'ಅಯ್ಯೋ ತಗಡೇ' ಅಂದಿದ್ದ ದ ರ್ಶನ್ ಅಂದರ್; ರೊ ಚ್ಚಿಗೆದ್ದ ಉಮಾಪತಿ ಗೌಡ

 | 
U

ರಾಬರ್ಟ್​​ ಸಿನಿಮಾ ಬಳಿಕ ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ನಡುವೆ ಘರ್ಷಣೆ ಉಂಟಾಗಿತ್ತು. ದರ್ಶನ್​​ ಮಾಧ್ಯಮ ಮುಂದೆ ಪ್ರತಿಕ್ರಿಯಿಸುವಾಗ ಉಮಾಪತಿ ಗೌಡಗೆ ತಗಡು ಎಂದು ಹೇಳಿದ್ದರು. ಅದಕ್ಕೆ ಉಮಾಪತಿ ಗೌಡ ಇಂದು ತಗಡಾಗಿರುವವನು ಮುಂದೊಂದು ದಿನ ಚಿನ್ನದ ತಗಡಾಗಬಹುದು ಎಂದು ಪ್ರತ್ಯುತ್ತರ ನೀಡಿದ್ದರು. 

ಇದೀಗ ರೇಣುಕಾಸ್ವಾಮಿ ಪ್ರಕರಣದ ಬೆನ್ನಲ್ಲೇ ನಿರ್ಮಾಪಕ ಉಮಾಪತಿ ಗೌಡರವರು ದರ್ಶನ್​ಗೆ ಟಾಂಗ್​ ಕೊಟ್ಟಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್​ ಹಂಚಿಕೊಳ್ಳುವ ಮೂಲಕ ಪ್ರತ್ಯುತ್ತರ ನೀಡಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಉಮಾಪತಿ ಗೌಡ​ ತಾಳ್ಮೆ ಕೆಲವೊಮ್ಮೆ ಶಕ್ತಿ ಎಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಆ ಮೂಲಕ ತಗಡು ಯಾರು ಗೊತೈತಾ, ಎಂದು ಪರೋಕ್ಷವಾಗಿ ಕೌಂಟರ್ ಕೊಟ್ಟಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್​ ಅರೆಸ್ಟ್​ ಆದ ಬಳಿಕ ಅವರ​ ಹಳೆಯ ಹೇಳಿಕೆಗಳು, ಡೈಲಾಗ್​ಗಳು ಟ್ರೋಲ್​ ಆಗುತ್ತಿದೆ. ಜೊತೆಗೆ ಉಮಾಪತಿ ಪರವಾಗಿ ಹಲವು ಮೀಮ್ಸ್ ವೈರಲ್ ಆಗಿವೆ. ಸದ್ಯ ಮೀಮ್ಸ್ ಗಳನ್ನು ಉಮಾಪತಿ ಗೌಡ ತಮ್ಮ ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸುವಾಗ, ಇವತ್ತು ನಾನು ‘ತಗಡು’ ಇರಬಹುದು. ಮುಂದೊಂದು ದಿನ ನಾನು ಚಿನ್ನದ ತಗಡಾಗುತ್ತೇನೆ. ಸಮಯ ಸಂದರ್ಭ ಉತ್ತರ ಕೊಡುತ್ತದೆ. ಹೀಗೆಯೇ ಜೀವನ ಇರುವುದಿಲ್ಲ, ಮುಂದೊಂದು ದಿನ ಬೀಳುತ್ತದೆ’ ಎಂದು ಉಮಾಪತಿ ಶ್ರೀನಿವಾಸ್ ಹೇಳಿದ್ದರು. ಈಗ ಉಮಾಪತಿ ಶ್ರೀನಿವಾಸ್ ಅವರ ಇದೇ ಮಾತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.