ಕನ್ನಡಿಗರಿಗೆ ಕಹಿಸುದ್ದಿ; ಹೊಸ ರೀತಿಯ ಖಾಯಿಲೆಗೆ ತುತ್ತಾದ ಅನುಷ್ಕಾ ಶೆಟ್ಟಿ

 | 
Jd

ಅನುಷ್ಕಾ ಶೆಟ್ಟಿ ಪರಿಚಯ ಇಲ್ಲದವರು ಕಡಿಮೆ. ಬಾಹುಬಲಿ ಚಿತ್ರದ ನಾಯಕಿ ತನ್ನ ನಗು ಮುಖದಿಂದ ಎಲ್ಲರನ್ನು ಸೆಳೆಯುವಂತಹ ಆಕರ್ಷಣೀಯ ವ್ಯಕ್ತಿತ್ವದವರು. ಆದರೆ ಈಗ ಆಕೆ ಕೂಡ ತುಂಬಾ ಅಪರೂಪದ ವಿಶೇಷ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇಲ್ಲಿ ವ್ಯಕ್ತಿಯು ಯಾವುದೇ ಉದ್ದೇಶವಿಲ್ಲದೆ ನಗುವುದು ಅಥವಾ ಅಳಬಹುದು.

ನನಗೆ ನಗುವ ಕಾಯಿಲೆ ಇದೆ. ನಗುವುದು ಒಂದು ಸಮಸ್ಯೆಯಾ ಎಂದು ನಿಮಗೆ ಅಚ್ಚರಿಯಾಗಬಹುದು. ಆದರೆ ನನಗೆ ಇದೊಂದು ಸಮಸ್ಯೆ. ಯಾಕೆಂದರೆ, ನಾನು ನಗುವುದನ್ನು ಆರಂಭಿಸಿದರೆ ೧೫-೨೦ ನಿಮಿಷ ಕಾಲ ನಗುತ್ತಲೇ ಇರುತ್ತೇವೆ. ಯಾವುದೇ ಕಾಮಿಡಿ ದೃಶ್ಯಗಳನ್ನು ಚಿತ್ರೀಕರಿಸುವ ವೇಳೆ ಅಥವಾ ನೋಡುತ್ತಿರುವಾಗ ನಾನು ಬಿದ್ದು ಬಿದ್ದು ನಕ್ಕಿರುವುದು ಇದೆ.

 ಇದರಿಂದ ಕೆಲವು ಸಂದರ್ಭದಲ್ಲಿ ಶೂಟಿಂಗ್ ಕೂಡ ನಿಲ್ಲಿಸಲಾಗಿದೆ ಎಂದು ಅನುಷ್ಕಾ ತನ್ನ ಕಾಯಿಲೆ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.ಸೂಡೋಬಲ್ಬಾ ಪರಿಣಾಮ ಎಂದು ಕರೆಯಲ್ಪಡುವ ಇದು ತುಂಬಾ ಅಪರೂಪದ ಮೆದುಳಿನ ನರದ ಸಮಸ್ಯೆಯಾಗಿದೆ ಮತ್ತು ಯಾವುದೇ ಕಾರಣವಿಲ್ಲದೆ ನಗುವುದು ಅಥವಾ ಅಳುವುದು ಇದರ ಸಮಸ್ಯೆ. 

ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಅನುಷ್ಕಾ ದೃಢಪಡಿಸಿದ್ದಾರೆ ಮತ್ತು ಆಕೆ ಸಂದರ್ಶನದಲ್ಲಿ ಹೇಳಿರುವ ಲಕ್ಷಣ ಮತ್ತು ಪಿಬಿಎ ಲಕ್ಷಣಗಳು ಸಾಮಾನ್ಯವಾಗಿದೆ. ಪರಿಸ್ಥಿತಿಯು ಏನೇ ಆಗಿದ್ದರೂ ಹಠಾತ್ ಆಗಿ ಅನಿಯಂತ್ರಿತವಾಗಿ ನಗುವುದು ಅಥವಾ ಅಳುವುದನ್ನು ಪಿಬಿಎ ಎಂದು ಕರೆಯಲಾಗುತ್ತದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.