ಏಕಾಏಕಿ ತ್ರಿವಿಕ್ರಮ್ ಮೇಲ್‌ಸಿಡಿದೆದ್ದ ಭವ್ಯಾ, ಆತನನ್ನು ನಾನು ಮದುವೆ ಆಗಲ್ಲ
Feb 9, 2025, 21:36 IST
|

ಬಿಗ್‌ಬಾಸ್ ಕನ್ನಡ ಸೀಸನ್ 11 ಮುಗಿದಿದೆ. ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಒಟ್ಟಾಗಿ ಇದ್ದ ಸ್ಪರ್ಧಿಗಳು ದೊಡ್ಮನೆಯಿಂದ ಹೊರಬಂದು ಭೇಟಿ ಮಾಡಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಕಳೆದ ಸಿಹಿ ಅನುಭವಗಳನ್ನು ಪರಸ್ಪರ ಹಂಚಿಕೊಂಡಿದ್ದಾರೆ. ಹಾಗಾದರೆ ಹೊರಗಡೆ ಯಾರೆಲ್ಲಾ ಭೇಟಿ ಮಾಡಿದರು? ಎಲ್ಲಿಗೆ ಹೋಗಿದ್ದರು? ಎಲ್ಲವನ್ನೂ ನೋಡೋಣ
ಬಿಬಿಕೆ-11ರ ರನ್ನರ್ ಅಪ್ ತ್ರಿವಿಕ್ರಮ್, ರಜತ್, ಭವ್ಯಾ ಹಾಗೂ ಅನುಷಾ ರೈ ನಾಲ್ಕು ಜನ ಭೇಟಿ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಕಾರಿನಲ್ಲಿ ಕುಳಿತ ಈ ನಾಲ್ಕು ಜನರ ವಿಡಿಯೋವನ್ನು ರಜತ್ ಸೆರೆಹಿಡಿದಿದ್ದಾರೆ. ಚಾಮುಂಡಿಬೆಟ್ಟಕ್ಕೆ ಹೋಗುತ್ತಿರುವುದಾಗಿ ಹಂಚಿಕೊಂಡಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಒಳ್ಳೆಯ ಸ್ನೇಹಿತರಾಗಿದ್ದ ಇವರು ಅದೇ ಸ್ನೇಹವನ್ನು ಮನೆಯಿಂದ ಹೊರಬಂದ ಮೇಲೂ ಮುಂದುವರೆಸಿದ್ದಾರೆ.
ಆದರೆ ತ್ರಿವಿಕ್ರಮ್ ಭವ್ಯಾ ಅವರಿಗೆ ಪ್ರಪೋಸ್ ಮಾಡಿದ್ದು, ಮನೆಯಿಂದ ಹೊರ ಬಂದ ಮೇಲೆ ಏನೂ ಆಗಿಲ್ಲ ಅನ್ನೋತರ ತೋರಿಸಿಕೊಂಡಿದ್ದು ಇದೆ. ಆದರೆ ಹೊರಗಡೆ ಜನ ಏನೇ ಮಾತನಾಡಲಿ, ಯಾರು ಏನೇ ಹೇಳಲಿ ನಾವೆಲ್ಲಾ ಸ್ನೇಹಿತರು ಎನ್ನುವ ರೀತಿ ಇಲ್ಲಿ ಎಲ್ಲರೂ ಒಟ್ಟಾಗಿ ಇರುವ ವಿಡಿಯೋವನ್ನು ಶೇರ್ ಮಾಡಲಾಗಿದೆ.
ಹೌದು.. ಮಜಾಟಾಕೀಸ್ ಹೊಸದಾಗಿ ಆರಂಭವಾಗಿದೆ. ಈ ಭಾನುವಾರ ಅಂದರೆ ಇಂದು ಮಜಾಟಾಕೀಸ್‌ನಲ್ಲಿ ತ್ರಿವಿಕ್ರಮ್, ಭವ್ಯಾ, ಮಂಜು ಹಾಗೂ ಗೌತಮಿ ಭಾಗವಹಿಸಿದ್ದಾರೆ ಅದರ ಪೋಸ್ಟ್ ಕೂಡ ವೈರಲ್ ಆಗಿತ್ತು. ಇನ್ನಷ್ಟು ಸ್ಪರ್ಧಿಗಳು ಇದರಲ್ಲಿ ಭಾಗಿ ಆಗುತ್ತಾರಾ ಕಾದು ನೋಡಬೇಕಿದೆ. ಅದೇನೆ ಇರಲಿ ಭವ್ಯಾ ಮಾತ್ರ ಒಳ್ಳೆಯ ಮನಸ್ಸಿನಿಂದ ತ್ರಿವಿಕ್ರಮ್ ಸ್ನೇಹ ಮುಂದು ವರೆಸಿರೋದು ಸಂತೋಷದ ವಿಷಯವಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.