ಬಿಗ್ ಬಾಸ್ ಮನೆಯಲ್ಲಿ ಅವಿನಾಶ್ ಪತ್ನಿ ಚಂದ್ರಚೂಡನ‌ ಜೊತೆ ಆಟ, ನಿಜ ಜೀವನದಲ್ಲಿ ಅಂಗವಿಕಲ ಮಗು ಜನನ

 | 
Jd
ಬದುಕು ಜಟಕಾ ಬಂಡಿ ಮೂಲಕ ಫೇಮಸ್ ಆಗಿರುವ ನಟಿ ಅಂದ್ರೆ ಅದು ಮಾಳವಿಕಾ ಅವಿನಾಶ್ ಅವ್ರು ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಹಾಗೂ ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್‌ ಅವರು ಈಗಾಗಲೇ ತಮ್ಮ ಪುತ್ರನ ಬಗ್ಗೆ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಕಳೆದ ಹದಿನೆಂಟು ವರ್ಷಗಳಿಂದ ಮಗನನ್ನು ಬಹಳ ಆತ್ಮವಿಶ್ವಾಸದಿಂದ ಬೆಳೆಸಿದ್ದ ಮಾಳವಿಕಾ ಅವಿನಾಶ್‌ ಅವರಿಗೆ ಈಗ ಒಂದು ಅಳುಕು ಕಾಡುತ್ತಿದೆ. ಜೀವನದ ಮಧ್ಯದ ಘಟ್ಟದಲ್ಲಿರುವ ಅವರು ಈಗ ತಮ್ಮನ್ನು ಕಾಡುತ್ತಿರುವ ಯೋಚನೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ನಮಗೆ ಮದುವೆಯಾದ ತಕ್ಷಣ ನನ್ನ ಮಗ ಹುಟ್ಟಲಿಲ್ಲ. ಒಂದಷ್ಟು ವರ್ಷಗಳು ಇಬ್ಬರೂ ಕೆಲಸ ಮಾಡುತ್ತಿದ್ದೆವು. ಯಾವುದೋ ಒಂದು ಹಂತದಲ್ಲಿ ಕೆಲಸಕ್ಕೆ ಬ್ರೇಕ್‌ ಕೊಟ್ಟು ಮಗು ಆಗಲಿ ಅಂತಾ ಅನಿಸಿತು. ನಾನು ಗರ್ಭಿಣಿಯಾಗಿದ್ದಾಗ ಅವನಿಗೆ ಸಮಸ್ಯೆ ಇರುವುದು ಗೊತ್ತಾಗಲಿಲ್ಲ. ಐದು ತಿಂಗಳಲ್ಲಿ ಗರ್ಭಿಣಿ ಸ್ತ್ರೀಯರಿಗೆ ಒಂದು ಸ್ಕ್ಯಾನಿಂಗ್‌ ಮಾಡುತ್ತಾರೆ. ಆ ಪರೀಕ್ಷೆಯಲ್ಲಿ ಆ ಮಗುವಿನ ಬೆಳವಣಿಗೆ, ಸಮಸ್ಯೆ ಇದರ ಬಗ್ಗೆಯಲ್ಲಾ ಗೊತ್ತಾಗುತ್ತದೆ. ಆಗ ನಿಮಗೆ ಆ ಮಗುವನ್ನು ಇಟ್ಟುಕೊಳ್ಳಬೇಕಾ? ಬೇಡವಾ ಎನ್ನುವ ಆಯ್ಕೆ ಇರುತ್ತದೆ. ಆದರೆ ನಮಗೆ ಆ ಟೆಸ್ಟ್‌ ಮಾಡಿಸಿದರೂ ಡಾಕ್ಟರ್‌ ಏನೂ ಹೇಳಲಿಲ್ಲ ಎಂದರು.
