ಬಿಗ್ಬಾಸ್ ಮನೆಯಲ್ಲಿ ಆಂಟಿ ಅಂಕಲ್ ಲವ್ ಸ್ಟೋರಿ, ಹಂಸಾಗೆ ಪ್ರಪೋಸ್ ಮಾಡಿದ ಲಾಯರ್

 | 
ಗ೭
 ಬಿಗ್‌ಬಾಸ್‌ ಸೀಸನ್‌ 11 ಎರಡನೇ ವಾರಕ್ಕೆ ಕಾಲಿಟ್ಟಿದೆ. ಮೊದಲ ವಾರವೇ ಯಮುನಾ ಶ್ರೀನಿಧಿ ಮನೆಯಿಂದ ಎಲಿಮಿನೇಟ್‌ ಆಗಿದ್ದಾರೆ. ಎರಡನೇ ವಾರದ ನಾಮಿನೇಷನ್‌ ಟಾಸ್ಕ್‌ ಆರಂಭವಾಗಿದೆ. ಮೊದಲ ಸುತ್ತಿನ ಸ್ಪರ್ಧೆಯಲ್ಲಿ ನರಕವಾಸಿಗಳು ವಿನ್‌ ಆಗಿದ್ದಾರೆ. ಸ್ವರ್ಗದಲ್ಲಿರುವವರು ನರಕದವರಿಗೆ ಅಡುಗೆ ಮಾಡಿ ಬಡಿಸಿದ್ದಾರೆ. ಇಷ್ಟು ದಿನಗಳ ಕಾಲ ಗಂಜಿ ಸೇವಿಸುತ್ತಿದ್ದ ನರಕವಾಸಿಗಳು ಈಗ ಹೊಟ್ಟೆ ತುಂಬಾ ಊಟ ಮಾಡಿ ಖುಷಿಯಾಗಿದ್ದಾರೆ.
ನಿನ್ನೆ ಜಗಳವಾಡಿದ್ದ ಹಂಸ ಹಾಗೂ ಜಗದೀಶ್‌ ಇಂದಿನ ಎಪಿಸೋಡ್‌ನಲ್ಲಿ ಖುಷಿಯಿಂದ ಮಾತನಾಡಿದ್ದಾರೆ. ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಜಗದೀಶ್‌ ಲವರ್‌ ಬಾಯ್‌ನಂತೆ ವರ್ತಿಸುತ್ತಾರೆ. ಕ್ಯಾಪ್ಟನ್‌ ಕ್ಯಾಪ್ಟನ್‌ ಐ ಲವ್‌ ಯೂ ಕ್ಯಾಪ್ಟನ್‌ ಎಂದು ಹಂಸ ಹೋದಲ್ಲಿ ಬಂದಲ್ಲಿ ಅವರನ್ನು ಹಿಂಬಾಲಿಸುತ್ತಾರೆ. ಇದಕ್ಕೆ ಪ್ರತಿಕ್ರಿಯಿಸುವ ಹಂಸ, ದಯವಿಟ್ಟು ಎಲ್ಲರೂ ಕ್ಯಾಪ್ಟನ್‌ಗೆ ಮರ್ಯಾದೆ ಕೊಡಿ ಎನ್ನುತ್ತಾರೆ, ನಿಮಗೆ ಬಿಪಿ ಹೆಚ್ಚಾಗುತ್ತದೆ, ಸ್ವಲ್ಪ ಹೊತ್ತು ಸುಮ್ಮನೆ ಕುಳಿತುಕೊಳ್ಳಿ ಎಂದು ಜಗದೀಶ್‌ ಹಂಸಾಗೆ ಹೇಳುತ್ತಾರೆ. 
