ಗೌತಮಿ ದಾಂಪತ್ಯದಲ್ಲಿ ಬಿ ರುಕು, ಸ್ವಂತ ಮಾವನಿಂದ ಅನುಮಾನದ ನಡತೆ

ನಟಿ ಗೌತಮಿ ಜಾಧವ್-ಅಭಿಷೇಕ್ ಕಾಸರಗೋಡು ದಂಪತಿ ಜೊತೆಗೆ ಅವರ ಕುಟುಂಬ ನಿಂತಿಲ್ವಾ? ಏನು ಸಮಸ್ಯೆ ಆಗಿದೆ ಎಂಬ ಪ್ರಶ್ನೆ ಕಾಡಿದೆ. ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಶೋ ಆರಂಭವಾದಾಗಿನಿಂದಲೂ ಗೌತಮಿ ಅವರ ಪತಿಯ ತಂದೆ ಗಣೇಶ್ ಕಾಸರಗೋಡು ಅವರು ಯಾವುದೇ ಪೋಸ್ಟ್ ಹಂಚಿಕೊಂಡಿರಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ ಆಗಿದ್ದ ಅವರು ಸೊಸೆಯ ವಿಚಾರದಲ್ಲಿ ಮೌನ ತಾಳಿದ್ದರು.
ಆದರೆ ಗೌತಮಿ ಎಲಿಮಿನೇಟ್ ಆದ ದಿನದಿಂದ ಅವರು ಪರೋಕ್ಷವಾಗಿ ಹಾಕುತ್ತಿದ್ದ ಪೋಸ್ಟ್ ವೀಕ್ಷಕರಿಗೆ ಸಾಕಷ್ಟು ಅನುಮಾನ ಮೂಡಿಸಿತ್ತು. ಗೌತಮಿ ಜಾಧವ್ ಕುಟುಂಬದಲ್ಲಿ ಬಿರುಗಾಳಿ, ಸುಂಟರಾಗಳಿ ಎನ್ನುವಂತಹ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಬಹುಶಃ ಗಣೇಶ್ ಕಾಸರಗೋಡು ಅವರು ಈ ವಿಚಾರಕ್ಕೆ ಸಂಬಂಧಪಟ್ಟಂತೆ ತಮ್ಮ ಪತ್ನಿ, ಎರಡನೇ ಮಗ-ಸೊಸೆ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ .
ಬಿರುಗಾಳಿನೂ ಇಲ್ಲ, ಸುಂಟರಗಾಳಿನೂ ಇಲ್ಲ, ಇದು ನಮ್ಮ ಹ್ಯಾಪಿ ಕುಟುಂಬ” ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಗಣೇಶ್ ಕಾಸರಗೋಡು ಅವರ ಈ ರೀತಿಯ ಪೋಸ್ಟ್‌ಗಳು ಸಾಕಷ್ಟು ಅನುಮಾನ ಮೂಡಿಸುತ್ತಿವೆ. ಈ ಬಗ್ಗೆಯೇ ಕಾಮೆಂಟ್ ಬರುತ್ತಿದ್ದು, ಅದಕ್ಕೆ ಗಣೇಶ್ ಅವರ ಉತ್ತರಗಳು ಇನ್ನಷ್ಟು ಗೊಂದಲ ಮೂಡಿಸುತ್ತಿವೆ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11ʼ ಶೋ ಗ್ರ್ಯಾಂಡ್ ಫಿನಾಲೆಗೆ ಒಂದು ವಾರ ಇರುವಾಗ ಗೌತಮಿ ಜಾಧವ್ ಅವರು ಎಲಿಮಿನೇಟ್ ಆಗಿದ್ದರು. ಆಗ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಅವರು ಸೋಶಿಯಲ್ ಮೀಡಿಯಾದಲ್ಲಿ “ಅನ್ಯಾಯದ ಬೇಡಿಕೆ ಪ್ರಾರ್ಥನೆಯನ್ನು ಮುಲಾಜಿಲ್ಲದೆ ಧಿಕ್ಕರಿಸುವ, ತಿರಸ್ಕರಿಸುವ ಅಮ್ಮ ವನದುರ್ಗೆಗೆ ನಮೋ ನಮಃ” ಎಂದು ಹೇಳಿದ್ದರು.
ಗಣೇಶ್ ಕಾಸರಗೋಡು ಅವರು ಇದ್ದಕ್ಕಿದ್ದಂತೆ ಯಾಕೆ ಈ ಥರ ಪೋಸ್ಟ್ ಹಂಚಿಕೊಂಡರು ಎಂಬ ಪ್ರಶ್ನೆ ಬಂದಿದ್ದರು. ಇವರ ಪೋಸ್ಟ್‌ಗೆ ಅನೇಕರು ಸೊಸೆ ಬಗ್ಗೆ ಹಾಕಿರುವ ಪೋಸ್ಟ್ ಎಂದು ಪ್ರಶ್ನೆ ಮಾಡಿದ್ದುಂಟು, ಅದಕ್ಕೆ ಗಣೇಶ್ ಅವರು ಉತ್ತರ ಕೊಟ್ಟಿರಲಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.