ಸ್ವಂತ ಮಗನಿಂದ ಕಿರಿಕ್ ಕೀತಿ೯ ದೂರ, ಮಗನ ಆ ಮೆಸೇಜ್ ನೋಡಿ ಬಿಕ್ಕಿಬಿಕ್ಕಿ ಕಣ್ಣೀರು
Sep 27, 2024, 20:05 IST
|
ಕಿರಿಕ್ ಕೀರ್ತಿ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಹೌದು ಕೆಲವು ಹೇಳಿಕೆಗಳಿಂದ ಕೆಲವೊಮ್ಮ ಖಾಸಗಿ ಬದುಕಿನಿಂದ ಸುದ್ದಿಯಾಗುತ್ತಲೇ ಇರುತ್ತಾರೆ.ಬಿಗ್ ಬಾಸ್ ಸ್ಪರ್ಧಿ, ಖ್ಯಾತ ನಿರೂಪಕ ಹಾಗೂ ಈಗ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿರುವ ಕಿರಿಕ್ ಕೀರ್ತಿ ತಮ್ಮ ತಾಯಿಯ ಜೊತೆಗಿರುವ ಅಟ್ಯಾಚ್ಮೆಂಟ್ ಹಾಗೂ ಒಂದು ದಿನ ಶೂಟಿಂಗ್‌ನಿಂದ ತಡವಾಗಿ ಬಂದಿದ್ದಕ್ಕೆ ಮಗ ಮಾಡಿದ ಮೆಸೇಜ್ ನೋಡಿ ಭಾವುಕರಾಗಿದ್ದಾರೆ.
ನನ್ನ ಮಗನಿಗೆ ನಾನು ತುಂಬಾನೇ ಅಟ್ಯಾಚ್ ಆಗಿದ್ದೀನ, ಮೊನ್ನೆ ಆಫೀಸಿನಿಂದ ಬರುವುದು ತುಂಬಾ ಲೇಟ್ ಆಗಿತ್ತು ಆಗ ನನ್ನ ಮಗ ಮೆಸೇಜ್ ಕಳುಹಿಸಿದ್ದ ಅಪ್ಪ ಬೇಗ ಬಾ ನನಗೆ ನಿದ್ರೆ ಬರುತ್ತಿಲ್ಲ ಅಂತ. ಅದಿಕ್ಕೆ ನಾನು ಯಾಕಪ್ಪ ಏನಾಯ್ತು ಆರಾಮ್ ಆಗಿ ಮಲ್ಕೋ ಅಂತ ನಾನು ಹೇಳಿದೆ, ಏಕೆಂದರೆ ನನ್ನ ತಂಗಿ ಇದ್ದ ಕಾರಣ ಅಮ್ಮ ಹೋಗಿ ತಂಗಿ ರೂಮಿನಲ್ಲಿ ಮಲಗಿಕೊಂಡಿದ್ದಾರೆ ನನ್ನ ಮಗನ ಜೊತೆ ತಂಗಿ ಮಲಗಿದ್ದಳು.
ನಾನು ರಾತ್ರಿ ಹೋಗಿ ಅವನೊಟ್ಟಿಗೆ ಮಲಗಿಕೊಂಡೆ ಆದರೆ ಬೆಳಗ್ಗೆ ಕೇಳಿದೆ ಯಾಕೆ ಮಗನೆ ಆ ರೀತಿ ಮೆಸೇಜ್ ಕಳುಹಿಸಿದೆ ಅಂತ ಆಗ ಅವನು, ಅಪ್ಪ ನೀವು ಮತ್ತು ಅಜ್ಜಿ ಜೊತೆಗಿದ್ದರೆ ಮಾತ್ರ ನಿದ್ರೆ ಬರುವುದು ಅಂತ ಹೇಳಿದೆ. ನನಗೆ ಮಾತ್ರವಲ್ಲ ನನ್ನ ಮಗನಿಗೂ ತಾಯಿ ಜೊತೆ ಅಟ್ಯಾಚ್ಮೆಂಟ್ ಇದೆ ಎಂದು ಖಾಸಗಿ ಸಂದರ್ಶನದಲ್ಲಿ ಕೀರ್ತಿ ಮಾತನಾಡಿದ್ದಾರೆ.
ನನಗೆ 37 ವರ್ಷ ಆದರೂ ನನ್ನ ತಾಯಿ ಪ್ರಕಾರ ನನಗೆ ಮೂರು ವರ್ಷ. ಅಡುಗೆ ಮಾಡುತ್ತಾರೆ ನನಗೆ ತಿನ್ನಿಸುತ್ತಾರೆ ಹಾಲು ತರುತ್ತಾರೆ.ಯಾರೋ ಬಂದು ಏನೇ ಮಾತನಾಡಲಿ ನನ್ನನ್ನು ತಪ್ಪು ಎಂದು ಸಾಭೀತು ಮಾಡುವ ಪ್ರಯತ್ನ ಮಾಡಿದ್ದರೂ ನನ್ನ ಮಗ ಹಾಗಲ್ಲ ನನ್ನ ಮಗ ಸರಿಯಾಗಿದ್ದಾನೆ ಅಂತಲೇ ಅಮ್ಮ ಫೈಟ್ ಮಾಡುತ್ತಾರೆ. ಈಗಲೂ ನಾನು ಏನೇ ಮಾಡುವ ಮೊದಲು ನನ್ನ ತಾಯಿ ಬಗ್ಗೆ ಯೋಚನೆ ಮಾಡುತ್ತೀನಿ. ನೀನು ಏನೇ ನಿರ್ಧಾರ ಮಾಡಿದರೂ ಅದು ಕರೆಕ್ಟ್ ಆಗಿದೆ ನೀನು ಸರಿಯಾಗಿ ಯೋಚನೆ ಮಾಡಿರುವೆ ಎಂದು ಅಮ್ಮ ಹೇಳುತ್ತಾರೆ ಎಂದು ಕೀರ್ತಿ ಹೇಳಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.