ಭವಾನಿ ರೇವಣ್ಣ ಕ.ರಾಳ ಮುಖ ಮತ್ತಷ್ಟು ಬಯಲು, ಬಡವರ ಮೇಲೆ ಚಿ ತ್ರಹಿಂಸೆ ಕೊಟ್ಟು ಜಮೀನು ಜಪ್ತಿ

 | 
Bd

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಸೊಸೆ, ಎಚ್‌ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಕೆಲ ದಿನಗಳ ಹಿಂದಷ್ಟೇ ಭಾರೀ ಸುದ್ದಿ ಮಾಡಿದ್ದರು. ತಮ್ಮ ಕಾರಿಗೆ ಅಡ್ಡ ಬಂದಿದ್ದ ಬೈಕ್ ಸವಾರನಿಗೆ ಹಿಗ್ಗಾಮುಗ್ಗ ಬೈಯ್ದಿದ್ದರು. ನನ್ನದು ಒಂದೂವರೆ ಕೋಟಿ ಕಾರು, ನಿಂಗೆ ಸಾಯೋಕೆ ಈ ಕಾರೇ ಬೇಕಿತ್ತಾ? ಬೇರೆ ಯಾವುದಾದರೂ ಬಸ್ಸಿಗೆ ಸಿಕ್ಕಿ ಸಾಯಿ ಎನ್ನುವಂತೆ ಬೈಯ್ದಿದ್ದರು.

 ಗೌಡರ ಸೊಸೆ ವರ್ತನೆಗೆ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದಕ್ಕೆ ಖುದ್ದು ಎಚ್‌ಡಿ ರೇವಣ್ಣ ಅವರೇ ಕ್ಷಮೆ ಯಾಚಿಸಿದ್ದರು. ಎಲ್ಲವೂ ತಣ್ಣಗಾಯ್ತು ಎನ್ನುತ್ತಿರುವಂತೆ ಮತ್ತೆ ಭವಾನಿ ರೇವಣ್ಣ ಹಾಗೂ ಹಾಸನ ಸಂಸದರೂ ಆಗಿರುವ ಪುತ್ರ ಪ್ರಜ್ವಲ್ ರೇವಣ್ಣ  ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.

ಆಸ್ತಿ ಮಾರಾಟ ಮಾಡಲು ಒತ್ತಾಯಿಸಿ ಕಿಡ್ನಾಪ್ ಮಾಡಿರೋ ಆರೋಪ ಇದೀಗ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಭವಾನಿ ರೇವಣ್ಣ ಮೇಲೆ ಕೇಳಿ ಬಂದಿದೆ. ಖುದ್ದು ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್ ಎಂಬಾತನೇ ಇಂಥದ್ದೊಂದು ಗಂಭೀರ ಆರೋಪ ಮಾಡಿದ್ದಾನೆ.

ಪ್ರಜ್ವಲ್ ರೇವಣ್ಣ ಹಾಗೂ ಭವಾನಿ ರೇವಣ್ಣ ಇಬ್ಬರೂ ಹೊಳೆನರಸೀಪುರ ಠಾಣೆ ಪೊಲೀಸರ ಮೂಲಕ ಬಲವಂತವಾಗಿ ಕರೆದೊಯ್ದು, ಹಿಂಸೆ ನೀಡಿದ್ದಾರೆ ಅಂತ ಕಾರ್ತಿಕ್ ಆರೋಪಿಸಿದ್ದಾರೆ. ಹೊಳೆನರಸೀಪುರ ತಾಲ್ಲೂಕಿನಲ್ಲಿ ಇರುವ 13 ಎಕರೆ ಭೂಮಿಗಾಗಿ ತನಗೆ ಕಿರುಕುಳ ನೀಡಿದ್ದಾರೆ ಅಂತ ಕಾರ್ತಿಕ್ ಆರೋಪಿಸಿದ್ದಾರೆ.

ಈ ಹಿಂದೆ ದಶಕಗಳ ಕಾಲ ಪ್ರಜ್ವಲ್ ರೇವಣ್ಣ ಕಾರು ಚಾಲಕನಾಗಿದ್ದ ಕಾರ್ತಿಕ್, ಇದೀಗ ಪ್ರಜ್ವಲ್ ರೇವಣ್ಣ, ಭವಾನಿ ವಿರುದ್ಧವೇ ದೂರು ನೀಡಿದ್ದಾರೆ. 2023ರ ಮಾರ್ಚ್ 12ರಂದು ತನ್ನನ್ನು ಕಿಡ್ನಾಪ್ ಮಾಡಿದ್ದರು ಅಂತ ಆರೋಪಿಸಿದ್ದಾರೆ.

ಬಲವಂತವಾಗಿ ಕರೆದೊಯ್ದು ನನ್ನ 13 ಎಕರೆ ಭೂಮಿ ಬೇರೆಯವರ ಹೆಸರಿಗೆ ವರ್ಗಾವಣೆ ಮಾಡಿಸಿಕೊಂಡಿರೋ ಬಗ್ಗೆ ದೂರು ನೀಡಿದ್ದಾರೆ. ಪತ್ನಿ ಹಾಗೂ ತನ್ನನ್ನು ಕಿಡ್ನಾಪ್ ಮಾಡಿದ್ದರು ಅಂತ ಆರೋಪಿಸಿದ್ದಾರೆ. ದಾಖಲೆಗಳ ಸಮೇತವಾಗಿ ದಕ್ಷಿಣ ವಲಯ ಐಜಿಪಿ ಕಾರ್ತಿಕ್‌ಗೆ ದೂರು ನೀಡಿದ್ದಾರೆ. ಮತ್ತೂ ನನಗೆ ನ್ಯಾಯ ಒದಗಿಸಿ ಕೊಡಿ ಅಂತ ಮನವಿ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.