ಕನ್ನಡಿಗರಿಗೆ ಕಹಿಸುದ್ದಿ, ಕೋಟಿ ಬೆಲೆಯ ಸಿನಿಮಾ ನಿರ್ದೇಶಕ ಹೃದಯಾಘಾತಕ್ಕೆ ಬ.ಲಿ

 | 
ರಾ

ನಟ ರವಿಚಂದ್ರನ್ ಅವರ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ಕನ್ನಡ ಚಿತ್ರರಂಗದ ಜನಪ್ರಿಯ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್‌ ಹೃದಯಸ್ತಂಭನದಿಂದ ನಿಧನರಾಗಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಸಾಹಸ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಇವರ ನಿಧನಕ್ಕೆ ಚಿತ್ರರಂಗ ಆಘಾತ ವ್ಯಕ್ತಪಡಿಸಿದೆ. 

ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ 900ಕ್ಕೂ ಹೆಚ್ಚು ಸಿನಿಮಾಗಳಿಗೆ ಇವರು ಸ್ಟಂಟ್‌ ಮಾಸ್ಟರ್‌ ಆಗಿ ಕಾರ್ಯನಿರ್ವಹಿಸಿದ್ದರು. ಕ್ರಿಸ್‌ಮಸ್‌ ದಿನದಂದು ಸೋಷಿಯಲ್‌ ಮೀಡಿಯಾದಲ್ಲಿ ಮೇರಿ ಕ್ರಿಸ್‌ಮಸ್‌ ಎಂದು ತನ್ನ ಕುಟುಂಬದವರ ಜತೆ ಫೋಟೋ ಹಾಕಿದ್ದರು. ಎಲ್ಲರೊಂದಿಗೆ ಲವಲವಿಕೆಯಲ್ಲಿದ್ದ ಜಾಲಿ ಬಾಸ್ಟಿನ್‌ ಅವರು ಡಿಸೆಂಬರ್‌ 26ರಂದು ಹಠಾತ್‌ ಹೃದಯಸ್ತಂಭನದಿಂದ ಮೃತಪಟ್ಟರು.

ಪುಟ್ನಂಜ, ಆಪರೇಷನ್‌ ಜಾವಾ, ಒರು ಸಿನೆಮಕ್ಕರನ್‌, ಸಲಗ, ಪಾಪ್‌ಕಾರ್ನ್‌ ಮಂಕಿ ಟೈಗರ್‌, ಅಣ್ಣಯ್ಯ, ನಟ್ಟುಕ್ಕು ಒರು ನಾಲವನ್‌, ಬೆಂಗಳೂರು ಡೇಸ್‌, ಕ್ರೇಜಿಸ್ಟಾರ್‌, ಸೂಪರ್‌ ರಂಗ, ಸ್ಟೈಲೊ, ಅರಮನೆ, ಗಾಳಿಪಟ, ಸೈಲೆನ್ಸ್‌, ಓವರ್‌ಟೇಕ್‌ ಸೇರಿದಂತೆ ಹಲವು ಸಿನಿಮಾಗಳಿಗೆ ಇವರು ಸಾಹಸ ನಿರ್ದೇಶಕರಾಗಿದ್ದರು. ಇವರು 24 ಇವೆಂಟ್ಸ್‌ ಎಂಬ ಇವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪನಿಯನ್ನೂ ಹೊಂದಿದ್ದರು. 

ಇವರು ಹಾಡುಗಾರ ಕೂಡ. ತನ್ನದೇ ಆರ್ಕೆಸ್ಟ್‌ ಗ್ರೂಪ್‌ ಹೊಂದಿದ್ದ ಇವರು ತಾವೇ ಲೀಡ್‌ ಸಿಂಗರ್‌ ಆಗಿ ಹಾಡುತ್ತಿದ್ದರು. ಅಲೆಪ್ಪಿಯಲ್ಲಿ 1966ರ ಸೆಪ್ಟೆಂಬರ್‌ 24ರಂದು ಜನಿಸಿದರು. ಇವರು ಬೆಳೆದದ್ದು ಬೆಂಗಳೂರಿನಲ್ಲಿ. ಬೆಂಗಳೂರಿನ ಸೇಂಟ್‌ ಪ್ಯಾಟ್ರಿಕ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಇವರ ತಂದೆ ಮತ್ತು ತಾತಾ ಮೆಕ್ಯಾನಿಕ್‌ ಆಗಿದ್ದರು. ಇವರು ಕೂಡ ಮೆಕ್ಯಾನಿಕ್‌ ಆಗಿಯೇ ವೃತ್ತಿ ಜೀವನ ಆರಂಭಿಸಿದ್ದರು. 

ಬೈಕ್‌ ಮೆಕ್ಯಾನಿಕ್‌ ಆಗಿದ್ದ ಇವರಿಗೆ ಬೈಕ್‌ ವೀಲಿಂಗ್‌ ಪ್ಯಾಷನ್‌ ಇತ್ತು. ಇವರ ಪ್ರತಿಭೆ, ಸಾಹಸವನ್ನು ಸಿನಿಮಾ ರಂಗದವರು ಗುರುತಿಸಿದರು. ಸ್ಟಂಟ್‌ಮ್ಯಾನ್‌ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು. ಇವರು ಪ್ರೇಮಲೋಕ ಸಿನಿಮಾದಲ್ಲಿ ರವಿಚಂದ್ರನ್‌ ಡ್ಯೂಪ್‌ ಆಗಿ ತನ್ನ ಸಿನಿಮಾ ಸ್ಟಂಟ್‌ ವೃತ್ತಿ ಆರಂಭಿಸಿದ್ದರು. ಇನ್ನು ಇವರ ಸಾವಿಗೆ ಚಿತ್ರರಂಗದ ಹಲವಾರು ಕಲಾವಿದರು ಕಂಬನಿ ಮಿಡಿದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.