ಭಾಗ್ಯಲಕ್ಷ್ಮಿ ಸೀರಿಯಲ್ ಅಮ್ಮ ಮಗಳ ಭರ್ಜರಿ ಡ್ಯಾನ್ಸ್ ಗೆ ಕನ್ನಡಿಗರು ಫುಲ್ ಖುಷ್

 | 
ಗೀ
ಕಲರ್ಸ್​ ಕನ್ನಡದ ಭಾಗ್ಯಲಕ್ಷ್ಮೀ ಸೀರಿಯಲ್​ ಇದೀಗ ಕುತೂಹಲದ ಘಟ್ಟ ತಲುಪಿದೆ. ಸವತಿ ಶ್ರೇಷ್ಠಾ ಭಾಗ್ಯಳ ಮನೆ ಸೇರಿದ್ದಾಳೆ. ಭಾಗ್ಯ ಮತ್ತು ಅತ್ತೆ ಕುಸುಮಾ ಆಕೆಯನ್ನು ಪೂಜೆ ಮಾಡಿ ಮನೆ ತುಂಬಿಸಿಕೊಂಡಿದ್ದು, ಇದೀಗ ಮನೆ ಕೆಲಸ ಮಾಡಿಸುತ್ತಲೇ ಆಕೆಗೆ ಟಾರ್ಚರ್​ ಕೊಡುತ್ತಿದ್ದಾರೆ. ಮಲಗಿದ್ದಲ್ಲೇ ಎಲ್ಲಾ ಸೌಕರ್ಯ ಪಡೆಯುತ್ತಿದ್ದ ಶ್ರೇಷ್ಠಾಳಿಗೆ ಇದೀಗ ತಾಂಡವ್​ ಮನೆ ಬಿಸಿತುಪ್ಪ ಆಗಿದೆ. ನುಂಗಲೂ ಆಗಲ್ಲ, ಉಗುಳಲೂ ಆಗಲ್ಲ ಅಂಥ ಪರಿಸ್ಥಿತಿ. 
ಆದರೆ ತಾಂಡವ್​ ಜೊತೆ ಇರಬೇಕು ಎಂದರೆ, ಅತ್ತೆ ಕುಸುಮಾಳನ್ನು ಒಲಿಸಿಕೊಳ್ಳಬೇಕು ಎಂದರೆ ಭಾಗ್ಯ ಮಾಡುವ ಎಲ್ಲಾ ಕೆಲಸಗಳನ್ನೂ ಆಕೆ ಮಾಡಲೇಬೇಕಿದೆ. ಇದಕ್ಕಾಗಿ ಭಾಗ್ಯಳ ಮಕ್ಕಳು ಕೂಡ ಅಮ್ಮನಿಗೆ ಸಪೋರ್ಟ್​ ಮಾಡುತ್ತಿದ್ದಾರೆ. ಆದರೆ, ಮನೆ ಕೆಲಸದವಳನ್ನು ಇಟ್ಟುಕೊಂಡಿರುವ ಶ್ರೇಷ್ಠಾ ಈಗ ಎಲ್ಲರಿಗೂ ಶಾಕ್​ ಕೊಟ್ಟಿದ್ದಾಳೆ. ತಾಂಡವ್​ ಕೂಡ ಇದರಿಂದ ಖುಷಿಯಾಗಿದ್ದಾನೆ. ಉಳಿದವರಿಗೆ ಇದು ಈಗ ನುಂಗಲಾಗದ ತುತ್ತಾಗಿದೆ. 
https://www.instagram.com/reel/DEsA_XLyF2U/?igsh=MXh6YXprNnM2dWdraA==
ಇವೆಲ್ಲವುಗಳ ನಡುವೆಯೇ, ಶೂಟಿಂಗ್​ನಿಂದ ಬಿಡುವು ಮಾಡಿಕೊಂಡು ಭಾಗ್ಯ ಪಾತ್ರಧಾರಿ ಸುಷ್ಮಾ ಕೆ. ರಾವ್​ ಮತ್ತು ಮಗಳು ತನ್ವಿ ಪಾತ್ರಧಾರಿ ಅಮೃತಾ ಗೌಡ ಅವರು ಭರ್ಜರಿ ರೀಲ್ಸ್​ ಮಾಡಿದ್ದಾರೆ. ತಮಿಳು ಚಿತ್ರ ಯಾತಿ ಯಾತಿಯ ಹಾಡೊಂದಕ್ಕೆ ಈ ರೀಲ್​ ಅಮ್ಮ-ಮಗಳು ಸಕತ್​ ಸ್ಟೆಪ್​ ಹಾಕಿದ್ದಾರೆ. ಇವರ ಜೋಡಿಗೆ ಫ್ಯಾನ್ಸ್​ ಶ್ಲಾಘನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಅಷ್ಟಕ್ಕೂ ಶೂಟಿಂಗ್​ನಿಂದ ಬಿಡುವು ಆದಾಗಲೆಲ್ಲ ಸುಷ್ಮಾ ಅವರು ಭಾಗ್ಯಲಕ್ಷ್ಮಿ ಟೀಮ್​ ಜೊತೆ ಹೀಗೆ ಸ್ಟೆಪ್​ ಹಾಕುತ್ತಲೇ ಇರುತ್ತಾರೆ. ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿರುವ ಅವರು, ಹಲವಾರು ವಿಡಿಯೋ ಶೇರ್​ ಮಾಡುತ್ತಾರೆ. 
ಇನ್ನು ಭಾಗ್ಯಾ ಪಾತ್ರಧಾರಿ ಸುಷ್ಮಾ ಬಗ್ಗೆಯಂತೂ ಗೊತ್ತೇ ಇದೆ ಇನ್ನು ತನ್ವಿಯ ಬಗ್ಗೆ ಹೇಳುವುದಾದರೆ ಈಕೆಯ ರಿಯಲ್​ ಹೆಸರು ಅಮೃತಾ ಗೌಡ. ಅಮೃತಾ ಗೌಡ ನಿಜ ಜೀವನದಲ್ಲೂ ಶಾಲಾ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಜುಕೇಶನ್ ಜೊತೆಗೆ ಶೂಟಿಂಗ್ ಎರಡನ್ನೂ ಜೊತೆಯಾಗಿ ಮ್ಯಾನೇಜ್ ಮಾಡುವ ಈ ಬಾಲನಟಿ, ಸೋಶಿಯಲ್ ಮೀಡಿಯಾದಲ್ಲೂ ಆಕ್ಟೀವ್ ಆಗಿದ್ದಾರೆ. 
ಅಮೃತಾ ಹೆಚ್ಚಾಗಿ ತನ್ನ ತಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಿಹಾರ್ ಗೌಡ ಜೊತೆ, ಭಾಗ್ಯಲಕ್ಷ್ಮಿ ತಂಡದ ಜೊತೆ ರೀಲ್ಸ್ ಮಾಡುತ್ತಾ, ಡ್ಯಾನ್ಸ್ ಗೆ ಹೆಜ್ಜೆ ಹಾಕುತ್ತಾ ಎಂಜಾಯ್ ಮಾಡುವ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.