ಅವನು ಪ್ರೀ ಮೆಚ್ಯುರ್‌ ಮಗು. 33 ಅಥವಾ 34ನೇ ವಾರಕ್ಕೆ ಹುಟ್ಟಿದ ಮಗು. ಪ್ರೀ ಮೆಚ್ಯುರ್‌ ಮಕ್ಕಳಿಗೆ ಅಂತಾನೇ ಕೆಲವು ಸಮಸ್ಯೆಗಳು ಇರುತ್ತದೆ. ಅವರು ಗಾತ್ರದಲ್ಲಿ ಚಿಕ್ಕದಾಗಿರುತ್ತಾರೆ. ತೂಕ ಇರಲ್ಲ. ನನ್ನ ಮಗ ಒಂದೂವರೆ ಕೆಜಿ ಇದ್ದ ಅನಿಸುತ್ತದೆ. ಮಗು ಆಗಿ ಒಂದು ಹದಿನೈದು ದಿನ ಆ ಮಗುವನ್ನು ನನ್ನ ಕಣ್ಣಿಗೆ ತೋರಿಸಲಿಲ್ಲ. ಆಗ ಮಗು ಸರಿ ಇಲ್ಲ ಅಂತಾ ಗೊತ್ತಾಗಿತ್ತು. ಆದರೆ ಏನು ಅಂತಾ ಗೊತ್ತಾಗಲಿಲ್ಲ. ಅವನು ಮಲಗಿದ್ದನ್ನು ನೋಡಿ ಯಾವುದೋ ಯೋಗಿ ಮಲಗಿದಂತೆ ಇದೆ ಎಂದು ಎಲ್ಲರೂ ಬಂದು ಹೇಳುತ್ತಿದ್ದರು. ಯೋಗಿ ರೀತಿ ಅಂದಾಗಲೂ ನನಗೆ ಅರ್ಥವಾಗಲಿಲ್ಲ.
ಬೆಳೆಯುತ್ತಾ ಬೆಳೆಯುತ್ತಾ ಅವನ ಬೆಳವಣಿಗೆ ಕುಂಠಿತವಾಗುವುದನ್ನು ನೋಡಿ ಗೊತ್ತಾಯ್ತು. ಇಲ್ಲಿ ಏನೋ ಸಮಸ್ಯೆ ಇದೆ ಎಂದು. ಅವನಿಗೆ ಮೂರು ತಿಂಗಳು ಇದ್ದಾಗ ನ್ಯುಮೋನಿಯಾ ಬಂತು. ಅವನು ಬದುಕಲ್ಲ ಎನ್ನುವಂತಹ ಪರಿಸ್ಥಿತಿ ಬಂತು. ಆದರೆ ಬದುಕಿದ. ಅವನಿಗೆ ಹಾಲುಣಿಸುವುದು ತುಂಬಾ ಕಷ್ಟದ ಕೆಲಸ. ತುಂಬಾ ಕಡಿಮೆ ಪ್ರಮಾಣದಲ್ಲಿ ಹಾಲು ಕೊಡಬೇಕಾಗಿತ್ತು. ನಮಗೆ ಸುಧಾರಿಸಿಕೊಳ್ಳಲು ನಾಲ್ಕೈದು ವರ್ಷಗಳು ಆಗಿ ಹೋಯ್ತು.
ನಾನು ಈಗ ಬದುಕಿನ ಮಧ್ಯೆ ನಿಂತಿದ್ದೇನೆ. ಅದು ನಮ್ಮಲ್ಲಿರುವ ಭರವಸೆಯನ್ನು ಕುಗ್ಗಿಸುತ್ತದೆ. ಒಂದು ನಮಗೆ ಯಾರೂ ಇರಲ್ಲ ಎನ್ನುವುದು. ನಮ್ಮ ವಯಸ್ಸಾದ ಅಪ್ಪ-ಅಮ್ಮನನ್ನು ನಾನು ನೋಡಿಕೊಳ್ಳುತ್ತಿದ್ದೇನೆ. ಆದರೆ ಆ ವಯಸ್ಸಿನಲ್ಲಿ ನಮ್ಮನ್ನು ಯಾರು ನೋಡಿಕೊಳ್ಳುತ್ತಾರೆ ಎನ್ನುವ ಆಲೋಚನೆ ಕಾಡುತ್ತದೆ. ಇನ್ನೊಂದು ನಾವಾದ ಮೇಲೆ ಇವನನ್ನು ಯಾರು ನೋಡಿಕೊಳ್ಳುತ್ತಾರೆ ಎನ್ನುವುದು ಎರಡನೇ ಯೋಚನೆ. ಇದೆರಡು ಈಗಿನ ಯೋಚನೆ. ಉಳಿದಿದೆಲ್ಲಾ ಮಾಡಿ ಆಯ್ತು. ಸದ್ಯ ನನಗಿರುವ ಆಲೋಚನೆ ಇದೇ ಎರಡು ಎಂದು ಮಾಳವಿಕಾ ಅವಿನಾಶ್‌ ತಮ್ಮ ಬದುಕಿನ ಭಾಗವಾಗಿರುವ ಮಗನ ಸ್ಥಿತಿ ನೆನೆದು ಬೇಸರ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.