ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಅವಕಾಶ ಸಿಗಲು ದಾನ ಮಾಡುವುದು ಅತ್ಯಾವಶ್ಯಕ ಎಂದ ಭಾವನಾ
Mar 2, 2025, 17:14 IST
|

ಚಂದ್ರಮುಖಿ ಪ್ರಾಣಸಖಿ ಸಿನಿಮಾ ಎಂದರೆ ನಮ್ಮ ಕಣ್ಣ ಮುಂದೆ ಬರುವುದು ದಾವಣಗೆರೆ ಚೆಲುವೆ ಭಾವನಾ ರಾಮಣ್ಣ. ಕೆಲವು ದಿನಗಳಿಂದ ಸಿನಿಮಾಗಳಿಂದ ದೂರವಾಗಿದ್ದ ಭಾವನಾ ಈಗ ಮತ್ತೆ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಕಿರುತೆರೆಯಲ್ಲೂ ಸಕ್ರಿಯರಾಗಿದ್ದಾರೆ. ಭರತನಾಟ್ಯ ಕಲಾವಿದೆಯೂ ಆಗಿರುವ ಭಾವನಾ ಅನೇಕ ವೇದಿಕೆಗಳಲ್ಲಿ ಕಾರ್ಯಕ್ರಮ ಕೂಡಾ ನೀಡಿದ್ದಾರೆ.
ಭಾವನಾ ಮೊದಲ ಹೆಸರು ನಂದಿನಿ ರಾಮಣ್ಣ. ನಿರ್ದೇಶಕ ಕೋಡ್ಲು ರಾಮಕೃಷ್ಣ, ನಂದಿನಿ ಹೆಸರನ್ನು ಭಾವನಾ ರಾಮಣ್ಣ ಎಂದು ಬದಲಿಸಿದರು. 1996ರಲ್ಲಿ ತುಳು ಚಿತ್ರದ ಮೂಲಕ ನಟನೆ ಆರಂಭಿಸಿದ ಭಾವನಾ 1997ರಲ್ಲಿ 'ನೀ ಮುಡಿದ ಮಲ್ಲಿಗೆ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದರು. ನಂತರ ನಂ 1, ಚಂದ್ರಮುಖಿ ಪ್ರಾಣಸಖಿ, ದೇವೀರಿ, ದೀಪಾವಳಿ, ಎಲ್ಲರ ಮನೆ ದೋಸೆನೂ, ಕುರಿಗಳು ಸಾರ್ ಕುರಿಗಳು, ಪರ್ವ, ನಿನಗಾಗಿ, ಚೆಲ್ವಿ, ರಾಂಗ್ ನಂಬರ್, ಪ್ರೀತಿ ಪ್ರೇಮ ಪ್ರಣಯ, ಶಾಂತಿ, ಫ್ಯಾಮಿಲಿ, ಇಂತಿ ನಿನ್ನ ಪ್ರೀತಿಯ, ಆಪ್ತರಕ್ಷಕ, ಚಿಂಗಾರಿ, ಭಾಗೀರಥಿ, ಕ್ರೇಜಿ ಸ್ಟಾರ್, ನಿರುತ್ತರ ಸಿನಿಮಾಗಳಲ್ಲಿ ಅವರು ನಟಿಸಿದರು.
ಹೆಣ್ಣು ಅಂದಾಗ ಕೆಲವು ಸಮಸ್ಯೆಗಳು ಬರುವುದು ಸಹಜ. ಇಂಡಸ್ಟ್ರಿ ಅಂದ ಮೇಲೆ ಅದು ಇದ್ದೇ ಇರುತ್ತದೆ. ಈಗೆಲ್ಲ 100 ಮದುವೆಗಳಲ್ಲಿ 10 ಮದುವೆ ಉಳಿದರೆ ಅದೇ ಹೆಚ್ಚು. ಒಂದು ವೇಳೆ ನಮ್ಮ ಕನ್ನಡ ಚಿತ್ರರಂಗದಲ್ಲೂ ಆ ರೀತಿ ಕೆಟ್ಟದ್ದು ಇದೆ ಎನ್ನುವುದಾದರೆ, ಅಲ್ಲಿ ಕೆಲಸ ಮಾಡಲು ಹೋಗಬೇಡಿ. ಕಾಸ್ಟಿಂಗ್ ಕೌಚ್‌ನ ಕೂಗು ನಮ್ಮ ಇಂಡಸ್ಟ್ರಿಯಲ್ಲಿ ಕೇಳಿ ಬಂದಿಲ್ಲ ಆದರೆ ಮಲಯಾಳಂ ಚಿತ್ರರಂಗದಲ್ಲಿ ಇದೆ ಒಮ್ಮೆ ನಿರ್ಮಾಪಕ ಒಬ್ಬರು ನನ್ನ ಡ್ರೆಸ್ಸಿಂಗ್ ರೂಮ್ ಗೆ ಬಂದು ತೊಂದ್ರೆ ಕೊಟ್ಟಿದ್ರು ಎಂದು ನಟಿ ಭಾವನಾ ಹೇಳಿದ್ದಾರೆ.
ಇಷ್ಟೆಲ್ಲಾ ಚಿತ್ರಗಳಲ್ಲಿ ನಟಿ ಭಾವನಾ ನಟಿಸಿದರೂ ಅವರು ಎಂದಿಗೂ ಗ್ಲಾಮರಸ್ ನಟಿ ಎಂದು ಎನಿಸಿಕೊಳ್ಳಲೇ ಇಲ್ವಂತೆ! ಈ ಕುರಿತು ಯೂಟ್ಯೂಬ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಟಿ ನೋವಿನಿಂದಲೇ ನುಡಿದಿದ್ದಾರೆ. ಗ್ಲಾಮರಸ್ ಎನಿಸಿಕೊಳ್ಳಬೇಕಿದ್ದರೆ ತೆಳ್ಳಗೆ, ಬೆಳ್ಳಗೆ ಇರಬೇಕು. ಆದರೆ ನಾನು ಹಾಗೆ ಇಲ್ಲ. ದಾವಣಗೆರೆಯ ಮಿಡ್ಲ್ ಕ್ಲಾಸ್ ಫ್ಯಾಮಿಲಿಯಿಂದ ಬಂದ ನಾನು ಹುಡುಗಿಯಾಗಿದ್ದಾಗ 30 ಕೆ.ಜಿಗಿಂತಲೂ ಕಡಿಮೆ ಇದ್ದೆ. ಆಗಲೂ ತೂಕ ಕಡಿಮೆ ಎಂದು ಲೇವಡಿ ಮಾಡುತ್ತಿದ್ದರು.
ಈಗಲೂ ಗ್ಲಾಮರಸ್ ನಟಿಯಾಗಿ ನಾನು ಗುರುತಿಸಿಕೊಂಡಿಲ್ಲ. ಗ್ಲಾಮರಸ್ ಲುಕ್ಗೆ ಬೇಕಾಗುವ ಯಾವುದೇ ಅರ್ಹತೆ ನನಗೆ ಇಲ್ಲ ಎಂದೇ ಹೇಳುತ್ತಾರೆ ಎಂದಿದ್ದಾರೆ. ಮೊದಲ ಸಿನಿಮಾ ತುಳು ಮಾರಿಬಲೆಯಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ಆಕಸ್ಮಿಕ ಎನ್ನುವ ನಟಿ, ಯಾವುದೇ ಕಾರಣಕ್ಕೂ ಮಲಯಾಳಂ ಸಿನಿಮಾದಲ್ಲಿ ನಟಿಸುವ ಆಸೆಯೇ ಇರಲಿಲ್ಲ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.