ಬೆಂಗಳೂರು ಮಾಲ್ ಗೆ ಬಂದಿದ್ದ ಯುವತಿಯ ಬ್ಯಾಕ್ ನೋಡಿ ತಡೆಯಲಾರದೆ ಕೈ ಹಾಕಿದ 40ರ ಮುದುಕ

 | 
V

ಹುಣಸೆ ಮುಪ್ಪಾದರೂ ಹುಳಿ ಮುಪ್ಪಗದು ಎನ್ನುವಂತೆ ವಯಸ್ಸಾದ ವ್ಯಕ್ತಿಯೊಬ್ಬ ಲುಲು ಮಾಲ್​ನಲ್ಲಿ  ಯುವತಿಯ ಹಿಂಭಾಗ ಮುಟ್ಟಿ ವಿಕೃತಿ  ಮೆರೆದ ವಿಡಿಯೋ ವೈರಲ್ ಆಗಿದ್ದು  ನೋಡುಗರನ್ನು  ಸಿಟ್ಟಿಗೆಳುವಂತೆ ಮಾಡಿದೆ. ಹೌದು ಅಕ್ಟೋಬರ್ 29ರಂದು ಸಂಜೆ ಆರುವರೆ ಸುಮಾರಿಗೆ ಮಾಲ್ ನ ಎರಡನೇ ಮಹಡಿಯ ಫಂಚುರ್ ಗೇಮ್ ಫ್ಲೋರ್ ನಲ್ಲಿ ವ್ಯಕ್ತಿಯೋರ್ವ ಯುವತಿ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಆಕೆಯ ದೇಹವನ್ನು ಮುಟ್ಟಿದ್ದಾನೆ. 

ಲೈಂಗಿಕವಾಗಿ ಪ್ರಸ್ತಾಪಿಸುವ ಸಲುವಾಗಿಯೇ ಮಹಿಳೆಯ ಹಿಂಬದಿಯಲ್ಲಿ ಆಕೆಯನ್ನು ಅಶ್ಲೀಲ ವಾಗಿ ಮುಟ್ಟಿದ್ದಾನೆ. ಬಳಿಕ ತನಗೇನೂ ತಿಳಿದಿಲ್ಲ ಎಂಬಂತೆ ಆಲ್ಲಿಂದ ಪರಾರಿಯಾಗಿದ್ದಾನೆ.ಈ ವಿಡಿಯೋ ಗ್ರಾಹಕರೊಬ್ಬರ ಮೊಬೈಲ್​ನಲ್ಲಿ ಸೆರೆಯಾಗಿದ್ದು, yesh_fitspiration ಎನ್ನುವ ಇನ್ಸ್ಟಾಗ್ರಾಮ್​ ಖಾತೆಯಿಂದ ಈ ವಿಡಿಯೋ ಅಪ್ಲೋಡ್ ಆಗಿದೆ. ಇದರ ಬೆನ್ನಲ್ಲೇ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

ಇನ್ನು ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗಿರುವ ವಿಚಾರ ಟಿವಿಗಳ ಮೂಲಕ ಗೊತ್ತಾಗಿ ಲುಲು ಮಾಲ್​ ಅಧಿಕಾರಿ ಇದೀಗ ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಮಾಗಡಿ ರಸ್ತೆ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡು ವಿಡಿಯೋ ಆಧಾರದ ಮೇಲೆ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

ಗದ್ದಲ ಇರುವ ಕಡೆ ಈ ವ್ಯಕ್ತಿ ಮಹಿಳೆಯರು ಹಾಗೂ ಯುವತಿಯರ ಹಿಂದೆ ಓಡಾಡುತ್ತಿದ್ದ. ಇದನ್ನು ಗಮನಿಸಿ ಆತನನ್ನು ಫಾಲೋ ಮಾಡಿದೆ. ಬಳಿಕ ಈ ಘಟನೆ ಬಗ್ಗೆ ಸೆಕ್ಯೂರಿಟಿ ಗಾರ್ಡ್ ಹಾಗೂ ಮಾಲ್ ಮ್ಯಾನೇಜ್​ಮೆಂಟ್​ ಗಮನಕ್ಕೆ ತಂದಿದ್ದೇನೆ. ನಂತರ ಆತನನ್ನು ಸೆಕ್ಯೂರಿಟಿ ಗಾರ್ಡ್ ಹುಡುಕಾಡಿದ್ದಾರೆ. ಆದ್ರೆ, ಆ ವ್ಯಕ್ತಿ ಅಲ್ಲಿಂದ ನಾಪತ್ತೆಯಾಗಿದ್ದ ಎಂದು ಈ  ವೀಡಿಯೊ ಸೋಷಿಯಲ್ ಮೀಡಿಯಾ ಅಲ್ಲಿ ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.