ನನಗೆ ಚಿಕನ್‌ ಮಂಚೂರಿಯನ್‌ ಬೇಕು, ತೆಗೆದುಕೊಂಡು ಬಾ, ಇಲ್ಲದಿದ್ದರೆ ನಿನ್ನನ್ನೇ ಮಾಡಿಕೊಂಡು ತಿಂದುಬಿಡುತ್ತೇನೆ ಎಂದು ಜಗದೀಶ್‌ ನಗೆ ಚಟಾಕಿ ಹಾರಿಸುತ್ತಾರೆ.ಅವಳ ಕಣ್ಣು ನನ್ನ ಮೇಲೆ.. ನನ್ನ ಕಣ್ಣು ಅವಳ ಮೇಲೆ ಎಂದು ಜಗದೀಶ್‌ ಎ ಚಿತ್ರದ ಹಾಡು ಹಾಡುತ್ತಾರೆ. ಹಂಸ ನಡೆದುಬರುವಾಗ ನಾನು ನಿನ್ನ ಫ್ಯಾನ್‌ ಎಂದು ನೆಲದ ಮೇಲೆ ಮಲಗುತ್ತಾರೆ. ಪೂಜಾ ಗಾಂಧಿ ಅವರಂತೆ ಅವರನ್ನು ತುಳಿದುಕೊಂಡು ಹೋಗಿ ಎಂದು ಸಹ ಸ್ಪರ್ಧಿಗಳು ಹಂಸಗೆ ಹೇಳುತ್ತಾರೆ.
 ಅದರಂತೆ ಹಂಸ ಜಗದೀಶ್‌ ಎದೆ ಮೇಲೆ ಕಾಲಿಡುತ್ತಾರೆ. ಇದನ್ನು ನೋಡಿ ಇತರ ಸ್ಪರ್ಧಿಗಳು ಜೋರಾಗಿ ಅರಚುತ್ತಾರೆ. ಈ ಪ್ರೋಮೋಗೆ ವೀಕ್ಷಕರು ನಾನಾ ರೀತಿ ಕಾಮೆಂಟ್‌ ಮಾಡುತ್ತಿದ್ದಾರೆ. ಬೆಣ್ಣೆ ಶಾಂತಮ್ ನ ಕಡೆಗೂ ಬುಟ್ಟಿಗೆ ಹಾಕಿಕೊಂಡ ಜಗ್ಗು ದಾದ, ಜಗ್ಗು ನೆಕ್ಸ್ಟ್ ಲೆವೆಲ್‌ಗೆ ಎತ್ಕೊಂಡು ಹೋಗ್ತಿದಾನೆ ಬಿಗ್ ಬಾಸ್‌ನ , ನಮ್ ಜಗ್ಗಿ ಇಲ್ದೆ ಈ ಸೀಸನ್ ಬಿಗ್ ಬಾಸ್ ಶೂನ್ಯ ಎಂದೆಲ್ಲಾ ಜನರು ಜಗದೀಶ್‌ಗೆ ಮೆಚ್ಚುಗೆ ಮಾತುಗಳನ್ನು ಆಡುತ್ತಿದ್ದಾರೆ.
ಸದ್ಯ ದೊಡ್ಮನೆಯೊಳಗೆ ಜಗದೀಶ್ ಸಣ್ಣ-ಪುಟ್ಟ ವಿಷಯಕ್ಕೂ ಕ್ಯಾಪ್ಟನ್ ಅಂತಲೇ ಕಾಡುತ್ತಿದ್ದಾರೆ. ಇದಕ್ಕೆ ಆರಂಭದಲ್ಲಿ ಹಂಸ ಸಿಟ್ಟಾಗುತ್ತಿದ್ದರು. ಆದ್ರೀಗ ಅದನ್ನು ತಮಾಷೆಯಾಗಿ ತೆಗೆದುಕೊಳ್ಳುತ್ತಿದ್ದಾರೆ. ಒಟ್ಟಾರೆ ಜಗದೀಶ್ ಹಾಗೂ ಹಂಸ ಜಗಳ ಮನೆಯ ಸದಸ್ಯರಿಗೆ ಹಾಗೂ ಕಿರುತೆರೆ ವೀಕ್ಷಕರಿಗೆ ಸಖತ್ ಮಜಾ ಕೊಡ್ತಿದೆ. ಇನ್ನೊಂದೆಡೆ ಹಂಸ ಕ್ಯಾಪ್ಟನ್ ಆಗಿದ್ದು ಯಾರಿಗೂ ಇಷ್ಟವಾದಂತೆ ಇಲ್ಲ,  ಎಲ್ಲರೂ ತಮ್ಮದೇ ರೀತಿಯಲ್ಲಿ ಅದನ್ನು ವ್ಯಕ್ತಪಡಿಸುತ್ತಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.