BC ಪಾಟೀಲ್ ಅಳಿಯನ ಸಾ ವಿಗೆ ಕೊನೆಗೂ ಸಿಕ್ತು ಕಾರಣ; ಬೆ ಚ್ಚಿಬಿದ್ದ ಮಾವ

 | 
Jr

ಮಾಜಿ ಸಚಿವ, ಸಿನಿಮಾ ನಟ ಹಾಗೂ ಬಿಜೆಪಿ ನಾಯಕ ಬಿಸಿ ಪಾಟೀಲ್ ಅವರ ಅಳಿಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಅರಣ್ಯ ಪ್ರದೇಶದಲ್ಲಿ ರಸ್ತೆ ಬದಿ ಕಾರು ನಿಲ್ಲಿಸಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಹಿರೆಕೆರೂರು ಮಾಜಿ ಶಾಸಕರೂ ಆಗಿರುವ ಬಿಸಿ ಪಾಟೀಲ್ ಅವರ ಅಳಿಯ ಪ್ರತಾಪ್‌ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯಾಗಿದ್ದಾರೆ. 

ಪ್ರತಾಪ್‌ಕುಮಾರ್‌ ಅವರು ಬಿಸಿ ಪಾಟೀಲ್‌ರ ಪತ್ನಿ ವನಜಾಕ್ಷಮ್ಮ ಅವರ ಸ್ವಂತ ಚಿಕ್ಕಪ್ಪನ ಪುತ್ರ. 15 ವರ್ಷಗಳ ಹಿಂದೆ ಸಂಬಂಧಿಯಾದ ಪ್ರತಾಪ್‌ಗೆ ವನಜಾಕ್ಷಮ್ಮ ಮತ್ತು ಬಿಸಿ ಪಾಟೀಲ್ ತಮ್ಮ ದೊಡ್ಡ ಮಗಳು ಸೌಮ್ಯಳನ್ನ 2008ರಲ್ಲಿ ಪ್ರತಾಪ್‌ ಕುಮಾರ್‌ಗೆ ಮದುವೆ ಮಾಡಿಕೊಟ್ಟಿದ್ದರು. ಹೊನ್ನಾಳಿ ತಾಲೂಕಿನ ಶಿವಮೊಗ್ಗ-ಹರಿಹರ ರಸ್ತೆಯಲ್ಲಿರುವ ಅರಕೆರೆ ಗ್ರಾಮದ ಬಳಿ ರಸ್ತೆ ಬದಿ ಪ್ರತಾಪ್‌ ಅವರ ಕಾರು ಪತ್ತೆಯಾಗಿದೆ. ತುಂಬಾ ಹೊತ್ತು ಕಾರು ನಿಂತಲ್ಲೇ ನಿಂತಿದ್ದನ್ನು ಕಂಡ ಸ್ಥಳೀಯರು ಕಿಟಕಿ ಗಾಜಿನ ಮೂಲಕ ನೋಡಿದಾಗ, ಕಾರಿನ ಮುಂದಿನ ಸೀಟು ಬಳಿ ಕೃಷಿಗೆ ಬಳಸುವ ಕೀಟನಾಶಕದ ಬಾಟಲಿ ಕಂಡಿದೆ. 

ಪಕ್ಕದಲ್ಲೇ ಪ್ರತಾಪ್‌ ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದರು. ಇದನ್ನು ಕಂಡ ಸ್ಥಳೀಯರು, ಕೂಡಲೆ ಅವರನ್ನು, ವಾಹನವೊಂದರಲ್ಲಿ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ದರು. ಆದರೆ ಮಾರ್ಗ ಮಧ್ಯೆಯೇ ಪ್ರತಾಪ್‌ ಅಸುನೀಗಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಮನೆ ಮಗನ ರೀತಿ ನನ್ನ ವ್ಯವಹಾರ ,ರಾಜಕೀಯ ಸೇರಿದಂತೆ ಎಲ್ಲವನ್ನು ಪ್ರತಾಪ್ ಮನೆ ಮಗನ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದ. ಆತನಿಗೆ ಮದುವೆಯಾಗಿ 16 ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ ಎಂಬ ಕೊರಗಿತ್ತು. ಜೊತೆಗೆ ಮದ್ಯಪಾನದ ವ್ಯಸನವೂ ಇತ್ತು, ಎಂದು ಹೇಳಿದ್ದಾರೆ.

ಮಕ್ಕಳಾಗದ ಹಿನ್ನೆಲೆಯಲ್ಲಿ ಬಾಡಿಗೆ ತಾಯಿ ಮೂಲಕ ಮಗು ಪಡೆಯಲು ಯತ್ನಿಸಿದ್ದೆವು. ಇದಕ್ಕಾಗಿ ನಾವು ಕೋರ್ಟ್ ಅನುಮತಿಯನ್ನು ಕೇಳಿದ್ದೆವು. ಇನ್ನೇನು ಕೋರ್ಟ್ ಅನುಮತಿ ನೀಡುವುದರಲ್ಲಿತ್ತು. ಇದರ ಮಧ್ಯೆಯೇ ಪ್ರತಾಪ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದ್ಯಪಾನದಿಂದ ಅವರಿಗೆ ಲಿವರ್ ಕಿಡ್ನಿ ಸಮಸ್ಯೆ ತಲೆದೋರಿತ್ತು. ಕೆಲ ತಿಂಗಳ ಹಿಂದೆ ಬೆಂಗಳೂರಿನ ಮದ್ಯಪಾನ ವ್ಯಸನ ಮುಕ್ತ ಕೇಂದ್ರಕ್ಕೆ ಪ್ರತಾಪನನ್ನು ದಾಖಲಿಸಿದ್ದೆವು. ಅಲ್ಲಿ ಒಂದೂವರೆ ತಿಂಗಳ ಕಾಲ ಚಿಕಿತ್ಸೆ ಪಡೆದು ನಂತರ ಮನೆಗೆ ಮರಳಿದ್ದ. ಮುಂದೆ ಮದ್ಯಪಾನ ಮಾಡಬೇಡ ಎಂದು ತಿಳಿ ಹೇಳಿದ್ದೆ ಎಂದು ಬಿಸಿ ಪಾಟೀಲ್ ತಿಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.