ಕನ್ನಡಿಗರಿಗೆ ಕಹಿಸುದ್ದಿ; ಲಾರಿ ಡ್ರೈವರ್ ಅರ್ಜುನ್ ಬ ದುಕಿಲ್ಲ; ಮಲ್ಪೆ ಈಶ್ವರ್ ಸ್ಪಷ್ಟತೆ

ಶಿರೂರು ಗುಡ್ಡ ಕುಸಿತದಿಂದಾಗಿ ಹಲವು ಸಾವು ನೋವುಗಳಾಗಿವೆ. ಇನ್ನು ನಾಪತ್ತೆಯಾದವರ ಹುಡುಕಾಟವೂ ನಡೆಯುತ್ತಲೇ ಇದೆ. ಅದರಲ್ಲೂ ಕೇರಳ ಮೂಲದ ಅರ್ಜುನ್ ಲಾರಿ ಸಮೇತ ನಾಪತ್ತೆಯಾಗಿದ್ದು ಹುಡುಕಾಡುತ್ತಿದ್ದಾರೆ. ಇದೀಗ ಅರ್ಜುನ್ ಹುಡುಕಾಟದ ಬೆನ್ನಲ್ಲೇ ಇನ್ನಿಬ್ಬರು ನಾಪತ್ರೆಯಾದವರ ಕುಟುಂಬಸ್ಥರು ಒತ್ತಡ ಹಾಕುತ್ತಿದ್ದಾರೆ. ನಮ್ಮವರ ಮೂಳೆಯನ್ನಾದರೂ ಹುಡುಕಿಕೊಡಿ ಎನ್ನುತ್ತಿದ್ದಾರೆ.
ಇನ್ನು ಇದೇ ಗುಡ್ಡ ಕುಸಿತದಲ್ಲಿ ಜಗನ್ನಾಥ್ ಹಾಗೂ ಲೋಕೇಶ್ ಎಂಬುವವರು ಕೂಡ ನಾಪತ್ತೆಯಾಗಿದ್ದರು. ಜುಲೈ 16ರಂದು ನಡೆದ ಗುಡ್ಡ ಕುಸಿತದಲ್ಲಿ ಜಗನ್ನಾಥ್ ಎಂಬುವವರು ಕಾಣೆಯಾಗಿದ್ದು, ಇಲ್ಲಿಯವರೆಗೂ ಅವರ ಸುಳಿವು ಕೂಡ ಸಿಕ್ಕಿಲ್ಲ. ಇದೋಗ ಅವರ ಮಗಳು ಪಲ್ಲವಿ ತಂದೆಯನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.
ಎಸ್ಡಿಆರ್ಎಫ್, ಎನ್ಡಿಆರ್ಎಫ್, ಡ್ರೋಣ್, ಹೆಲಿಕಾಪ್ಟರ್, ಮುಳುಗು ತಜ್ಞರು ಸೇರಿ ಹಲವರು ಕಳೆದ 13 ದಿನಗಳಿಂದ ಶೋಧ ಕಾರ್ಯಚರಣೆ ನಡೆಸಿದರೂ ಸಹ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಒಂದೆಡೆ ನದಿಯಲ್ಲಿ ನೀರು ರಭಸವಾಗಿ ಹರಿಯುತ್ತಿದ್ದರಿಂದ ನದಿಯೊಳಗೆ ಹೋಗಲು ಸ್ಕೂಬಾ ಡೈ ತಂಡಕ್ಕೆ ಸಾಧ್ಯವಾಗುತ್ತಿಲ್ಲ.
ನಿನ್ನೆ ಮೂರು ಜಾಗದಲ್ಲಿ ಹುಡುಕಾಡಿದಾಗ ಏನೂ ಕಂಡಿಲ್ಲ. ಇವತ್ತು ಮುಖ್ಯ ಪಾಯಿಂಟ್ನಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಹುಡುಕಾಡಿದ್ದಾರೆ. ನಾವು ಕೂಡ ನಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದೇವೆ. 3 ದೇಹಗಳು ಸಿಗಬೇಕಿದೆ. ಅರ್ಜುನ ನ ದೇಹ ಲಾರಿಯಲ್ಲಿದೆ. ಇನ್ನು ನಾಪತ್ತೆಯಾದವರ ಕುಟುಂಬಸ್ಥರ ಕಣ್ಣೀರು ನೋಡೋಕೆ ಆಗುತ್ತಿಲ್ಲ.
ನಮ್ಮ ಪ್ರಯತ್ನ ನಾವು ಮಾಡುತ್ತಿದ್ದೇವೆ. ಒಟ್ಟು 8 ಜನರ ಟೀಮ್ ಸದ್ಯಕ್ಕೆ ಕಾರ್ಯಾಚರಣೆ ಮಾಡುತ್ತಿದೆ. ನಾನು ನೋಡಿದಾಗೆ ಇದು ನಮಗೆ ಸವಾಲಿನ ಕೆಲಸವಾಗಿದೆ ಎಂದು ಈಶ್ವರ್ ಮಲ್ಪೆ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.