ಪ್ಯಾರೀಸ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ದೊಡ್ಡ ಮೋ ಸ; ಈ ಅನ್ಯಾಯ ನೋಡಿ ಸಿ ಡಿದೆದ್ದ ನರೇಂದ್ರ ಮೋದಿಜಿ
Aug 7, 2024, 18:40 IST
|
ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಮಹಿಳೆಯರ 50 ಕೆಜಿ ಮಹಿಳೆಯರ ಫ್ರೀ ಸ್ಟೈಲ್ ವಿಭಾಗದ ಫೈನಲ್ ಪ್ರವೇಶಿಸಿದ್ದ ವಿನೇಶ್ ಫೋಗಟ್ ಅವರು ತೂಕ ಹೆಚ್ಚಾದ ಕಾರಣಕ್ಕೆ ಫೈನಲ್ ಪಂದ್ಯದಿಂದ ಅನರ್ಹಗೊಂಡಿದ್ದಾರೆ. ನಿಯಮಗಳ ಪ್ರಕಾರ, ಪಂದ್ಯಕ್ಕೂ ಕೆಲವು ಗಂಟೆಗಳ ಮುನ್ನ ನಡೆದ ತೂಕ ಪರೀಕ್ಷೆಯ ವೇಳೆ, ವಿನೇಶ್ ಅವರು 50 ಕೆಜಿಗಿಂತ 150 ಗ್ರಾಂ ಜಾಸ್ತಿ ಇದ್ದಾಳೆಂಬ ಕಾರಣಕ್ಕಾಗಿ ಆಕೆಯನ್ನು ಫೈನಲ್ ಪಂದ್ಯದಿಂದ ಅನರ್ಹಗೊಳಿಸಲಾಗಿದೆ.
ದೂರದ ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ನ ಮಹಿಳೆಯರ 50 ಕೆಜಿ ವಿಭಾಗದ ಫ್ರೀ ಸ್ಟೈಲ್ ಕುಸ್ತಿಯ ಫೈನಲ್ ಪಂದ್ಯದಿಂದ ಅನರ್ಹಗೊಂಡ, ಭಾರತದ ಭರವಸೆಯ ಕುಸ್ತಿಪಟು ವಿನೇಶ್ ಫೋಗಟ್ ಅವರ ಹೃದಯ ವಿದ್ರಾವಕ ಕಥೆಯಿದು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂಥ ಪರಿಸ್ಥಿತಿ.
ಕನಿಷ್ಟ ಫೈನಲ್ ಪಂದ್ಯದಲ್ಲಿ ಗೆಲ್ಲಲಾಗದಿದ್ದರೂ ಆಕೆಗೆ ಬೆಳ್ಳಿ ಪದಕ ಖಂಡಿತವಾಗಿಯೂ ಒಲಿಯುತ್ತಿತ್ತು. ಆದರೆ, ಅಂಥ ಅವಕಾಶದಿಂದ ವಂಚಿತಳಾಗಿದ್ದು ಮಾತ್ರ ವಿಪರ್ಯಾಸ. ಅಸಲಿಗೆ, ಏನಾಗಿತ್ತು.. ಮೊದಲ ದಿನದ ಕುಸ್ತಿ ಪಂದ್ಯಕ್ಕೂ ಮುನ್ನ ನಡೆದಿದ್ದ ತೂಕ ಪರೀಕ್ಷೆಯಲ್ಲಿ 50 ಕೆಜಿ ತೂಗಿದ್ದ ಆಕೆ, ಎರಡನೇ ದಿನ ಪಂದ್ಯಕ್ಕೂ ಮುನ್ನ 52 ಕೆಜಿ ಆಗಿದ್ದು ಹೇಗೆ… ?
ಆಕೆಯ ತೂಕ ಹೆಚ್ಚಾಗಲು ಕಾರಣವೇನು ಎಂಬುದನ್ನು ತಿಳಿಯುವುದಕ್ಕಿಂತ ಮುಂಚೆ ಒಲಿಂಪಿಕ್ಸ್ ಕುಸ್ತಿಯಲ್ಲಿ ತೂಕ ಪರೀಕ್ಷೆಯ ನಿಯಮಗಳಲ್ಲಿ ಪ್ರಮುಖವಾದುವನ್ನು ತಿಳಿಯೋಣ. ಒಲಿಂಪಿಕ್ಸ್ ಕುಸ್ತಿ ವಿಭಾಗದಲ್ಲಿ ಯಾವುದೇ ನಿಗದಿತ ತೂಕದ ಕ್ಯಾಟಗರಿಯಲ್ಲಿ ನಡೆಯುವ ಸ್ಪರ್ಧೆಗಳು ಎರಡು ದಿನದಲ್ಲೇ ಮುಗಿಸಲಾಗುತ್ತದೆ. ಮೊದಲ ದಿನದಲ್ಲಿ ಆರಂಭಿಕ ಸುತ್ತುಗಳು, ಕ್ವಾರ್ಟರ್ ಫೈನಲ್ ಹಾಗೂ ಸೆಮಿಫೈನಲ್ ಪಂದ್ಯಗಳು ನಡೆಯುತ್ತವೆ. ಈ ವಿಭಾಗದಲ್ಲಿ ನಡೆಯುವ 2ನೇ ದಿನದಲ್ಲಿ ಸೆಮೀಸ್ ನಲ್ಲಿ ಸೋತವರ ಕಂಚಿನ ಪದಕದ ಪಂದ್ಯಗಳು ಹಾಗೂ ಸೆಮೀಸ್ ನಲ್ಲಿ ಗೆದ್ದವರಿಗೆ ಫೈನಲ್ ಪಂದ್ಯ ನಡೆಯುತ್ತದೆ.
ಇಲ್ಲಿ ವಿನೇಶ್ ಫೋಗಟ್ ಅವರು 2ನೇ ದಿನದ ತೂಕ ಇಳಿಕೆಗೂ ಮುನ್ನವೇ 52 ಕೆಜಿ ಆಗಿದ್ದರೆಂದು ಹೇಳಲಾಗಿದೆ. ಅದಕ್ಕೆ ಕಾರಣವಾಗಿದ್ದು, ಆಕೆ, 50 ಕೆಜಿ ಕ್ಯಾಟಗರಿಯ ಮೊದಲ ದಿನದ ಪಂದ್ಯಗಳಲ್ಲಿ ಸತತವಾಗಿ ಮೂರು ಪಂದ್ಯಗಳನ್ನಾಡಿ ತೀವ್ರವಾಗಿ ಸುಸ್ತಾಗಿದ್ದರಿಂದ ಅವರಿಗೆ ಎಲೆಕ್ಟ್ರೋಲೈಟ್ ಹೆಚ್ಚಿನ ಮಟ್ಟಿಗೆ ನೀಡಲಾಗಿತ್ತು. ಕೆಲವು ಪೌಷ್ಠಿಕ ಆಹಾರಗಳನ್ನು ನೀಡಲಾಗಿತ್ತು. ಅದರಿಂದಾಗಿ ಆಕೆಯ ತೂಕ ಗಣನೀಯವಾಗಿ ಹೆಚ್ಚಾಗಿತ್ತೆಂದು ಹೇಳಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.