ಗೌತಮ್ ನನ್ನು ಹುಡುಕಲು ಡ್ರೋನ್ ಕ್ಯಾಮೆರಾ ಬಳಸಿದ ಭೂಮಿಕಾ, ಇದೆಲ್ಲಾ ಬೇಕಿತ್ತ ಎಂದ ಅಮೃತಧಾರೆ ಪ್ರೇಕ್ಷಕರು

 | 
ಅಮೃತ

ಜನಪ್ರಿಯ ಜೀ ಕನ್ನಡದ ಧಾರಾವಾಹಿ ಅಮೃತಧಾರೆ ಪ್ರೇಕ್ಷಕರ ಹೃದಯ ಗೆದ್ದುಕೊಂಡಿದೆ. ಈ ಸೀರಿಯಲ್‌ನಲ್ಲಿ ಭೂಮಿಕಾ ಮತ್ತು ಗೌತಮ್ ಅವರಿಬ್ಬರು  ದೂರಾದ ಬಳಿಕ ನಡೆಯುತ್ತಿರುವ ಕಥೆ ಈಗ ಹೊಸ ತಿರುವು ಪಡೆದಿದೆ. ಬೆಂಗಳೂರಿಗೆ ಬಂದು ಹೆಡ್ ಮಿಸ್ ಆಗಿ ಕೆಲಸ ಮಾಡುತ್ತಿರುವ ಭೂಮಿಕಾ, ತನ್ನ ಪತಿಯ ನೆನಪುಗಳಲ್ಲಿ ಬದುಕುತ್ತಿದ್ದಾಳೆ. ಇದೇ ವೇಳೆಯಲ್ಲಿ ಗೌತಮ್ ಕೂಡ ತನ್ನ ಪತ್ನಿ ಮತ್ತು ಮಗನಿಗಾಗಿ ಹುಡುಕಾಟ ಮುಂದುವರಿಸಿದ್ದಾನೆ.

ಇದಕ್ಕೆ ಸೀರಿಯಲ್ ಕಥೆಯಷ್ಟೇ ಅಲ್ಲ, ನಟಿ ಛಾಯಾ ಸಿಂಗ್ ಭೂಮಿಕಾ ಪಾತ್ರಧಾರಿ ಅವರ ರಿಯಲ್ ಲೈಫ್ ವಿಡಿಯೋವೂ ಚರ್ಚೆಗೆ ಕಾರಣವಾಗಿದೆ. ಶೂಟಿಂಗ್ ವೇಳೆ ಡ್ರೋನ್ ಹಿಡಿದು ತಮಾಷೆ ಮಾಡಿದ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಹಾಸ್ಯಮಾಡುತ್ತಿದ್ದಾರೆ. “ಗೌತಮ್ ಎಲ್ಲಿ ಎಂದು ನೋಡಲು ಡ್ರೋನ್ ಬಳಸುತ್ತಿದ್ದೀರಾ?” “ಇದೆಲ್ಲಾ ಬೇಕಿತ್ತಾ?” ಎಂದು ಕಾಮೆಂಟ್‌ಗಳ ಮಳೆ ಸುರಿಯುತ್ತಿದ್ದಾರೆ.

ಸೀರಿಯಲ್ ಕಥೆಯಲ್ಲಿ ಈಗ ಮತ್ತೊಂದು ಇಂಟರೆಸ್ಟಿಂಗ್ ಟ್ವಿಸ್ಟ್ ಬಂದಿದೆ — ಗೌತಮ್‌ನ ಕೈ ಸೇರಿರುವ ಒಂದು ಅನಾಥ ಹೆಣ್ಣು ಮಗು. ಆ ಮಗುವಿನ ಕಥೆ ಭೂಮಿಕಾ ಮತ್ತು ಗೌತಮ್ ಜೀವನವನ್ನು ಮತ್ತೆ ಒಂದುಗೂಡಿಸಬಹುದೇ ಎಂಬ ಕುತೂಹಲ ಸೀರಿಯಲ್ ಪ್ರೇಕ್ಷಕರಲ್ಲಿ ಹೆಚ್ಚಿಸಿದೆ.ಹೆಡ್ ಮಿಸ್ ಆಗಿರುವ ಭೂಮಿಕಾ ತನ್ನ ವಿದ್ಯಾರ್ಥಿನಿಯರ ಮಧ್ಯೆ ತಾಯಿಯ ಪ್ರೀತಿ ತೋರುತ್ತಿರುವುದು ಪ್ರೇಕ್ಷಕರ ಮನ ಗೆದ್ದಿದೆ. ಆಕೆಯ ಶಾಂತ ಸ್ವಭಾವ, ನಯವಾದ ಅಭಿನಯ ಹಾಗೂ ಭಾವನಾತ್ಮಕ ದೃಶ್ಯಗಳು ಪ್ರತಿ ಎಪಿಸೋಡ್‌ಗೆ ಸ್ಪಂದನೆ ತರಿಸುತ್ತಿವೆ.

ಒಟ್ಟಿನಲ್ಲಿ, ಅಮೃತಧಾರೆ ಸೀರಿಯಲ್ ಇದೀಗ ಹೊಸ ತಿರುವಿನಲ್ಲಿ ಸಾಗುತ್ತಿದ್ದು, ಡ್ರೋನ್ ವಿಡಿಯೋ ಮೂಲಕ ಛಾಯಾ ಸಿಂಗ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದಾರೆ. ಪ್ರೇಕ್ಷಕರು ಕೇಳ್ತಿದ್ದಾರೆ – “ಭೂಮಿಕಾ ಡ್ರೋನ್‌ನಿಂದ ಗಂಡನ ಹುಡುಕಾಟ ಪ್ರಾರಂಭಿಸಿದ್ದಾಳಾ? ಅಥವಾ ಇದು ಕೇವಲ ಫನ್ ಶೂಟ್?” ಯಾವ್ದೇ ಆಗಿರಲಿ, ಭೂಮಿಕಾ ಪಾತ್ರ ಮತ್ತೆ ಮಿಂಚುತ್ತಿದೆ ಎಂಬುದು ಖಚಿತ.