ಅಂಬರೀಶ್ ಮುಖವನ್ನೇ ಹೋಲುವ ‌ಮಗುವಿಗೆ ಜನ್ಮ ಕೊಟ್ಟ ಅವಿವಾ; ಸುಮಲತಾ ಫುಲಾ ಫಿದಾ

 | 
Ud
ರೆಬೆಲ್ ಸ್ಟಾರ್ ಅಂಬರೀಶ್‌ ಕುಟುಂಬದಲ್ಲೀಗ ಸಡಗರ, ಸಂಭ್ರಮ ಶುರುವಾಗಿದೆ. ಅಭಿಷೇಕ್ ಅಂಬರೀಶ್ - ಅವಿವಾ ಬಿದಪ್ಪ ದಂಪತಿಗೆ ಮಗು ಜನಿಸಿದೆ. ಗಂಡು ಮಗುವಿಗೆ ಅವಿವಾ ಬಿದಪ್ಪ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಮುದ್ದಾದ ಮಗುವನ್ನ ಎತ್ತಿಕೊಂಡು ಸುಮಲತಾ ಅಪ್ಪಿ ಮುದ್ದಾಡಿದ್ದಾರೆ.
ನಟ ಅಭಿಷೇಕ್ ಅಂಬರೀಶ್‌ - ಅವಿವಾ ಬಿದಪ್ಪ ದಂಪತಿ ಪೋಷಕರಾಗಿ ಬಡ್ತಿ ಪಡೆದ ಸಂತಸದಲ್ಲಿದ್ದಾರೆ. ಮುದ್ದಾದ ಗಂಡು ಮಗುವನ್ನ ಅಭಿಷೇಕ್ ಅಂಬರೀಶ್‌ - ಅವಿವಾ ಜೋಡಿ ಬರಮಾಡಿಕೊಂಡಿದ್ದಾರೆ. ಮಂಗಳವಾರ ಗಂಡು ಮಗುವಿಗೆ ಅವಿವಾ ಬಿದಪ್ಪ ಜನ್ಮ ನೀಡಿದ್ದಾರೆ. ಬೆಳಗ್ಗೆ 8.30ರ ಸುಮಾರಿಗೆ ಗಂಡು ಮಗು ಜನಿಸಿದೆ.
ನಟಿ ಹಾಗೂ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅಜ್ಜಿಯಾದ ಖುಷಿಯಲ್ಲಿದ್ದಾರೆ. ಮೊಮ್ಮಗುವಿನ ಆಗಮನಕ್ಕಾಗಿ ಕಾಯುತ್ತಿದ್ದ ಸುಮಲತಾ ಅಂಬರೀಶ್‌ಗೆ ಇಂದು ಸಿಕ್ಕಾಪಟ್ಟೆ ಖುಷಿಯಾಗಿದೆ. ತಮ್ಮ ಮುದ್ದಾದ ಮೊಮ್ಮಗುವನ್ನು ಕಂಡು ಸುಮಲತಾ ಅಂಬರೀಶ್ ಭಾವುಕರಾಗಿದ್ದಾರೆ. ತಮ್ಮ ಮೊಮ್ಮಗುವನ್ನ ಎತ್ತಿಕೊಂಡು ಸುಮಲತಾ ಅಂಬರೀಶ್ ಮುದ್ದಾಡಿದ್ದಾರೆ.
ಈ ಸಂತಸದ ಸಮಯದಲ್ಲಿ ಅಂಬರೀಶ್‌ ಅವರನ್ನ ಸುಮಲತಾ ಹಾಗೂ ಅಭಿಷೇಕ್‌ ತುಂಬಾ ಮಿಸ್ ಮಾಡಿಕೊಂಡಿದ್ದಾರೆ. ‘ಮಗುವಿನ ರೂಪದಲ್ಲಿ ಮತ್ತೆ ಅಂಬರೀಶ್‌ ಅವರೇ ಹುಟ್ಟಿಬಂದಿದ್ದಾರೆ’, ‘ಮರಿ ಅಂಬರೀಶ್ ಜನನವಾಗಿದೆ’, ‘ಜ್ಯೂನಿಯರ್ ರೆಬೆಲ್ ಸ್ಟಾರ್ ಆಗಮನವಾಗಿದೆ’ ಅಂತೆಲ್ಲಾ ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.