟ್ಟೇನಹಳ್ಳಿ ಠಾಣೆಯಲ್ಲಿ ಈ ವಿಚಿತ್ರ ಪ್ರೇಮ ಪ್ರಕರಣವೊಂದು ದಾಖಲಾಗಿದೆ. ನನ್ನ ಹೆಂಡತಿ ಬೇಕು ಎಂದು ಗಂಡ ಹಾಗೂ ಗಂಡ ಬೇಕು ಎಂದು ಹೆಂಡತಿ ಠಾಣೆ ಮೆಟ್ಟಿಲೇರಿದ್ದಾರೆ. ಪುಟ್ಟೇನಹಳ್ಳಿಯ ಇಲಿಯಾಸ್ ನಗರದ ನಿವಾಸಿಯಾದ ಸುಮೈಯಾ ಬಾನು ಮತ್ತು ವಸೀಂ ಇಬ್ಬರು 7 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ ಎರಡೂವರೆ ವರ್ಷದ ಹೆಣ್ಣು ಮಗು ಇದೆ. ಆದರೆ ಇತ್ತೀಚೆಗೆ ಪತಿ ವಸೀಂಗೆ ದಿಲ್ ಷಾದ್ ಎಂಬಾಕೆಯ ಜತೆ ಪ್ರೀತಿಯಾಗಿತ್ತು.

ಪತಿ ನಡವಳಿಕೆಯು ಸುಮೈಯಾ ಬಾನುಗೆ ಅನುಮಾನವನ್ನು ಹುಟ್ಟಿಸಿತ್ತು. ಕಳೆದ ತಿಂಗಳು ವಸೀಂ ಹಾಗೂ ದಿಲ್‌ ಷಾದ್‌ ಇಬ್ಬರು ಒಂದೇ ಹೋಟೆಲ್‌ನಲ್ಲಿದ್ದಾಗ, ಕುಟುಂಬಸ್ಥರಿಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದರು. ಪತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ದಿಲ್‌ ಷಾದ್‌ನನ್ನು ಹಿಡಿದು ಥಳಿಸಿದ್ದರು. ಈ ವೇಳೆ ಹೋಟೆಲ್‌ನಲ್ಲಿ ದೊಡ್ಡ ರಾದ್ಧಾಂತವೇ ನಡೆದು ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆಗ ಪೊಲೀಸರು ಎರಡು ಕುಟುಂಬಸ್ಥರಿಗೂ ಬುದ್ಧಿವಾದ ಹೇಳಿ ಕಳುಹಿಸಿದ್ದರು.

ಇಷ್ಟೆಲ್ಲ ಘಟನೆ ಬಳಿಕ ವಸೀಂ ಹಾಗೂ ದಿಲ್‌ ಷಾದ್‌ ರಾತ್ರೋರಾತ್ರಿ ಇಬ್ಬರು ಪರಾರಿಯಾಗಿದ್ದಾರೆ. ಹೀಗಾಗಿ ವಸೀಂ ಪತ್ನಿ ಸುಮೈದಾಭಾನು ನನ್ನ ಪತಿಯನ್ನು ಹುಡುಕಿಕೊಡಿ ಎಂದು ಠಾಣೆಗೆ ದೂರು ನೀಡಿದ್ದಾಳೆ. ವಸೀಂ ಜತೆಗೆ ಪರಾರಿ ಆಗಿರುವ ಈ ದಿಲ್‌ ಷಾದ್‌ ಎಂಬಾಕೆಗೂ ಮದುವೆ ಆಗಿದೆ. ಸದ್ಯ ದಿಲ್‌ ಷಾದ್‌ನ ಪತಿ ನಯೀಂ ಕೂಡ ನನ್ನ ಹೆಂಡತಿನಾ ಹುಡುಕಿಕೊಡಿ ಎಂದು ದೂರು ನೀಡಿದ್ದಾನೆ. 

ಸದ್ಯ ಎರಡು ಕಡೆಯಿಂದಲೂ ದೂರುಗಳನ್ನು ಪಡೆದಿದ್ದು, ಪರಾರಿ ಆಗಿರುವ ಜೋಡಿಗಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.