ಎಣ್ಣೆ ಕುಡುಕರಿಗೆ ದೊಡ್ಡ ಆ.ಘಾತ, ಹೊಸ ವರ್ಷಕ್ಕೆ ಮದ್ಯದ ಬೆಲೆಯಲ್ಲಿ ದೊಡ್ಡ ಬದಲಾವಣೆ

 | 
Ghh

ನ್ಯೂ ಇಯರ್ ಹತ್ತಿರ ಬರ್ತಾ ಇದ್ದ ಹಾಗೇ ಎಣ್ಣೆ ಪ್ರಿಯರಿಗೆ ಶಾಕ್ ಕೊಡಲು ಸರ್ಕಾರ ಮುಂದಾಗಿದೆ. ಅದ್ರಲ್ಲೂ ಬಿಯರ್ ಪ್ರಿಯರಿಗೆ ಗವರ್ನೆಮಂಟ್ ಬಿಗ್ ಶಾಕ್ ಕೊಡುತ್ತಿದೆ. ಮೈಸೂರಿನ 4 ಉತ್ಪಾದನಾ ಕಂಪನಿಗಳಿಗೆ ಬಿಯರ್ ಉತ್ಪಾದನೆ ಸ್ಥಗಿತ ಮಾಡಲು ಸೂಚನೆ ಕೊಟ್ಟಿದೆ. ಅಂದ್ರೆ ಅಬಕಾರಿ ಇಲಾಖೆಯಿಂದ ಒಂದು ಪಾಳಿಯಲ್ಲಿ ಬಿಯರ್ ಉತ್ಪಾದನೆ ಸ್ಥಗಿತಕ್ಕೆ ನಾಲ್ಕು ಕಂಪನಿಗಳಿಗೆ ಸರ್ಕಾರ ಸೂಚನೆ ಕೊಟ್ಟಿದೆ.

ಅಷ್ಟಕ್ಕೂ ಸರ್ಕಾರ ಈ ನಿರ್ಧಾರಕ್ಕೆ ಬರೋದಕ್ಕೆ ಕಾರಣ ಏನು ಅಂತ ನೋಡೋದಾದ್ರೆ ಬಿಯರ್ ಗೆ ಇರೋ ಡಿಮ್ಯಾಂಡ್ ಜೊತೆಗೆ ಸರ್ಕಾರದ ಆದಾಯಕ್ಕೆ ಬೀಳ್ತೀರೋ ಪೆಟ್ಟು. ಸರ್ಕಾರದ ಬೊಕ್ಕಸ ತುಂಬಿ ಕೊಳ್ಳಲು ಬಿಯರ್ ಪ್ರಿಯರಿಗೆ ಶಾಕ್ ಕೊಟ್ಟಿರುವುದು.

ಸದ್ಯ ರಾಜ್ಯದಲ್ಲಿ ಬಿಯರ್ಗೆ ಸಖತ್ ಡಿಮ್ಯಾಂಡ್ ಇದೆ. ರಾಜ್ಯವಷ್ಟೇ ಅಲ್ಲದೆ, ಹೊರ ರಾಜ್ಯದಿಂದಲೂ ಬೇಡಿಕೆ ಸಿಕ್ಕಾಪಟ್ಟೆ ಇದೆ. ಜೊತೆಗೆ ಹೊಸ ವರ್ಷ ಕೂಡ ಹತ್ತಿರದಲ್ಲಿ ಇರೋದ್ರಿಂದ ಬಿಯರ್ ಗೆ ಡಿಮ್ಯಾಂಡ್ ಕೂಡ ಒನ್ ಟು ಡಬಲ್ ಹೆಚ್ಚಾಗಿದೆ. ಏಕಾಏಕಿ ಉತ್ಪಾದನೆ ಕಮ್ಮಿ ಆದರೆ ಕೊರತೆ ಆಗುತ್ತದೆ. ಜನ IML ಜಾಸ್ತಿ ಪರ್ಚೆಸ್ ಮಾಡಬಹುದು ಅನ್ನೋದು ಸರ್ಕಾರದ ಲೆಕ್ಕಾಚಾರವಾಗಿದೆ.

ಇನ್ನೂ ಉತ್ಪಾದನೆ ಕಡಿಮೆ ಮಾಡಲು ಕಂಪನಿಗೆ ಸೂಚನೆ ಕೊಟ್ಟಿರೋ ಬಗ್ಗೆ ಅಬಕಾರಿ ಇಲಾಖೆ ಕೊಡೋ ಸಮಜಾಯಿಷಿ ಬೇರೆ. ಮೈಸೂರು ಜಿಲ್ಲೆಯಲ್ಲಿ ಅಬಕಾರಿ ಸಿಬ್ಬಂದಿ ಕೊರತೆಸಿಬ್ಬಂದಿ ಕೊರತೆ ಇರೋದ್ರಿಂದ ಈ ನಿರ್ಧಾರ ಬಂದಿದ್ದೇವೆ. ಆದರೆ, ಸರ್ಕಾರದ ನಿರ್ಧಾರ ಹಿಂದಿದೆಯಂತೆ ಬೇರೆ ಕಾರಣ ಇರೋ ಬಗ್ಗೆ ಸದ್ಯ ಚರ್ಚೆ ಆಗುತ್ತಿದೆ.

ಬಿಯರ್ ಮಾರಾಟದಿಂದ ಹೆಚ್ಚಿನ ಆದಾಯ ಬರುತ್ತಿಲ್ಲವಂತೆ ಐಎಂಎಲ್ಗಳ ಮಾರಾಟದಿಂದ ಹೆಚ್ಚಿನ ಆದಾಯ ಬರುತ್ತದೆ, ಐಎಂಎಲ್ ಮಾರಾಟ ಹೆಚ್ಚಳ ಮಾಡಿ ಆದಾಯ ಹೆಚ್ಚಳ ಪ್ಲಾನ್ ಮಾಡಲು ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿರುವುದು ಗೊತ್ತಾಗ್ತಾ ಇದೆ.ಜನವರಿ 1ರಿಂದ ಮದ್ಯ ದರ ಏರಿಕೆಗೆ ಸೂಚನೆ ನೀಡಲಾಗಿದೆ. 

ಹಾಲಿ ಓಟಿ 180 ಎಂಎಲ್‌ಗೆ 100 ರೂಪಾಯಿ ಇದ್ದು, ಜ.1 ರಿಂದ ಓಟಿ ಬೆಲೆ 123 ರೂ.ಗೆ ಏರಿಕೆಯಾಗಲಿದೆ. ಬಿಪಿ ದರ ಹಾಲಿ 123 ರೂ. ಇದ್ದು ಜನವರಿಯಿಂದ 159 ರೂ. ಆಗಲಿದೆ. 8ಪಿಎಂ ದರ ಹಾಲಿ 100 ರೂ. ಇದ್ದು 123 ರೂ.ಗೆ ಏರಲಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.