ಕುಬೇರನ ಕೈಹಿಡಿಯಲಿರುವ ಭಾಗ್ಯಲಕ್ಷ್ಮಿ ಸೀರಿಯಲ್ ನಟಿ ಲಾವಣ್ಯ
Nov 11, 2024, 08:35 IST
|
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಹೀರೋ ತಂಗಿ ವಿಧಿ ಪಾತ್ರಕ್ಕೆ ಲಾವಣ್ಯಾ ಹೀರೆಮಠ ಅವರು ಬಣ್ಣ ಹಚ್ಚಿದ್ದಾರೆ. ವಿಧಿ ನೆಗೆಟಿವ್ ಶೇಡ್‌ನಿಂದ ಕೂಡಿದೆ, ಹಣದ ಮದ ಇರುವ ಪಾತ್ರವಿದು. ಈಗ ಲಾವಣ್ಯಾ ಅವರು ರಿಯಲ್ ಲೈಫ್‌ನಲ್ಲಿ ಮದುವೆ ಆಗುತ್ತಿದ್ದಾರೆ. ಕೆಲ ತಿಂಗಳುಗಳ ಹಿಂದೆ ಇವರ ನಿಶ್ಚಿತಾರ್ಥ ನಡೆದಿತ್ತು.
ರಾಯಚೂರಿನ ಲಾವಣ್ಯಾ ಹಿರೇಮಠ ಅವರು ನಟಿಯೂ ಹೌದು, ಡೆಂಟಿಸ್ಟ್ ಕೂಡ ಹೌದು. ಎರಡು ಆಸಕ್ತಿದಾಯಕ ಕ್ಷೇತ್ರ ಆಗಿದ್ದಕ್ಕೆ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದಾರೆ. ಈ ಹಿಂದೆ ಅವರು ನನ್ನರಸಿ ರಾಧೆ ಧಾರಾವಾಹಿಯಲ್ಲಿ ನವ್ಯಾ ಪಾತ್ರದಲ್ಲಿ ನಟಿಸಿದ್ದರು.
ಆಕಾಶ್ ಆಚಾರ್ಯ & ಲಾವಣ್ಯಾ ಮದುವೆ ಆಗುತ್ತಿದ್ದಾರೆ. ಆಕಾಶ್ ಅವರು ಲಾವಣ್ಯಾರ ಸಹದ್ಯೋಗಿ ಎನ್ನಲಾಗಿದ್ದು, ಅವರು ಡೆಂಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರಂತೆ. ಈ ಜೋಡಿ ಒಂದೇ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದೆ. ಈ ಜೋಡಿಯದ್ದು ಪ್ರೇಮ ವಿವಾಹ ಎನ್ನಲಾಗಿದೆ. ಅಂದಹಾಗೆ ಲಾವಣ್ಯಾ ಹಿರೇಮಠ, ಆಕಾಶ್ ಆಚಾರ್ಯ ಅವರು ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡಿದ್ದು ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಲಾವಣ್ಯ ಹಿರೇಮಠ್ ಇತ್ತೀಚೆಗೆ ಥಾರ್ ಕಾರು ಖರೀದಿಸಿ ಸುದ್ದಿಯಾಗಿದ್ದರು. ಸಣ್ಣ ವಯಸ್ಸಿಗೆ ಥಾರ್ ಕಾರು ಖರೀದಿಸಿದ ನಟಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು. ಲಾವಣ್ಯ ಮೂಲತಃ ರಾಯಚೂರಿನವರಾಗಿದ್ದು, ಸದ್ಯ ಬೆಂಗಳೂರಿನಲ್ಲಿ ಡೆಂಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಆಕಾಶ್ ಕೂಡ ಜೊತೆಗೆ ಕೆಲಸ ಮಾಡುತ್ತಿದ್ದಾರೆ ಪ್ರೀತಿ ಮಾಡಿ ಈಗ ಮದುವೆ ಆಗಿ ದಂಪತಿ ಆಗ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.