ಭಾಗ್ಯಲಕ್ಷ್ಮಿ ಸೀರಿಯಲ್ ತಾಂಡವ್ ರಿಯಲ್ ಹೆಂಡ್ತಿ, ಇವರ ಸೌಂದಯ೯ ನೋಡೋಕೆ ಎರಡು ಕಣ್ಣು ಸಾಲಲ್ಲ
Sep 28, 2024, 10:25 IST
|
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್ ಪಾತ್ರದ ಮೂಲಕ ಜನಪ್ರಿಯತೆ ಪಡೆದಿರುವ ನಟ ಸುದರ್ಶನ್ ರಂಗಪ್ರಸಾದ್ ಅವರು ಪತ್ನಿ ಸಂಗೀತಾ ಭಟ್ ಜೊತೆಗೆ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಆಗಾಗ ಫೋಟೊಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.
ಸುದರ್ಶನ್ ರಂಗಪ್ರಸಾದ್ ಅವರು ಈಗ ಸೀರಿಯಲ್ ಜೊತೆಗೆ ಸಿನಿಮಾ ಕಡೆಗೂ ಕೂಡ ಗಮನ ಕೊಡುತ್ತಿದ್ದಾರೆ. ಈ ಹಿಂದೆ ಸುದರ್ಶನ್, ಸಂಗೀತಾ ಅವರು ‘ಪ್ರೀತಿ ಗೀತಿ ಇತ್ಯಾದಿ’ ಸಿನಿಮಾದಲ್ಲಿ ಒಟ್ಟಿಗೆ ನಟಿಸುವ ವೇಳೆ ಪ್ರೀತಿಯಲ್ಲಿ ಬಿದ್ದಿದ್ದರು. ಆ ನಂತರ ಈ ಜೋಡಿ ಕೆಲ ಸಿನಿಮಾಗಳಲ್ಲಿ ನಟಿಸಿ, ಚಿತ್ರರಂಗದಿಂದ ಬ್ರೇಕ್ ಪಡೆದಿತ್ತು.
ಈಗ ಇವರಿಬ್ಬರು ಚಿತ್ರರಂಗದಲ್ಲಿ ಆಕ್ಟಿವ್ ಆಗುತ್ತಿದ್ದಾರೆ. ಸಂಗೀತಾ ಭಟ್ ಅವರು ಒಂದಾದ ಮೇಲೆ ಒಂದು ಸಿನಿಮಾವನ್ನು ಒಪ್ಪಿಕೊಳ್ತಿದ್ರೆ, ಸುದರ್ಶನ್ ರಂಗಪ್ರಸಾದ್ ಕೂಡ ಲೇಖನಿ ಹಿಡಿದು ಸಿನಿಮಾ ಬರವಣಿಗೆ ಮಾಡುತ್ತಿದ್ದಾರೆ.
ಸುದರ್ಶನ್ ರಂಗಪ್ರಸಾದ್ ಅವರು ಕನ್ನಡ ಸಿನಿಮಾ, ಧಾರಾವಾಹಿಗಳಲ್ಲಿ ನಟರಾಗಿ ಗುರುತಿಸಿಕೊಂಡಿದ್ದಾರೆ.
ಸಂಗೀತಾ ಭಟ್ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರಿಬ್ಬರೂ ಮದುವೆಯಾಗಿ ಒಂಭತ್ತು ವರ್ಷಗಳು ಕಳೆದಿವೆ. ಇನ್ನು ಸಂಗೀತಾ ಭಟ್ ಸರಿ ಸುಮಾರು ಮೂರು ಕೋಟಿಗೂ ಅಧಿಕ ಆಸ್ತಿ ಹೊಂದಿದ್ದಾರೆ.ಇವರಿಬ್ಬರು ಪರಸ್ಪರ ಸಪೋರ್ಟಿವ್ ಆಗಿದ್ದಾರೆ. ಒಟ್ಟಿನಲ್ಲಿ ಈ ಜೋಡಿ ಇಂದು ಚಿತ್ರರಂಗದಲ್ಲಿ ಬ್ಯುಸಿ ಆಗಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.