ಕ್ಯಾಡ್ಬರಿ ಚಾಕೊಲೇಟ್ ತಿನ್ನುವ ಮುನ್ನ ಇರಲಿ ಎ.ಚ್ಚರ; ಈ ದೃ ಶ್ಯ ನೋಡಿದರೆ ತಿನ್ನುವುದನ್ನೇ ಬಿಡುತ್ತೀರಿ

 | 
Jui

ಚಾಕೊಲೇಟ್ ಉದ್ಯಮದಲ್ಲಿ ಭಾರಿ ಹೆಸರು ಮಾಡಿರುವ ಕ್ಯಾಡ್ಬರಿ ಡೈರಿ ಮಿಲ್ಕ್ ಚಾಕೊಲೇಟ್‌ನಲ್ಲಿ ಹುಳು ಪತ್ತೆಯಾಗಿದ್ದು ಚಾಕೊಲೇಟ್ ಪ್ರಿಯರನ್ನು ಆಘಾತಕ್ಕೀಡುಮಾಡಿದೆ. ತೆಲಂಗಾಣದಲ್ಲಿ ವ್ಯಕ್ತಿಯೊಬ್ಬರು ಎರಡು ಡೈರಿ ಮಿಲ್ಕ್ ಚಾಕೊಲೇಟ್‌ಗಳಲ್ಲಿ ಬಿಳಿ ಹುಳುಗಳನ್ನು ಕಂಡುಕೊಂಡಿದ್ದು, ಅದನ್ನು ಆಹಾರಾ ಪ್ರಯೋಗಾಲಯ ಕೂಡ ದೃಢಪಡಿಸಿದೆ.

ತೆಲಂಗಾಣ ರಾಜ್ಯ ಆಹಾರ ಪ್ರಯೋಗಾಲಯವು ಈ ಚಾಕೊಲೇಟ್‌ಗಳನ್ನು ಪರೀಕ್ಷೆ ಮಾಡಿದ್ದು, ಚಾಕೊಲೇಟ್‌ಗಳು ಸೇವನೆಗೆ ಅಸುರಕ್ಷಿತ ಎಂದು ಹೇಳಿದೆ. ಈ ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಕಾರ್ಯಕರ್ತ ರಾಬಿನ್ ಜಾಕಿಯಸ್ ಅವರು ಫೆಬ್ರವರಿ 9 ರಂದು ಹೈದರಾಬಾದ್‌ನ ಅಮೀರ್‌ಪೇಟ್‌ನ ಸೂಪರ್‌ ಮಾರ್ಕೆಟ್‌ನಿಂದ ಖರೀದಿಸಿದ ಚಾಕೊಲೇಟ್‌ಗಳಲ್ಲಿ ಹುಳುಗಳು ಕಂಡುಬಂದ ನಂತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಬುಧವಾರ, ಜಾಕಿಯಸ್ ಎಕ್ಸ್ ಖಾತೆಯಲ್ಲಿ ತೆಲಂಗಾಣ ರಾಜ್ಯ ಆಹಾರ ಪ್ರಯೋಗಾಲಯದ ವರದಿಯನ್ನು ಹಂಚಿಕೊಂಡಿದ್ದಾರೆ. ಕ್ಯಾಡ್ಬರಿಸ್ ಡೈರಿ ಮಿಲ್ಕ್ (ಹುರಿದ ಬಾದಾಮಿ) ಮತ್ತು ಕ್ಯಾಡ್ಬರಿಸ್ ಡೈರಿ ಮಿಲ್ಕ್ (ಫ್ರೂಟ್ಸ್ & ನಟ್ಸ್) ಮಾದರಿಯ ಎರಡು ಚಾಕೊಲೇಟ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.

ಪರೀಕ್ಷೆ ಮಾಡಿರುವ ಚಾಕೊಲೇಟ್‌ಗಳಲ್ಲಿ ಬಿಳಿ ಹುಳುಗಳು ಮತ್ತು ಬೂಸ್ಟ್ ರೀತಿಯ ಗೂಡುಗಳನ್ನು ಹೊಂದಿದೆ ಮತ್ತು ಆದ್ದರಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ, 2006 ರ ಸೆಕ್ಷನ್ 3 (zz) (iii) (ix) ಅಡಿಯಲ್ಲಿ ಅಸುರಕ್ಷಿತವೆಂದು ಪರಿಗಣಿಸಲಾಗಿದೆ ಎಂದು ಪ್ರಯೋಗಾಲಯದ ವರದಿ ಹೇಳಿದೆ.

ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನು ಟ್ಯಾಗ್ ಮಾಡಿರುವ ಝಾಕಿಯಸ್, ಮಕ್ಕಳು ಹೆಚ್ಚಾಗಿ ಸೇವಿಸುವ ಅಸುರಕ್ಷಿತ ಆಹಾರವನ್ನು ಪೂರೈಸುವ ಎಫ್‌ಎಂಸಿಜಿ ಕಂಪನಿಗಳನ್ನು ಹೊಣೆಗಾರರನ್ನಾಗಿ ಮಾಡಲು ಮತ್ತು ದಂಡ ವಿಧಿಸಲು ಇದು ಸೂಕ್ತ ಸಮಯ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.