ಬಾಲ ನಟಿಯಾಗಿ ಮಿಂಚುತ್ತಿದ್ದ ಬೇಬಿ ಶಾಮಿಲಿ ಇವತ್ತು ಎಷ್ಟು ಮುದ್ದು ಮುದ್ದಾಗಿದ್ದಾ ಳೆ
Aug 7, 2024, 08:34 IST
|
ಚಿಕ್ಕ ಮಗು ನಟಿಸುತ್ತಿದೆ ಅಂದರೆ ಮೊದಲು ನೆನಪಾಗುವುದೇ ಬೇಬಿ ಶಾಮಿಲಿ. ಹೌದು ಒಂದು ಕಾಲದಲ್ಲಿ ಬಾಲ ಕಲಾವಿದೆಯಾಗಿ ಹಲವು ಚಿತ್ರಗಳಲ್ಲಿ ನಟಿಸಿ ಮೆಚ್ಚುಗೆ ಪಡೆದುಕೊಂಡಿದ್ದ ನಟಿ. ಮಧುರವಾದ ಮಾತುಗಳು ಮತ್ತು ಮುಗ್ಧ ಅಭಿನಯದ ಮೂಲಕ ಸಿನಿಪ್ರಿಯರನ್ನು ರಂಜಿಸುತ್ತಿದ್ದರು. ಈ ಮುದ್ದಾದ ಹುಡುಗಿ 90ರ ದಶಕದ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು.
ಜಗತ್ತು ಸಂಪೂರ್ಣವಾಗಿ ತಿಳಿದಿಲ್ಲದ ವಯಸ್ಸಿನಲ್ಲಿಯೂ ಅದೆಷ್ಟೋ ಅಭಿಮಾನಿಗಳನ್ನು ಮನಗೆದ್ದಿದ್ದು ಸುಳ್ಳಲ್ಲ. ಆಗ ಬೇಬಿ ಶಾಮಿಲಿಗೆ ವಿಶಿಷ್ಟವಾದ ಐಡೆಂಟಿಟಿ ಇತ್ತು. ಆ ಮಗುವಿನ ಅಭಿನಯ ನೋಡಲು ಜನ ಥಿಯೇಟರ್ʼಗಳಿಗೆ ಬರುತ್ತಿದ್ದರು. ಮುದ್ದಾದ ಮಾತಿನಿಂದಲೇ ಎಲ್ಲರಿಗೂ ಮೋಡಿ ಮಾಡಿದ್ದಳು.
ಬೇಬಿ ಶಾಮಿಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಅನೇಕ ಭಾಷೆಗಳಲ್ಲಿ ಅಭಿನಯಿಸಿದ್ದರು. ಆದರೆ ಆ ನಂತರ ಚಿತ್ರರಂಗದಿಂದ ದೂರವಾದರು. ಹಲವು ವರ್ಷಗಳ ನಂತರ ಸಿದ್ಧಾರ್ಥ್ ಅಭಿನಯದ ಓಯ್ ಚಿತ್ರದ ಮೂಲಕ ಬೆಳ್ಳಿತೆರೆಗೆ ನಾಯಕಿಯಾಗಿ ಪರಿಚಯವಾದರು.ಆದರೆ ಬಾಲ್ಯದಲ್ಲಿ ಬಂದ ಮನ್ನಣೆ ದೊಡ್ಡವರಾದ ಮೇಲೆ ಬರಲಿಲ್ಲ.
ʼಓಯ್ʼ ಚಿತ್ರ ಪಾಸಿಟಿವ್ ಟಾಕ್ ಪಡೆದರೂ ಶಾಮಿಲಿ ಅಷ್ಟಾಗಿ ಕ್ಲಿಕ್ ಆಗಲಿಲ್ಲ. ಇದರಿಂದಾಗಿ ನಾಯಕಿಯಾಗಿ ಅವಕಾಶಗಳು ವಿರಳವಾದವು.ಶಾಮಿಲಿ 10 ಜುಲೈ 1987 ರಂದು ಕೇರಳದಲ್ಲಿ ಜನಿಸಿದ ಅವರಿಗೆ ಈಗ 37 ವರ್ಷ ವಯಸ್ಸು. ತಮ್ಮ ಮೂರನೇ ವಯಸ್ಸಿನಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅವರು, ಹಲವು ಚಿತ್ರಗಳಲ್ಲಿ ನಟಿಸಿದ್ದರೂ ನಾಯಕಿಯಾಗಿ ಒಂದೇ ಒಂದು ಸಿನಿಮಾ ಮಾಡಿದ್ದಾರೆ.
ಆ ನಂತರ ಶಾಮಿಲಿ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಅಂದಹಾಗೆ ಆಕೆ ಈಗ ಅಮೆರಿಕದಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.